More

    ಪಾರ್ಟ್​ ಟೈಮ್​ ಬಿಸಿನೆಸ್​ ಹೆಸರಲ್ಲಿ 1.14 ಲಕ್ಷ ರೂ. ಗುಳುಂ !


    ಹುಬ್ಬಳ್ಳಿ: ಪಾರ್ಟ್​ ಟೈಮ್​ ಬಿಸಿನೆಸ್​ ಮೂಲಕ ಪ್ರತಿನಿತ್ಯ 1,000 ರೂ.ನಿಂದ 9,000 ರೂ.ವರೆಗೆ ಗಳಿಸಬಹುದು ಎಂದು ಧಾರವಾಡದ ಯುವಕನೊಬ್ಬನ ವಾಟ್ಸ್​ ಆ್ಯಪ್​ಗೆ ಸಂದೇಶ ಕಳುಹಿಸಿ, ಆತನಿಂದ 1,14,700 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
    ಧಾರವಾಡದ ಮುಜಮಿಲ್​ ಅಹಮ್ಮದ್​ ಎಂಬುವರಿಗೆ ಜು.11ರಂದು ಅಪರಿಚಿತರು ವಾಟ್ಸ್​ ಆ್ಯಪ್​ ಮೂಲಕ ಸಂದೇಶ ಕಳುಹಿಸಿದ್ದರು. ಪಾರ್ಟ್​ ಟೈಮ್​ ವ್ಯವಹಾರದ ಮೂಲಕ ಪ್ರತಿದಿನ 1ರಿಂದ 9 ಸಾವಿರ ರೂ.ವರೆಗೆ ಗಳಿಸಬಹುದು ಎಂದು ತಿಳಿಸಿದ್ದರು. ಲಿಂಕ್​ವೊಂದನ್ನು ಕಳುಹಿಸಿ ನೋಂದಾಯಿಸಿದ್ದರು. ನಂತರ 200 ರೂ. ಹೂಡಿಕೆ ಮಾಡಿಸಿಕೊಂಡು 396 ರೂ. ಲಾಭ ತೋರಿಸಿದ್ದರು. 10 ಸಾವಿರ ರೂ.ಗೆ 13,776 ರೂ. ಲಾಭ ತೋರಿಸಿದ್ದರು. ಹೀಗೆ ವಿವಿಧ ರೀತಿಯ ಟಾಸ್ಕ್​ಗಳನ್ನು ನೀಡಿ ಹಂತ ಹಂತವಾಗಿ ಹಣ ಹೂಡಿಕೆ ಮಾಡಿಸಿಕೊಂಡಿದ್ದರು.
    ಮತ್ತೊಂದು ನಂಬರ್​ನಿಂದ ಕರೆ ಮಾಡಿ ಕೆಲಸ ಕೊಡುತ್ತೇವೆ ಎಂದು ವಿವಿಧ ಶುಲ್ಕದ ನೆಪದಲ್ಲಿ ಹಣ ವರ್ಗಾಯಿಸಿಕೊಂಡಿದ್ದಾರೆ. ಈ ಕುರಿತು ಸೈಬರ್​ ಕೆಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts