More

    ಪಾಳು ಬಿದ್ದಂತಾದ ಎಪಿಎಂಸಿ

    ಮೂಡಲಗಿ, ಬೆಳಗಾವಿ: ಕೃಷಿ ಇಲಾಖೆಯು ರೈತರು ಬೆಳದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಸಲುವಾಗಿ ರಾಜ್ಯಾದ್ಯಂತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸ್ಥಾಪಿಸಿದೆ. ಆದರೆ. ರೈತರಿಗೆ ವರದಾನವಾಗಬೇಕಿದ್ದ ಮೂಡಲಗಿ ಪಟ್ಟಣದ ಎಪಿಎಂಸಿ ಉಪ ಮಾರುಕಟ್ಟೆ ಇದ್ದೂ ಇಲ್ಲದಂತಾಗಿದ್ದು, ಅನೈತಿಕ ಚುಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

    ಉಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳು ಒಂದು ಕಡೆಯಾದರೆ ಮತ್ತೊಂದು ಕಡೆ ಮಾರುಕಟ್ಟೆ ನಿರ್ವಹಣೆ ಇಲ್ಲದೆ ಕತ್ತಲಾದಂತೆಲ್ಲ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಕುಡುಕರ ಹಾವಳಿ ಮಿತಿ ಮೀರಿದ್ದು, ಎಲ್ಲಿ ನೋಡಿದರೂ ಗಾಜಿನ ಚೂರುಗಳೇ ಬಿದ್ದಿವೆ. ಎಪಿಎಂಸಿಯ ವಿದ್ಯುತ್ ದೀಪಗಳು ಸಹ ಹಾಳಾಗಿದ್ದು ಇದರಿಂದ ಎಪಿಎಂಸಿ ಆವರಣ ಕತ್ತಲಿನಿಂದ ಕೊಡಿದೆ. 2020-21ನೇ ವಾರ್ಷಿಕ ಕ್ರಿಯಾ ಯೋಜನೆಯಡಿ ಅತಿಥಿ ಗೃಹ ನಿರ್ಮಾಣಗೊಂಡರೂ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ದಕ್ಕದೆ ಪಾಳು ಬಿದ್ದ ಮನೆಯಂತಾಗಿದೆ.

    ಸುಮಾರು 50 ಲಕ್ಷ ರೂ.ಖರ್ಚು ಮಾಡಿ ನಿರ್ಮಾಣ ಮಾಡಿರುವ ಅತಿಥಿ ಗೃಹಕ್ಕೆ ಒಂದು ವರ್ಷ ಗತಿಸಿದರೂ ಉದ್ಘಾಟನೆ ಭಾಗ್ಯ ಸಿಗದೆ ಕಿಟಕಿಯ ಗಾಜುಗಳು ಒಡೆದಿವೆ. ಉಪ ಮಾರುಕಟ್ಟೆ ಆವರಣದಲ್ಲಿ ದಿವಾಣಿ ಹಾಗೂ ಜೆಎಂಎಫ್ ನ್ಯಾಯಾಲಯ ಇದ್ದರೂ ರಾತ್ರಿ ವೇಳೆಯಲ್ಲಿ ಅನೈತಿಕ ಚುಟುವಟಿಕೆ ನಡೆಯುತ್ತಿವೆ. ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ. ಇನ್ನಾದರೂ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಪೊಲೀಸ್ ಅಧಿಕಾರಿಗಳು ಉಪ ಮಾರುಕಟ್ಟೆಯನ್ನು ಸಮಸ್ಯೆಗಳಿಂದ ಮುಕ್ತಗೊಳಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts