More

    ಪ್ರಾಬ್ಲಂ ಇದೆಯಾ? ಶಾಸಕರಿಗೆ ವಾಟ್ಸ್‌ಆ್ಯಪ್ ಮಾಡಿ

    ಶಿವಮೊಗ್ಗ: ನಾಗರಿಕರು ಇನ್ನು ಮುಂದೆ ಅಭಿವೃದ್ಧಿ ದೃಷ್ಟಿಯಿಂದ ಯಾವುದೆ ಸಲಹೆಗಳನ್ನು ಶಾಸಕರಿಗೆ ನೀಡಬಹುದು. ತಮ್ಮ ಸಮಸ್ಯೆಗಳನ್ನೂ ತಿಳಿಸಿ ಅದಕ್ಕಾಗಿ ಪರಿಹಾರ ಕಂಡುಕೊಳ್ಳಬಹುದು. ಇದಕ್ಕಾಗಿ ಶಾಸಕ ಎಸ್.ಎನ್.ಚನ್ನಬಸಪ್ಪ, ಸ್ಮಾರ್ಟ್ ಶಿವಮೊಗ್ಗ-ನಿಮ್ಮ ನುಡಿ, ನಮ್ಮ ನಡೆ ಎಂಬ ಹೆಸರಿನಲ್ಲಿ ಹೊಸ ವಾಟ್ಸ್‌ಆ್ಯಪ್ ನಂಬರ್ ಪ್ರಕಟಿಸಿದ್ದಾರೆ.
    ಈ ಸಹಾಯವಾಣಿ ಮೂಲಕ ಸಾರ್ವಜನಿಕರಿಂದ ಸಂಗ್ರಹವಾಗುವ ಅಭಿಪ್ರಾಯಗಳು ಸಕಾರಾತ್ಮಕವಾಗಿದ್ದಾರೆ ಅದನ್ನು ಕಾರ್ಯರೂಪಕ್ಕೆ ತರಲಾಗುತ್ತದೆ. ಸಮಸ್ಯೆಗಳಿದ್ದರೆ ಅದನ್ನು ಕಾಲಮಿತಿಯಲ್ಲಿ ಪರಿಹರಿಸಲಾಗುವುದು ಎಂದು ಭರವಸೆಯನ್ನೂ ನೀಡಿದ್ದಾರೆ. ಇದಕ್ಕಾಗಿ ಕಾರ್ಯಕರ್ತರ ತಂಡ ರಚಿಸಿದ್ದು, ಇದಕ್ಕೆ ಕರ್ತವ್ಯಪಡೆ ಎಂದು ಹೆಸರಿಡಲಾಗಿದೆ.ಜನರ ಅಭಿಪ್ರಾಯ ಸಂಗ್ರಹಿಸಲು ಈ ಯೋಜನೆ ರೂಪಿಸಲಾಗಿದೆ. ಹಸಿರು ನಗರ, ಸ್ವಚ್ಛ ಹಾಗೂ ಆರೋಗ್ಯಕರ ನಗರ, ಸಾಂಸ್ಕೃತಿಕ ನಗರವನ್ನಾಗಿ ಶಿವಮೊಗ್ಗವನ್ನು ರೂಪಿಸಲು ಇದು ಸಹಕಾರಿಯಾಗಲಿದೆ. ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರ, ಆಡಳಿತ ಹಾಗೂ ಅಭಿವೃದ್ಧಿಗೂ ಇದು ನೆರವಾಗಲಿದೆ. ನಾಗರಿಕರು ಸಮಸ್ಯೆ ಇಲ್ಲವೇ ಸಲಹೆಗಳನ್ನು ವಾಟ್ಸಪ್ ಸಂದೇಶದ ಮೂಲಕ ಕಳುಹಿಸಿದರೆ ಅದನ್ನು ಕರ್ತವ್ಯಪಡೆ ನಿರ್ವಹಣೆ ಮಾಡಲಿದೆ. ನಗರಪಾಲಿಕೆ ಅಧಿಕಾರಿಗಳ ಮೂಲಕ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು. ನಿಗದಿತ ಕಾಲಮಿತಿಯೊಳಗೆ ಸಾರ್ವಜನಿಕರಿಗೆ ಸ್ಪಂದಿಸಲಾಗುವುದು. ಈ ಕಾರ್ಯದಲ್ಲಿ ಪಕ್ಷಾತೀತವಾಗಿ ಎಲ್ಲರನ್ನೂ ತೊಡಗಿಸಿಕೊಳ್ಳಲಾಗುವುದು. ನಮ್ಮ ಸಂಘಟನೆಯ ಕಾರ್ಯಕರ್ತರೂ ಇದಕ್ಕಾಗಿ ಕೆಲಸ ಮಾಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಬಿಜೆಪಿ ನಗರಾಧ್ಯಕ್ಷ ಜಗದೀಶ್, ಮೇಯರ್ ಎಸ್.ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರ ನಾಯ್ಕ, ನಗರಪಾಲಿಕೆ ಸದಸ್ಯರಾದ ಇ.ವಿಶ್ವಾಸ್, ಅನಿತಾ ರವಿಶಂಕರ್, ವಿಶ್ವನಾಥ್, ಮಂಜುನಾಥ್, ಭಾನುವತಿ ವಿನೋದ್‌ಕುಮಾರ್, ಸಂಗೀತಾ ನಾಗರಾಜ್, ಪ್ರಭಾಕರ್, ಸೂಡಾ ಮಾಜಿ ಅಧ್ಯಕ್ಷ ನಾಗರಾಜ್ ಇದ್ದರು.
    ಮುಂದಿನ ತಿಂಗಳು ದೂರು ಪೆಟ್ಟಿಗೆ: ನಗರದ ವಿವಿಧ ವಾರ್ಡ್‌ಗಳ ಪ್ರಮುಖ ಸ್ಥಳಗಳಲ್ಲಿ ಆಗಸ್ಟ್ 15 ರಿಂದ 30ರವರೆಗೆ ದೂರು ಹಾಗೂ ಸಲಹಾ ಪೆಟ್ಟಿಗೆಯನ್ನೂ ಇರಿಸಲಾಗುವುದು. ನಾಗರಿಕರು ಮುಂದಿನ ಐದು ವರ್ಷಗಳನ್ನು ಗಮನದಲ್ಲಿರಿಸಿಕೊಂಡು ಅಭಿವೃದ್ಧಿ ದೃಷ್ಟಿಯಿಂದ ಸಲಹೆಗಳನ್ನು ಬರೆದು ಈ ಪೆಟ್ಟಿಗೆಯಲ್ಲಿ ಹಾಕಬಹುದು. ಅದೇ ರೀತಿ ದೂರುಗಳನ್ನೂ ಬರೆದು ತಿಳಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಎಸ್.ಎನ್.ಚನ್ನಬಸಪ್ಪ ತಿಳಿಸಿದರು.
    ಇದು ವಾಟ್ಸ್‌ಆ್ಯಪ್ ನಂಬರ್: ಸಾರ್ವಜನಿಕರು ದೂರು ಸಲ್ಲಿಸಲು ಅಭಿಪ್ರಾಯ ತಿಳಿಸಲು ಶಾಸಕ ಚನ್ನಬಸಪ್ಪ ಹೊಸದಾಗಿ ಆರಂಭಿಸುವ ವಾಟ್ಸ್‌ಆ್ಯಪ್ ಸಹಾಯವಾಣಿ ಸಂಖ್ಯೆ 90199 01177. ಇದು ಮುಂದಿನ ಐದು ವರ್ಷಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸಲಿದೆ. ಜನರ ಅಭಿಪ್ರಾಯ ಅರಿಯಲು ವೇದಿಕೆಯಾಗಿದೆ ಎಂದು ಶಾಸಕರು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts