More

    ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ ಹತ್ತಿಕುಣಿ ಅವಿರೋಧವಾಗಿ ಆಯ್ಕೆ


    ಯಾದಗಿರಿ: ಇಲ್ಲಿನ ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್ಡಿ) ಬ್ಯಾಂಕ್ ಅಧ್ಯಕ್ಷರಾಗಿ ಮಲ್ಲನಗೌಡ ಪಾಟೀಲ್ ಹತ್ತಿಕುಣಿ ಅವಿರೋಧವಾಗಿ ಆಯ್ಕೆಯಾದರು.

    ಸುದರ್ಶನ ಪಾಟೀಲ್ ಜೈಗ್ರಾಂ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನದ ಎರಡನೇ ಅವಗೆ ಸೋಮವಾರ ಚುನಾವಣೆ ನಡೆಯಿತು. 16 ಜನ ಸದಸ್ಯ ಬಲದ ಇಲ್ಲಿನ ಪಿಎಲ್ಡಿ ಬ್ಯಾಂಕ್ನಲ್ಲಿ 6 ಬಿಜೆಪಿ, 4 ಕಾಂಗ್ರೆಸ್, 5 ಜೆಡಿಎಸ್ ಸದಸ್ಯ ಇದ್ದಾರೆ. ಮಲ್ಲನಗೌಡ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಕಾರಿಯಾಗಿದ್ದ ಕಲಬುರಗಿ ಸಹಕಾರ ಸಂಘಗಳ ಜಂಟಿ ನಿಬಂಧಕ ಅನಿಲಕುಮಾರ್ ಘೋಷಿಸಿದರು.

    ನಂತರ ನಡೆದ ವಿಜಯೋತ್ಸವದಲ್ಲಿ ಮಾತನಾಡಿದ ಹತ್ತಿಕುಣಿ, ಸತತ 4ನೇ ಬಾರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಗ್ರಾಮೀಣ ಭಾಗದಲ್ಲಿ ರೈತರ ಕಲ್ಯಾಣಕ್ಕೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು, ಅನ್ನದಾತರ ಏಳಿಗೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.

    ವಿಶ್ವನಾಥ ನೀಲಹಳ್ಳಿ, ಸೋಮು ಮಸ್ಕನಳ್ಳಿ, ಮರೆಪ್ಪ, ದಶರಥರಾಮರಡ್ಡಿ, ಮರೆಮ್ಮ ಮುಂಡರಗಿ, ಜಂಬಲಮ್ಮ ಅರಿಕೇರಾ, ಆರ್.ಮಹಾದೇವಪ್ಪಗೌಡ, ಬನ್ನಪ್ಪ ಹಳಿಗೇರಾ, ತಿಮ್ಮಣ್ಣ ಸೈದಾಪುರ, ಶ್ರೀಧರರಡ್ಡಿ ರಾಮಣ್ಣ ಕೊಟಗೇರಾ, ಮುಖಂಡರಾದ ಖಂಡಪ್ಪ ದಾಸನ್, ಶರಣಗೌಡ ಬಾಡಿಯಾಳ, ಯುಡಾ ಅಧ್ಯಕ್ಷ ರುದ್ರಗೌಡ, ವಿಲಾಸ್ ಪಾಟೀಲ್, ಸ್ವಾಮಿದೇವ ದಾಸನಕೇರಿ, ಬಸವರಾಜ ಚಂಡರಕಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts