More

    ಪರೋಪಕಾರಿ ಜೀವನದಿಂದ ನೆಮ್ಮದಿ

    ಜೇವರ್ಗಿ: ಪ್ರತಿ ಮನುಷ್ಯ ತಮ್ಮ ಜೀವನದಲ್ಲಿ ಮತ್ತೊಬ್ಬರ ಕಷ್ಟಕ್ಕೆ ನೆರವಾಗಿ, ಪರೋಪಕಾರಿ ಜೀವನ ನಡೆಸಬೇಕು. ಪ್ರತಿಯೊಬ್ಬರು ಬದುಕಿನಲ್ಲಿ ಸದ್ಗುಣ, ಸದಾಚಾರ ಅಳವಡಿಸಿಕೊಂಡರೆ, ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದು ಶಹಾಪುರ ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ಹೇಳಿದರು.
    ಗುಡೂರ (ಎಸ್.ಎ) ಗ್ರಾಮದ ಶ್ರೀಮಹಾಲಕ್ಷ್ಮೀ ಜಾತ್ರೆ ನಿಮಿತ್ತ ಹಮ್ಮಿಕೊಂಡ ದೇವಿ ಪುರಾಣದಲ್ಲಿ ಮಾತನಾಡಿದ ಅವರು, ಧಮರ್ಾಚರಣೆಗಳು ಬದುಕಿನ ಅವಿಭಾಜ್ಯ ಅಂಗಗಳಾಗಬೇಕು. ಸಾತ್ವಿಕ ಆಹಾರ, ಸತ್ಯ ಶುದ್ಧ ಕಾಯಕ ಮೈಗೂಡಿಸಿಕೊಳ್ಳಬೇಕು. ಮನುಷ್ಯ ತನ್ನಲ್ಲಿ ಅಡಗಿದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ತೊಡೆದು ಹಾಕಿದಾಗ ಸಮಾಜಮುಖಿ ಜೀವನ ನಡೆಸಲು ಸಾಧ್ಯ ಎಂದರು.
    ಕಟ್ಟಿಸಂಗಾವಿಯ ಶ್ರೀ ಸಿದ್ಧಯ್ಯಪ್ಪ ಸ್ವಾಮೀಜಿ, ಶ್ರೀ ಗುರುಲಿಂಗಯ್ಯ ಸ್ವಾಮಿ ಹಿರೇಮಠ ಗುಡೂರ ಸಾನ್ನಿಧ್ಯ ವಹಿಸಿದ್ದರು. ಫೆ.7 ರಿಂದ 15 ರವರೆಗೆ ನಿತ್ಯ ಸಂಜೆ 7 ರಿಂದ 9.30ರವರೆಗೆ ದೇವಿ ಪುರಾಣ ನಡೆಯಲಿದೆ.
    ಪ್ರಮುಖರಾದ ಮಲ್ಲಣ್ಣಗೌಡ ಮಾಲಿ ಪಾಟೀಲ್, ಧನಂಜಯಗೌಡ ಪಾಟೀಲ್, ನಾಗಣ್ಣ ಹೆಗ್ಗಣಿ, ರಾಯಗುಂಡಪ್ಪ ಕುಸನೂರ, ಸಿದ್ದು ಮುರಳಿ, ಸಿದ್ದಣ್ಣ ಹೆಗ್ಗಣಿ, ಮೈಲಾರಿ ಯನಗುಂಟಿ, ನಿಂಗಣ್ಣ ಪೂಜಾರಿ, ಬಸವರಾಜ ದಳಪತಿ, ಸಿದ್ಧಣ್ಣ ಹವಾಲ್ದಾರ್, ರಾಚೋಟಿ ಕಲ್ಕಂ, ಅಯ್ಯಣ್ಣಗೌಡ ಪಾಟೀಲ್, ಮಲ್ಲಪ್ಪ ದರ್ಶನಾಪುರ, ಈರಣ್ಣ ಜವಳಿ, ಶರಬಣ್ಣ ಸಾಹು ವಿಶ್ವಕರ್ಮ, ಮಲ್ಲಣ್ಣ ವಿಶ್ವಕರ್ಮ, ಮುನಿಯಪ್ಪ ವಿಶ್ವಕರ್ಮ, ಪ್ರಕಾಶ ವಿಶ್ವಕರ್ಮ ಇತರರಿದ್ದರು. ಗವಾಯಿ ಶಿವಣ್ಣ ವಿಶ್ವಕರ್ಮ, ಗುಂಡಣ್ಣ ಸೊನ್ನ ಸಂಗೀತ ಸೇವೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts