More

    ಪುಣೆ- ಹುಬ್ಬಳ್ಳಿ ನಿತ್ಯ ವಿಮಾನ ಸೇವೆ, ಮಾರ್ಚ್ 13ರಿಂದ ಹಾರಾಟ ಆರಂಭ

    ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ವಿಮಾನ ಸಂಪರ್ಕ ಇನ್ನಷ್ಟು ಬಲಗೊಳ್ಳಲಿದೆ. ಹುಬ್ಬಳ್ಳಿ- ಪುಣೆ ನೇರ ವಿಮಾನಯಾನ ಇನ್ನು ನಿತ್ಯವೂ ಲಭ್ಯವಾಗಲಿದೆ.

    ಈ ವರೆಗೆ ವಾರದ ಕೆಲವೇ ದಿನ ಇದ್ದ ಸೌಲಭ್ಯ ಮಾರ್ಚ್ 13ರಿಂದ ನಿತ್ಯವೂ ಸಿಗಲಿದೆ. ಪುಣೆಗೆ ವಿಮಾನಯಾನ ಸೌಕರ್ಯವನ್ನು ನಿತ್ಯವೂ ಕಲ್ಪಿಸಲು ಇಂಡಿಗೋ ಸಂಸ್ಥೆ ಸಿದ್ಧತೆ ಮಾಡಿಕೊಂಡಿದೆ.

    ಇಂಡಿಗೋ ವಿಮಾನವು ಹುಬ್ಬಳ್ಳಿಯಿಂದ ನಿತ್ಯ ಸಂಜೆ 6.30ಕ್ಕೆ ಬಿಡಲಿದ್ದು, ಪುಣೆಯನ್ನು 7.35ಕ್ಕೆ ತಲುಪಲಿದೆ. ಇದೇ ರೀತಿ ವಿಮಾನವು ಪುಣೆಯನ್ನು ರಾತ್ರಿ 8ಕ್ಕೆ ಬಿಟ್ಟು 9.05ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ.

    ಹುಬ್ಬಳ್ಳಿ-ಪುಣೆ ನಿತ್ಯ ವಿಮಾನಯಾನ ಸೇವೆ ಕಲ್ಪಿಸಲು ನೆರವಾದ ಕೇಂದ್ರ ಸಚಿವರಾದ ರಾಜನಾಥ ಸಿಂಗ್, ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕೃತಜ್ಞತೆಗಳು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts