More

    ಪಿಎಫ್ಐ, ಎಸ್ಡಿಪಿಐ ಸಂಘಟನೆಗಳ ನಿಷೇಧಕ್ಕೆ ಆಗ್ರಹ

    ಯಾದಗಿರಿ: ದೇಶದಲ್ಲಿ ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆಗಳನ್ನು ಕೂಡಲೇ ನಿಷೇಸುವಂತೆ ಆಗ್ರಹಿಸಿ ಶ್ರೀರಾಮಸೇನೆ ಕಾರ್ಯಕರ್ತರು ಶುಕ್ರವಾರ ನಗರದ ಜಿಲ್ಲಾಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

    ಜಿಲ್ಲಾ ಪ್ರಧಾನ ಕಾರ್ಯದರ್ಶಿಶಶಾಂಕ ನಾಯಕ ಮಾತನಾಡಿ, ದೇಶದಲ್ಲಿ ಈ ಸಂಘಟನೆಗಳು 2047ರ ವೆಳೆಗೆ ಇಸ್ಲಾಮಿಕರಣಗೊಳಿಸುವುದು, ಸಂವಿಧಾನ ರಾಷ್ಟ್ರಧ್ವಜ, ದಲಿತರನ್ನು ಮುಂಚೂಣಿಯಲ್ಲಿ ಉಪಯೋಗಿಸಿ ಇಸ್ಲಾಂ ರಾಷ್ಟ್ರ ಘೋಷಣೆ ಮಾಡುವುದು. ಸಮಾಜ ದ್ರೋಹಕ್ಕಾಗಿ ದೇಶ ದ್ರೋಹಕ್ಕಾಗಿ ಆಂತರಿಕ ಸೈನಿಕ ಶಕ್ತಿಯನ್ನು ಪಿಎಫ್ಐ ನಿರ್ಮಿಸಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮಾಜಿ ಸಿಎಂ ಅಚ್ಯುತನ್ ಇಬ್ಬರು ಪಿಎಫ್ಐ ಸಂಘಟನೆಗಳ ಸಂಪರ್ಕದಲ್ಲಿದ್ದ ಕಾರಣಕ್ಕೆ ಕೇಂದ್ರಕ್ಕೆ ಈ ಸಂಘಟನೆಯನ್ನು ನಿಷೇಸುವಂತೆ ಮುಖಂಡರು ಪತ್ರ ಬರೆದಿರುವುದೇ ಸಾಕ್ಷಿ ಎಂದರು.

    ಸಿಎಎ, ಎನ್ಆರ್ಸಿ ಮತ್ತು ರೈತರ ಹೋರಾಟ ಹಾಗೂ ರಾಜ್ಯದ ಅನೇಕ ಜಿಲ್ಲೆಗಳಲ್ಲಿನ ಹಿಂಸಾತ್ಮಕ ಗಲಭೆಗಳಲ್ಲಿ ಪಿಎಫ್ಐ ಹಾಗೂ ಎಸ್ಡಿಪಿಐ ಪಾತ್ರ ಇದೆ ಅನುಮಾನ ಕಾಡುತ್ತಿದೆ. 1947 ರಲ್ಲಿ ಮುಸ್ಲಿಂಲೀಗ್ ದೇಶ ತುಂಡರಿಸಿ ಪಾಕ್ ನಿರ್ಮಿಸಿತು. ಈಗ ಎರಡೂ ಸಂಘಟನೆಗಳು ಭಾರತವನ್ನೇ ಇಸ್ಲಾಮಿಕರಣಗೊಳಿಸುವ ಷಡ್ಯಂತ್ರ ರಚಿಸಿವೆ. ದೇಶ ಹಾಗೂ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಹಿಂದು ಕಾರ್ಯಕರ್ತರ ಕೊಲೆ ಬಹುತೇಕ ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆಗಳ ಕೈವಾಡ ಸಾಬೀತಾಗಿದೆ ಎಂದು ಆರೋಪಿಸಿದರು.

    ಜಿಲ್ಲಾ ಉಪಾಧ್ಯಕ್ಷ ಅಂಬ್ರೇಷ್ ತಡಿಬಿಡಿ, ತಾಲೂಕು ಅಧ್ಯಕ್ಷ ಸಂದೀಪ ಮಹೇಂದ್ರಕರ್, ನಗರಾದ್ಯಕ್ಷ ಹಣಮಂತ್ರಾಯ ಪಾಟೀಲ್, ಮಲ್ಲಿಕಾಜರ್ುನ ವರ್ಕನಳ್ಳಿ, ವಿಶ್ವ ಹಕಿಮ್, ರಘುರಾಮ್, ರಾಕೇಶ ನಾಯಕ, ಅನಿಲ್ ಸಾಹು, ಬಸವರಾಜ ಜಡಿ, ಆಕಾಶ, ಮನೋಹರ ಕಲ್ಬುಗರ್ಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts