More

    ಪೌರ ಕಾರ್ಮಿಕರಿಂದ ಧರಣಿ

    ಮೂಡಲಗಿ: ಪುರಸಭೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ನೇರ ವೇತನ ಜಾರಿಗೊಳಿಸುವಂತೆ ಆಗ್ರಹಿಸಿ ಪೌರ ಕಾರ್ಮಿಕರು ಪಟ್ಟಣದ ಪುರಸಭೆ ಕಾರ್ಯಾಲಯದ ಎದುರು ಶುಕ್ರವಾರದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.

    ಮುಷ್ಕರ ವೇಳೆ ಘನತ್ಯಾಜ್ಯ ವಸ್ತುಗಳ ಘಟಕ ಸಿಬ್ಬಂದಿ ಪ್ರಕಾಶ ಮಾರಿಹಾಳ ಮಾತನಾಡಿ, ಹೊರಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರು, ನೀರು ಸರಬರಾಜು ಸಿಬ್ಬಂದಿ, ಡೇಟಾ ಎಂಟ್ರಿ ಆಪರೇಟರ್, ಘನತ್ಯಾಜ್ಯ ವಸ್ತು ವಿಲೇವಾರಿಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಮತ್ತು ವಾಹನ ಚಾಲಕರು ಅನೇಕ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ನೇರವೇತನ ಪಾವತಿಸುವಂತೆ ಸಾಕಷ್ಟು ಬಾರಿ ಸರ್ಕಾರಕ್ಕೆ ರಾಜ್ಯದ ಪೌರಕಾರ್ಮಿಕರು ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪೌರಕಾರ್ಮಿಕರ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಅನಿವಾರ್ಯವಾಗಿ ಜು. 1ರಿಂದ ಪೌರಕಾರ್ಮಿಕರು ಪ್ರತಿನಿತ್ಯ ಮಾಡುವ ಕೆಲಸವನ್ನು ಬಿಟ್ಟು ಬೇಡಿಕೆಗಳು ಈಡೇರುವವರೆಗೂ ಅನಿರ್ದಿಷ್ಟಾವಧಿವರೆಗೆ ಸತ್ಯಾಗ್ರಹ ಮಾಡುತ್ತೇವೆ ಎಂದರು.

    ಪಾಂಡು ಮುತ್ತಗಿ, ನಾಗಪ್ಪ ತಪಸಿ, ಶಿವಬೋಧ ಕಪ್ಪಲಗುದ್ದಿ, ಲಕ್ಕಪ್ಪ ಗಾಜಿ, ಅಬ್ದುಲ್ ಪೀರಜಾದೆ, ಈರಪ್ಪ ಕಂಬಾರ, ಶಿವಲಿಂಗಪ್ಪ ಮಾಂಗ, ಯಶ್ವಂತ ಶಿದ್ಲಿಂಗಪ್ಪಗೋಳ, ಲಕ್ಕವ್ವ ಗಸ್ತಿ, ಸುಲೋಚನಾ ಸಣ್ಣಕ್ಕಿ, ಕಾಶವ್ವ ನಾಗನೂರ, ಸೇವಂತಾ ಗಸ್ತಿ, ದುರ್ಗವ್ವ ಗಾಡಿಕಾರ, ಎಲಿಶೆವ್ವ ಬಂಗೆನ್ನವರ, ನಿರ್ಮಲಾ ಗಸ್ತಿ, ಸುನೀತಾ ಮೇತ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts