More

    ಪಿಎಚ್ಸಿ ಸಿಬ್ಬಂದಿ ಕಾರ್ಯವೈಖರಿಗೆ ಕಿಡಿ

    ಕಮಲಾಪುರ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯ ಕಾರ್ಯವೈಖರಿಗೆ ಶಾಸಕ ಬಸವರಾಜ ಮತ್ತಿಮೂಡ ಗರಂ ಆಗಿದ್ದಾರೆ.
    ಕಿಣ್ಣಿ ಸರಪೋಸ್ ತಾಂಡಾದ ರೈತನೊಬ್ಬ ಸಾಲಬಾಧೆಯಿಂದಾಗಿ ಗುರುವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದ, ಈತನ ಮೃತ ದೇಹವನ್ನು ಪೋಸ್ಟ್ ಮಾರ್ಟಮ್ಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತರಲಾಗಿತ್ತು. ಆದರೆ ಕೇಂದ್ರದಲ್ಲಿ ಯಾರೊಬ್ಬರೂ ಸಿಬ್ಬಂದಿ ಇರದಿರುವುದರಿಂದ ಸಮಸ್ಯೆ ಅನುಭವಿಸುವಂತಾಯಿತು.
    ವಿಷಯ ತಿಳಿಯುತ್ತಿದ್ದಂತೆ ಶಾಸಕ ಮತ್ತಿಮೂಡ ಆಸ್ಪತ್ರೆಗೆ ಆಗಮಿಸಿ, ಆರೋಗ್ಯ ಕೇಂದ್ರದ ಅವ್ಯವಸ್ಥೆಗೆ ಕಿಡಿಕಾರಿದರು. ತಕ್ಷಣ ಡಿಎಚ್ಒ ಅವರಿಗೆ ಕರೆ ಮಾಡಿ ಪೋಸ್ಟ್ ಮಾರ್ಟಮ್ಗೆ ವ್ಯವಸ್ಥೆ ಮಾಡುವಂತೆ ತಾಕೀತು ಮಾಡಿದರು. ಸ್ವತಃ ಡಿಎಚ್ಒ ಜಬ್ಬರ್ಖಾನ್ ಅವರು ಸಹಾಯಕರೊಂದಿಗೆ ಸ್ಥಳಕ್ಕಾಗಮಿಸಿ ಪೋಸ್ಟ್ ಮಾರ್ಟನಗೆ ವ್ಯವಸ್ಥೆ ಮಾಡಿದರು.
    ತಹಸೀಲ್ದಾರ್ ಅಂಜುಮ್ ತಬಸುಮ್, ಎಪಿಎಂಸಿ ಉಪಾಧ್ಯಕ್ಷ ರಾಜಕುಮಾರ ಕೋಟೆ, ಪಿಎಸ್ಐ ಪರಶುರಾಮ, ಮುಖಂಡರಾದ ಶಿವಕುಮಾರ ಪಸಾರ, ನಿಂಗಪ್ಪ ಪ್ರಬುದ್ದಕರ್, ಸಾಗರ ಗುತ್ತೇದಾರ್, ಶಿವಕುಮಾರ ದೋಶೆಟ್ಟಿ, ವಿಜಯಕುಮಾರ್ ಪವಾರ, ರಘುನಂದನ ದ್ಯಾಮಣಿ, ಬಸವರಾಜ ಕಟ್ಟೋಳಿ ಇದ್ದರು.

    ಹಾನಿ ಪ್ರದೇಶಗಳಿಗೆ ಶಾಸಕ ಮತ್ತಿಮೂಡ ಭೇಟಿ
    ಮಳೆಯಿಂದಾಗಿ ಹಾನಿ ಸಂಭವಿಸಿದ ಗೊಬ್ಬೂರವಾಡಿ, ರಾಜನಾಳ, ಓಕಳಿ, ಮತ್ತಿತರ ಗ್ರಾಮಗಳಿಗೆ ಶಾಸಕ ಬಸವರಾಜ ಮತ್ತಿಮೂಡ ಭೇಟಿ ನೀಡಿ ಪರಿಸೀಲಿಸಿದರು. ಹಾನಿ ಸಂಭವಿಸಿದ ರೈತರಿಗೆ ಸೂಕ್ತ ಪರಿಹಾರ ದೊರಕಿಸಿ ಕೊಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ನಿರಂತರ ಮಳೆಯಿಂದ ಶಿಥಿಲಾವಸ್ಥೆ ತಲುಪಿರುವ ಬಾಚನಾಳದ ಸೇತುವೆಗೂ ಭೇಟಿ ನೀಡಿ, ನವೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts