More

    ಪುಸ್ತಕ ಮನುಷ್ಯನ ಉತ್ತಮ ಸ್ನೇಹಿತ

    ಬಸವಕಲ್ಯಾಣ: ಪುಸ್ತಕದಲ್ಲಿ ಜೀವನವಿದೆ. ಪುಸ್ತಕ ಮನುಷ್ಯನ ಉತ್ತಮ ಸ್ನೇಹಿತ ಹೌದು. ಹೀಗಾಗಿ ಪ್ರತಿಯೊಬ್ಬರೂ ಓದುವುದನ್ನು ನಿತ್ಯ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಕನರ್ಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ. ವಸಂತಕುಮಾರ ಸಲಹೆ ನೀಡಿದರು.

    ಸ್ಥಳೀಯ ಅನುಭವ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಅಮೃತ ಪುಸ್ತಕ ಮಾರಾಟ ಅಭಿಯಾನ ಮತ್ತು ಸಾಕ್ಷೃಚಿತ್ರ ಪ್ರದರ್ಶನ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಕಳೆದ 2ರಂದು ಕನ್ನಡದ ವಿಚಾರವಾದಿ ಎಚ್.ನರಸಿಂಹಯ್ಯ ಅವರಿಂದ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿದ್ಯುಕ್ತ ಚಾಲನೆ ಕಂಡಿದ್ದ ಈ ಅಭಿಯಾನ ಕಲ್ಯಾಣದಲ್ಲಿ ಸಮಾರೋಪ ಕಾಣುತ್ತಿರುವುದು ಸಂತಸ ತಂದಿದೆ ಎಂದರು.

    12ನೇ ಶತಮಾನದಲ್ಲಿ ಇಡೀ ಜಗತ್ತಿಗೆ ವಚನ ಸಾಹಿತ್ಯದ ಮೂಲಕ ಮನುಷ್ಯತ್ವದ ಪಾಠ ಹೇಳಿಕೊಟ್ಟ ಪುಣ್ಯಭೂಮಿ ಕಲ್ಯಾಣ. ವಿಶ್ವದ ಅಕಾಡೆಮಿಯಂತಿರುವ ಈ ಅನುಭವ ಮಂಟಪ ಮಹಾಮನೆಯಾಗಿದೆ ಎಂದು ಬಣ್ಣಿಸಿದರು.

    ಸಾನ್ನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠದ ಶ್ರೀ ಗುರುಬಸವ ಪಟ್ಟದ್ದೇವರು ಆಶೀರ್ವಚನ ನೀಡಿ, ಜ್ಞಾನ ಯಾರೂ ಕಸಿದುಕೊಳ್ಳದಂಥ ಅಮೂಲ್ಯ ಸಂಪತ್ತು. ಪುಸ್ತಕಗಳು ಮನುಷ್ಯನ ಜ್ಞಾನ ಮತ್ತು ಹೃದಯ ವೈಶಾಲ್ಯತೆ ಹೆಚ್ಚಿಸುವ ಜತೆಗೆ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿವೆ. ರಾಜ್ಯಾದ್ಯಂತ ಅಭಿಯಾನ ನಡೆಸಿ ಮನೆ-ಮನಕ್ಕೂ ಪುಸ್ತಕ ಮುಟ್ಟಿಸಿದ ಕೀತರ್ಿ ಸಾಹಿತ್ಯ ಅಕಾಡೆಮಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು.

    ಹಿರಿಯ ಸಾಹಿತಿ ಪಿ.ಜಿ. ಹಿರೇಮಠ ಸಮಾರೋಪ ಭಾಷಣ ಮಾಡಿ, ಭಾಷೆ, ಸಾಹಿತ್ಯ, ಪುಸ್ತಕದ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯ ಸಾಹಿತ್ಯ ಅಕಾಡೆಮಿ ಮಾಡುತ್ತಿರುವುದು ಶ್ಲಾಘನೀಯ. ಪುಸ್ತಕಗಳು ಜನರ ಮನೆ ಬಾಗಿಲಿಗೆ ತಲುಪಿಸುತ್ತಿರುವುದು ಬಹುದೊಡ್ಡ ಕೆಲಸ. ಇದು ಹೀಗೇ ಮುಂದುವರಿಯಲಿ. ಓದುಗರು, ಸಾಹಿತ್ಯಾಸಕ್ತರು ಪುಸ್ತಕಗಳನ್ನು ಖರೀದಿಸಿ ಓದುವುದರ ಮೂಲಕ ಇಂಥ ಅಭಿಯಾನಗಳಿಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

    ವಿಜಯಪುರದ ಹಿರಿಯ ಸಾಹಿತಿ ಡಿ.ಎನ್.ಅಕ್ಕಿ, ಅಕಾಡೆಮಿ ಸದಸ್ಯ ಸಂಚಾಲಕ ಡಾ.ಮಾರ್ಷಲ್ ಶರಾಂ ಹಾಗೂ ಸದಸ್ಯೆ ಛಾಯಾ ಭಗವತಿ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಶಾಂತಲಿಂಗ ಮಠಪತಿ, ಲೋಕೇಶ ಮೋಳಕೆರೆ, ವಿನೋದ ಪಾಟೀಲ್, ಈಶ್ವರ ರುಮ್ಮಾ, ರಂಗಸಮಾಜ ತಂಡದ ದಾಕ್ಷಾಯಿಣಿ ಭಟ್, ರಂಗಕಮರ್ಿ ನಟರಾಜ, ಪುಸ್ತಕ ಮಾರಾಟ ಅಭಿಯಾನದ ಜಾವೇದ್, ಮಂಜುನಾಥ, ಉದಯ್, ಪುನೀತ್ ಇದ್ದರು.

    ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್. ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಾತೃಭೂಮಿ ಸೇವಾ ಪ್ರತಿಷ್ಠಾನದ ಗುರುನಾಥ ರಾಜಗೀರಾ ನಿರೂಪಣೆ ಮಾಡಿದರು. ಸ್ಮೀತಾ ಮತ್ತು ಗಗನಶ್ರೀ ಕನ್ನಡದ ಗೀತೆಗಳ ನೃತ್ಯ ಗಮನ ಸೆಳೆಯಿತು.

    ಸಾಕ್ಷೃಚಿತ್ರ ಪ್ರದರ್ಶನ: ಅಮೃತ ಮಹೋತ್ಸವ ನಿಮಿತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿದ್ಧಪಡಿಸಿದ `ಭಾರತದ ಸ್ವಾತಂತ್ರೃ ಸಂಗ್ರಾಮದಲ್ಲಿ ಕನರ್ಾಟಕ’ (ತ್ಯಾಗ-ಬಲಿದಾನಗಳ ಕಥಾನಕ) ಎಂಬ 30 ನಿಮಿಷದ ಸಾಕ್ಷೃಚಿತ್ರ ಪ್ರದಶರ್ಿಸಲಾಯಿತು. ಬಳಿಕ 50 ಸಾವಿರ ರೂ. ಮೌಲ್ಯದ ಪುಸ್ತಕಗಳನ್ನು ಸಾಹಿತ್ಯಾಸಕ್ತರು, ವಿದ್ಯಾಥರ್ಿಗಳು ಹಾಗೂ ಸಾರ್ವಜನಿಕರು ಖರೀದಿಸಿದರು. ಭಾಲ್ಕಿ ಶ್ರೀ ಗುರುಬಸವ ಪಟ್ಟದ್ದೇವರು 15,435 ರೂ. ನೀಡಿ ಒಂದು ಸೆಟ್ ಪುಸ್ತಕಗಳ ಖರೀದಿ ಮಾಡಿದರು.

    2ರಿಂದ 29ರವರೆಗೆ ನಿರಂತರ ಅಭಿಯಾನ ನಡೆದಿದ್ದು, ಎಲ್ಲ ಜಿಲ್ಲೆಗಳಲ್ಲೂ ಸಂಚರಿಸಿ ಶರಣರ ಕಾಯಕ ಭೂಮಿ ಕಲ್ಯಾಣದಲ್ಲಿ ಸಮಾರೋಪಗೊಂಡಿದೆ. 60ಕ್ಕೂ ಹೆಚ್ಚು ಕಾಲೇಜು, 12 ವಿಶ್ವವಿದ್ಯಾಲಯ, 5ಕ್ಕೂ ಹೆಚ್ಚು ಸಾರ್ವಜನಿಕ ಸ್ಥಳಗಳಲ್ಲಿ ಪುಸ್ತಕಗಳನ್ನು ಮಾರಾಟ ಮಾಡಲಾಗಿದೆ. ಅಭಿಯಾನದಲ್ಲಿ 20 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯದ ಪುಸ್ತಕ ಮಾರಾಟವಾಗಿವೆ.
    | ಕರಿಯಪ್ಪ ಎನ್., ರಿಜಿಸ್ಟ್ರಾರ್, ಕನರ್ಾಟಕ ಸಾಹಿತ್ಯ ಅಕಾಡೆಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts