More

    ಪರಿಸರ ಸಂರಕ್ಷಣೆ ಕಾರ್ಯ ಶ್ಲಾಘನೀಯ

    ಜೊಯಿಡಾ: ವಿಶ್ವ ಪರಿಸರ ಸಂರಕ್ಷಣೆಯ ದಿನದಂದು ಸಸಿ ನೆಡುವ ಮೂಲಕ ಪತ್ರಿಕಾ ದಿನ ಆಚರಿಸುತ್ತಿರುವುದು ಉತ್ತಮ ಕಾರ್ಯ. ಇಂಥ ಕಾರ್ಯಕ್ರಮಗಳ ಮೂಲಕ ಪತ್ರಕರ್ತರು ಪರಿಸರ ಸಂರ ಕ್ಷಣೆಯ ಭಾಗವಾಗುತ್ತಿರುವುದು ಸಂತಸ ತಂದಿದೆ ಎಂದು ಜೊಯಿಡಾ ತಹಸೀಲ್ದಾರ್ ಸಂಜಯ ಕಾಂಬಳೆ ಹೇಳಿದರು.

    ಜೊಯಿಡಾದ ಸಾಲು ಮರದ ತಿಮ್ಮಕ್ಕ ಉದ್ಯಾನದಲ್ಲಿ ಜೊಯಿಡಾ ಪ್ರೆಸ್ ಮತ್ತು ಅರಣ್ಯ ಇಲಾಖೆ ಸಹಕಾರದಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು.

    ರವಿ ರೇಡ್ಕರ ಮಾತನಾಡಿ, ಒಂದು ಸಸಿ ನೆಟ್ಟರೆ ಅದು ಮುಂದೆ ಮರವಾಗಿ ಬೆಳೆದು ಶುದ್ಧ ಗಾಳಿ, ಮಣ್ಣಿನ ಪಲವತ್ತತೆ ಹೆಚ್ಚಿಸುವುದು, ವನ್ಯ ಜೀವಿಗಳಿಗೆ ಆಹಾರ ಮತ್ತು ಆಶ್ರಯ ತಾಣವಾಗುತ್ತದೆ. ಇಂತಹ ಪ್ರಕೃತಿಯನ್ನು ಸಂರಕ್ಷಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದರು.

    ಜೊಯಿಡಾ ವಲಯ ಅರಣ್ಯಾಧಿಕಾರಿ ಸಿ.ಜಿ. ನಾಯ್ಕ ಅವರು, ಉದ್ಯಾನದಲ್ಲಿ ನೆಡಲಾಗುತ್ತಿರುವ ವಿವಿಧ ಜಾತಿಯ ಸಸಿಗಳ ಬಗ್ಗೆ ಮಾಹಿತಿ ನೀಡಿದರು. ಆ ಸಸಿಗಳಿಂದ ಪ್ರಾಣಿ ಪಕ್ಷಿಗಳಿಗೆ ಆಗುವ ಉಪಯೋಗದ ಬಗ್ಗೆ ತಿಳಿಸಿದರು. ಜಿ.ಪಂ. ಸದಸ್ಯ ರಮೇಶ ನಾಯ್ಕ, ಸಂಜಯ ಹಣಬರ, ತಾ.ಪಂ. ಉಪಾಧ್ಯಕ್ಷ ವಿಜಯ ಪಂಡಿತ, ತಹಸೀಲ್ದಾರ್ ಸಂಜಯ ಕಾಂಬಳೆ, ಇಒ ಆನಂದ ಬಡಕುಂದ್ರಿ, ಲೋಕೋಪಯೋಗಿ ಎಇಇ ವಿಜಯಕುಮಾರ, ಆರ್​ಎಫ್​ಒ ಸಿ.ಜಿ. ನಾಯ್ಕ, ಡಿಆರ್​ಎಫ್​ಒ ಸಂತೋಷ ಗವಸ, ಜೊಯಿಡಾ ಪ್ರೆಸ್ ಅಧ್ಯಕ್ಷ ನಿಖಿಲ್ ಅಸುಕರ, ಸದಸ್ಯರಾದ ಟಿ.ಕೆ. ದೇಸಾಯಿ, ಗಿರೀಶ ಪಾಟೀಲ, ವಾಸು ಸಾವಂತ, ಗಿರೀಶ ಭಾಗ್ವತ, ಸುಭಾಷ ಗಾವಡಾ, ಜ್ಞಾನೇಶ್ವರ ದೇಸಾಯಿ, ಹರೀಶ ರೆಡ್ಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts