More

    ಪಾರದರ್ಶಕ ಚುನಾವಣೆಗೆ ಸಜ್ಜಾಗಿ


    ಯಾದಗಿರಿ: ವಿಧಾನಸಭಾ ಚುನಾವಣೆ ಪಾರದರ್ಶಕವಾಗಿ ನಡೆಯಲು ಅನುಕೂಲವಾಗುವಂತೆ ಮಾದರಿ ನೀತಿ ಸಂಹಿತೆ ಪರಿಣಾಮಕಾರಿ ಜಾರಿಗೆ ನಿಗಾವಹಿಸುವಂತೆ ಜಿಪಂ ನೂತನ ಸಿಇಒ ಗರಿಮಾ ಪನ್ವಾರ ಸಂಬಂಸಿದ ಅಕಾರಿಗಳಿಗೆ ಸೂಚಿಸಿದರು.

    ಶನಿವಾರ ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಚುನಾವಣೆ ಹಿನ್ನೆಲೆ ಮಾದರಿ ನೀತಿ ಸಂಹಿತೆ ಕುರಿತು ಜಿಲ್ಲಾ ಮಟ್ಟದ ಅಕಾರಿಗಳೊಂದಿಗೆ ಸಭೆ ನಡೆಸಿ, ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಯಬೇಕು. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತೀವ್ರ ನಿಗಾ ಇಡುವಂತೆ ನಿದರ್ೇಶನ ನೀಡಿದರು.

    ಈಗಾಗಲೇ ಎಂಸಿಸಿ ತಂಡಗಳನ್ನು ರಚಿಸಲಾಗಿದ್ದು, ಚೆಕ್ಪೋಸ್ಟ್ ಸೇರಿದಂತೆ ಹೊರ ಜಿಲ್ಲೆಗಳಿಂದ ಬರುವ ವಾಹನಗಳನ್ನು ತಪಾಸಣೆ ನಡೆಸಬೇಕು. ನೀತಿ ಸಂಹಿತೆ ಪ್ರಕರಣ ಕಂಡು ಬಂದ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು. ಜಿಪಂ ಯೋಜನಾಕಾರಿ ಡಾ.ಟಿ.ರೋಣಿ, ಯೋಜನಾ ನಿದರ್ೇಶಕ ಲಕ್ಷ್ಮಣ ಶೃಂಗೇರಿ, ಮುಖ್ಯ ಲೆಕ್ಕಾಕಾರಿ ಜಯಾಂಬಿಕ , ಜಂಟಿ ಕೃಷಿ ನಿದರ್ೇಶಕ ಅಭಿದ್ ಎಸ್, ಜಿಲ್ಲಾ ಆರೋಗ್ಯಾಕಾರಿ ಡಾ.ಗುರುರಾಜ ಹಿರೇಗೌಡ, ಆಯುಷ್ ಅಕಾರಿ ಡಾ.ವಂದನಾ ಗಾಳಿಯವರ್, ಭೂ ವಿಜ್ಞಾನ ಇಲಾಖೆ ಯ ಹಿರಿಯ ವಿಜ್ಞಾನಿ ಡಾ.ಪುಷ್ಪ್ಪಾವತಿ, ಕಾಮರ್ಿಕ ಇಲಾಖೆ ಅಕಾರಿ ಉಮಾಶ್ರೀ ಕೋಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕಿ ಉತ್ತರಾದೇವಿ ಮಠಪತಿ, ಕ್ರೀಡಾ ಅಕಾರಿ ರಾಜು ಬಾವಿಹಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts