More

    ಪರಿಶಿಷ್ಟರಿಗೆ ದನಿ ಕೊಟ್ಟಿದ್ದು ಬಿಜೆಪಿ

    ಭದ್ರಾವತಿ: ದೇಶದಲ್ಲಿ ಪರಿಶಿಷ್ಟ ಸಮುದಾಯವನ್ನು ಗುರುತಿಸಿ ಹಾಗೂ ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಸ್ಥಾನಮಾನಗಳು ಕೊಟ್ಟಿದ್ದರೆ ಅದು ಅಂದಿನ ಭಾರತೀಯ ಜನಸಂಘವೇ ಹೊರತು ಕಾಂಗ್ರೆಸ್ ಪಕ್ಷವಲ್ಲ. ಅಂಬೇಡ್ಕರ್ ಹಾಗೂ ಸಮುದಾಯದ ಬಗ್ಗೆ ಮಾತನಾಡುವ ನೈತಿಕತೆಯೂ ಅವರಿಗಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಹೇಳಿದರು.
    ತಾಲೂಕು ಬಿಜೆಪಿ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಎಸ್‍ಸಿ ಮೋರ್ಚಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ನಾಯಕರೆಂದು ಬಿಂಬಿಸಲಾಗಿದೆ. ಆದರೆ ಅಂಬೇಡ್ಕರ್ ಅವರನ್ನು ಚುನಾವಣೆಗೆ ನಿಲ್ಲಿಸಿ ಮಂತ್ರಿ ಸ್ಥಾನ ಕೊಟ್ಟಿದ್ದು ಇಂದು ಬಿಜೆಪಿಯಾಗಿರುವ ಅಂದಿನ ಭಾರತೀಯ ಜನಸಂಘವೆ ಹೊರತು ಕಾಂಗ್ರೆಸ್ ಅಲ್ಲ. ಪರಿಶಿಷ್ಟರನ್ನು ಕಡೆಗಣಿಸಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ನಾಟಕದ ಕಂಪನಿಗಳು ಎಂದರು.
    ಬಿಜೆಪಿ ಅ„ಕಾರಕ್ಕೆ ಬಂದ ನಂತರ ಪರಿಶಿಷ್ಟ ಸಮುದಾಯಕ್ಕಿದ್ದ ಶೇ.15 ಮೀಸಲಾತಿಯನ್ನು ಶೇ.17ಕ್ಕೆ ಏರಿಕೆ ಮಾಡಲಾಗಿದೆ. ಮನೆ ಇಲ್ಲದವರಿಗೆ ಮನೆ, ನಿರ್ಗತಿಕ ಮಹಿಳೆಯರಿಗೆ ಸಹಾಯಧನ, ಬಡ್ಡಿ ರಹಿತ ಸಾಲಸೌಲಭ್ಯಗಳು ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. 50 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟರಿಗೆ ಕೊಟ್ಟ ಕೊಡುಗೆ ಶೂನ್ಯ ಎಂದು ತಿಳಿಸಿದರು.
    ಪ್ರಧಾನಿ ನರೇಂದ್ರ ಮೋದಿಯವರು ಏನೆಂಬುದು ಇಡೀ ಜಗತ್ತೇ ಹೇಳುತ್ತದೆ. ಅವರ ಬಗ್ಗೆ ಪ್ರಶ್ನಿಸುವ ಅ„ಕಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಇಲ್ಲ. ದೇಶದ ಬೆನ್ನೆಲುಬಾಗಿ ರಾಷ್ಟ್ರೀಯತೆ, ಹಿಂದುತ್ವದ ಉಳಿವಿಗಾಗಿ, ಪರಿಶಿಷ್ಟ ಸಮುದಾಯವರ ಏಳಿಗೆಗಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವುದು ನಮ್ಮೆಲ್ಲರ ಕರ್ತವ್ಯ. ಆ ನಿಟ್ಟಿನಲ್ಲಿ ನಮ್ಮ ಸಮುದಾಯವೂ ಸ್ಥಳೀಯವಾಗಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಸಂಸದರ ಕೈಬಲ ಪಡಿಸುವ ಕೆಲಸ ಮಾಡುತ್ತದೆ ಎಂದರು.
    ಸಂಪರ್ಕ ಅಭಿಯಾನದ ರಾಜ್ಯ ಸಹ ಸಂಚಾಲಕ ಪಟಾಪಟ್ ಶ್ರೀನಿವಾಸ್ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿ ಇಲ್ಲದಿದ್ದರೂ ನಾವು ಬಿಜೆಪಿಯಲ್ಲಿಯೇ ಉಳಿದುಕೊಂಡಿದ್ದೇವೆ. ಕಾರಣ ರಾಜಕೀಯ ಅ„ಕಾರಕ್ಕಲ್ಲ, ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳು ಹಾಗೂ ಭಾರತೀಯತೆಗೆ ಮಾತ್ರ. ಪರಿಶಿಷ್ಟರನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಾರಸುದಾರರೆಂದು ಕಾಂಗ್ರೆಸ್ ಬೋರ್ಡ್ ಹಾಕಿಕೊಂಡು ಕಳೆದ 75 ವರ್ಷಳಿಂದ ನಮ್ಮನ್ನು ಯಾಮಾರಿಸುತ್ತಾ ಬಂದಿದೆ. ಅಂಬೇಡ್ಕರ್ ಕಾಂಗ್ರೆಸ್ ಪಕ್ಷದ ಸದಸ್ಯರಾಗಿಯೂ ಸದಸ್ಯತ್ವ ಹೊಂದಿರಲಿಲ್ಲ ಎಂಬುದು ಎಲ್ಲರೂ ತಿಳಿಯಬೇಕಿದೆ. ಭೂತದ ಬಾಯಲ್ಲಿ ಭಗವ್ದಗೀತೆ ಹಾಡುವ ಕಾಂಗ್ರೆಸ್ ಪಕ್ಷದ ಬಗ್ಗೆ ಇಂದು ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕಾಗಿದೆ. ಪಾರದರ್ಶಕವಾದ ಬಿಜೆಪಿಯನ್ನು ಬೆಂಬಲಿಸಬೇಕಾಗಿದೆ ಎಂದು ಹೇಳಿದರು.
    ಮಾಜಿ ಎಂಎಲ್ಸಿ ಆರ್.ಕೆ.ಸಿದ್ರಾಮಣ್ಣ, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಬಿಜೆಪಿ ತಾಲೂಕು ಅಧ್ಯಕ್ಷ ಜಿ.ಧರ್ಮಪ್ರಸಾದ್, ಪ್ರಮುಖರಾದ ಅಶೋಕ್‍ಮೂರ್ತಿ, ಕೂಡ್ಲಿಗೆರೆ ಹಾಲೇಶ್, ತೀರ್ಥಯ್ಯ, ಮಂಜುನಾಥ್ ಕದಿರೇಶ್, ಎಸ್.ಕುಮಾರ್, ಎಂ.ಪ್ರಭಾಕರ್, ಆನಂದಕುಮಾರ್, ಆರ್.ಎನ್.ಶೋಭಾ, ಗಣೇಶ್, ಶಶಿಕಲಾ ನಾರಾಯಣಪ್ಪ, ಮಣ್ಣೇನಕೊಪ್ಪ ದೇವರಾಜ್, ಜಯರಾಂನಾಯ್ಕ, ಕರಿಗೌಡ ಇತರರಿದ್ದರು.
    ಸಂವಿಧಾನ ಬದಲಾಯಿಸಿದ್ರಾ?:  ಭಾರತೀಯ ಜನತಾ ಪಾರ್ಟಿ ಅ„ಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಕೆಲವರು ತಪ್ಪು ಸಂದೇಶ ಸಾರುತ್ತಿದ್ದಾರೆ. ಕಳೆದ 8 ವರ್ಷಗಳಿಂದಲೂ ಕೇಂದ್ರದಲ್ಲಿ ಆಡಳಿತ ನಡೆಸಿರುವ ಬಿಜೆಪಿ ಸರ್ಕಾರ ಸಂವಿಧಾನವನ್ನು ಬದಲಾಯಿಸಿತೆ?. ಯಾರು ಅ„ಕಾರಕ್ಕೆ ಬಂದರೂ ಸಂವಿಧಾನವನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ದಲಿತರಿಗೆ ದನಿ ಕೊಟ್ಟ ಭದ್ರಾವತಿ ತಾಲೂಕಿನಲ್ಲಿ ದಲಿತರು ಎಚ್ಚೆತ್ತು ಕೊಳ್ಳಬೇಕಿದೆ. ದಲಿತ ನಾಯಕ ಪೆÇ್ರ. ಬಿ.ಕೃಷ್ಣಪ್ಪ ಹಾಗೂ ಅಂಬೇಡ್ಕರ್ ಅವರ ಹೆಸರಲ್ಲಿ ಹುಟ್ಟುಕೊಂಡಿರುವ ದಲಿತ ಸಂಘರ್ಷ ಸಮಿತಿ ಸಂಘಟನೆಗಳ ನಾಯಕರಿಗೆ ಬಿಜೆಪಿ ಪಕ್ಷದ ಮಹತ್ವ ಹಾಗೂ ಕಾಂಗ್ರೆಸ್ ಸರ್ಕಾರದ ಕೀಳು ಸಂಸ್ಕøತಿಯನ್ನು ತಿಳಿಸುವ ಕೆಲಸ ಮಾಡಬೇಕಿದೆ ಎಂದು ಪಟಾಪಟ್ ಶ್ರೀನಿವಾಸ್ ತಿಳಿಸಿದರು.
    ಚುನಾವಣೆ ವೇಳೆ ಮಾತ್ರ ನಮ್ಮ ನೆನಪು: ಎಸ್‍ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕಾಸರವಳ್ಳಿ ಶ್ರೀನಿವಾಸ್ ಮಾತನಾಡಿ, ಪ್ರಸ್ತುತ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಸಂದರ್ಭದಲ್ಲಿ ಮಾತ್ರ ನಮ್ಮ ಸಮಾಜವನ್ನು ಮಾತನಾಡಿಸಲು ಬರುತ್ತವೆ. ಆದರೆ ಬಿಜೆಪಿ ಸದಾ ಕಾಲ ನಮ್ಮೊಂದಿಗಿದ್ದು ಪರಿಶಿಷ್ಟ ಜನಾಂಗದ ಒಳಿತಿಗಾಗಿ ಕೆಲಸ ಮಾಡುತ್ತಿದೆ. ಅಲ್ಲದೆ ಬಿಜೆಪಿ ಸರ್ಕಾರ ಹಲವಾರು ಯೋಜನೆಗಳನ್ನು ಜÁರಿಗೆ ತಂದು ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಪ್ರಧಾನಿ ಮೋದಿಯವರು ನಮ್ಮ ಸಮುದಾಯವನ್ನು ಗುರುತಿಸುವ ಕೆಲಸ ಮಾಡಿದ್ದಾರೆ. ಆಗಾಗಿ ನಾವೆಲ್ಲರೂ ಬಿಜೆಪಿ ಪಕ್ಷದೊಂದಿಗೆ ಕೈ ಜೋಡಿಸೋಣ ಎಂದು ಮನವಿ ಮಾಡಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts