More

    ಪುರಾಣ, ಪ್ರವಚನ ಆಲಿಕೆಯಿಂದ ಅಂತರಂಗ ಶುದ್ಧ

    ಮುಂಡರಗಿ: ಶ್ರಾವಣ ಮಾಸದಲ್ಲಿ ಪುರಾಣ ಮತ್ತು ಪ್ರವಚನ ಆಲಿಸುವ ಮೂಲಕ ನಮ್ಮ ಆತ್ಮ ಮತ್ತು ಅಂತರಂಗವನ್ನು ಶುದ್ಧಗೊಳಿಸಿಕೊಳ್ಳಬೇಕು ಎಂದು ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

    ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಠದಲ್ಲಿ ಬುಧವಾರ ಏರ್ಪಡಿಸಿದ್ದ ಶರಣಗಣ ಅಮೃತವಾಣಿ ಪ್ರವಚನದ ಮುಕ್ತಾಯ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ಕರೊನಾ ಸೋಂಕು ತೀವ್ರವಾಗಿ ಹರಡುತ್ತಿರುವ ಸಂಕಷ್ಟ ಸಮಯದಲ್ಲಿ ಮಠದ ಭಕ್ತರು ಹಾಗೂ ಅಭಿಮಾನಿಗಳು ಪ್ರವಚನ ಸೇವಾ ಸಮಿತಿಯ ಸಹಕಾರದೊಂದಿಗೆ ಸಾಮಾಜಿಕ ಜಾಲತಾಣ ಬಳಸಿ ತಿಂಗಳ ಪರ್ಯಂತ ಪ್ರವಚನ ಬಿತ್ತರಿಸಿರುವು ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು.

    ಹೂವಿನಶಿಗ್ಲಿಯ ಶ್ರೀ ಚನ್ನವೀರ ಸ್ವಾಮೀಜಿ ಆಶೀರ್ವಚನ ನೀಡಿ, ಅನ್ನ, ನೀರು, ಆಶ್ರಯ, ಬಟ್ಟೆ ಮೊದಲಾದವುಗಳು ಬಹಿರಂಗದ ಸಂಪತ್ತುಗಳಾಗಿದ್ದು, ಅವುಗಳನ್ನು ಯಾರು ಬೇಕಾದರೂ ಗಳಿಸಬಹುದು. ಆದರೆ, ಅಂತರಂಗ ಶುದ್ಧಗೊಳಿಸುವ ಧ್ಯಾನ, ದಾನ, ಪ್ರಾರ್ಥನೆ, ಮೌನ ಮೊದಲಾದವುಗಳನ್ನು ಎಲ್ಲರೂ ಗಳಿಸಲಾಗುವುದಿಲ್ಲ. ಆದ್ದರಿಂದ ಭಕ್ತರು ಮಠಗಳಲ್ಲಿ ಜರುಗುವ ಪುರಾಣ ಪುಣ್ಯಕಥೆಗಳನ್ನು ಆಲಿಸಿ, ಅಂತರಂಗ ಶುದ್ಧಿ ಮಾಡಿಕೊಳ್ಳಬೇಕು ಎಂದರು.

    ಡಾ. ನಿಂಗು ಸೊಲಗಿ ಮಾತನಾಡಿದರು. ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ, ಪ್ರಾಚಾರ್ಯರಾದ ಡಾ.ಡಿ.ಸಿ. ಮಠದ, ಸಿ.ಎಸ್. ಅರಸನಾಳ, ಎಸ್.ಬಿ.ಕೆ. ಗೌಡರ, ರಾಮಸ್ವಾಮಿ ಹೆಗ್ಗಡಾಳ, ಆರ್.ಆರ್. ಇನಾಮದಾರ, ಡಾ.ವನಜಾಕ್ಷಿ ಭರಮಗೌಡ್ರ, ಭಾಗ್ಯಲಕ್ಷ್ಮೀ ಇನಾಮತಿ, ಪವನ ಮೇಟಿ, ಬಸವರಾಜ ದೇಸಾಯಿ, ಎಸ್.ಬಿ. ಹಿರೇಮಠ, ಎಸ್.ಆರ್. ಬಸಾಪೂರ, ಎಸ್.ಸಿ. ಚಕ್ಕಡಿಮಠ, ಚೇತನಾ ಹಿರೇಮಠ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts