More

    ಪ್ರಾಪರ್ಟಿ ಎಕ್ಸ್​ಪೋಗೆ ಭರ್ಜರಿ ಸಿದ್ಧತೆ

    ಹುಬ್ಬಳ್ಳಿ: ಎಲ್ಲರ ಕಾತರದ ಕ್ಷಣಕ್ಕೆ ಇನ್ನೊಂದೇ ದಿನ ಬಾಕಿ. ಈ ಭಾಗದಲ್ಲಿ ನಡೆಯುವ ಅತಿದೊಡ್ಡ ಪ್ರಾಪರ್ಟಿ ಎಕ್ಸ್​ಪೋಗೆ ಭರ್ಜರಿ ಸಿದ್ಧತೆಗಳು ನಡೆದಿದ್ದು, ಹವಾನಿಯಂತ್ರಿತ ಟೆಂಟ್ ಸಜ್ಜುಗೊಳ್ಳುತ್ತಿದೆ.

    ರಿಯಲ್ ಎಸ್ಟೇಟ್ ಉದ್ಯಮ ಹಾಗೂ ಸಾರ್ವಜನಿಕರು ಬಹು ದಿನಗಳಿಂದ ಕಾಯುತ್ತಿರುವ ಬೃಹತ್ ಪ್ರದರ್ಶನ ಮೇಳಕ್ಕೆ ಏ. 22ರಂದು ಚಾಲನೆ ನೀಡಲಾಗುತ್ತದೆ. ಕನ್ನಡದ ನಂಬರ್ ಒನ್ ಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ಸುದ್ದಿ ವಾಹಿನಿಯು ಆಯೋಜಿಸಿರುವ ಈ ಮೇಳದಲ್ಲಿ ತಮ್ಮ ಕನಸಿನ ಮನೆ ಸಾಕಾರಗೊಳಿಸಿಕೊಳ್ಳುವ ಅದ್ಭುತ ಅವಕಾಶ ಸಾರ್ವಜನಿಕರಿಗೆ ಸಿಗಲಿದೆ.

    30ಕ್ಕಿಂತ ಹೆಚ್ಚು ಬಿಲ್ಡರ್, ಡೆವಲಪರ್​ಗಳು 200ಕ್ಕೂ ಹೆಚ್ಚು ವಿವಿಧ ಯೋಜನೆಗಳ ಸಮಗ್ರ ಮಾಹಿತಿಯೊಂದಿಗೆ ಎಕ್ಸ್​ಪೋದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಲೇಔಟ್, ಅಪಾರ್ಟ್​ವೆುಂಟ್, ವಿಲ್ಲಾ, ಫಾಮ್ರ್ ಲ್ಯಾಂಡ್, ಹೈ ರೇಂಜ್ ಬಿಲ್ಡಿಂಗ್ ಹೀಗೆ ರಿಯಲ್ ಎಸ್ಟೇಟ್​ನ ತರಹೇವಾರಿ ಮಜಲುಗಳ ಬಗ್ಗೆ ವಿವರಿಸಲಿದ್ದಾರೆ.

    ಮನೆ, ನಿವೇಶನ, ವಿಲ್ಲಾ, ಫಾಮರ್್​ಹೌಸ್ ಮುಂತಾದ ಬೇಡಿಕೆಗೆ ಅನುಸಾರವಾಗಿ ಜನರು ಮಾಹಿತಿ ತಿಳಿದುಕೊಂಡು ಬುಕಿಂಗ್ ಮಾಡಬಹುದು. ಸೈಟ್ ವಿಜಿಟ್ ಕೂಡ ಮಾಡಬಹುದು.

    ಹುಬ್ಬಳ್ಳಿ-ಧಾರವಾಡ, ಬೆಂಗಳೂರು, ಮಂಗಳೂರಿನ ಪ್ರಸಿದ್ಧ ಲೇಔಟ್, ವಸತಿ ಯೋಜನೆ ರೂಪಿಸಿದ ಬಿಲ್ಡರ್​ಗಳು ಇದರಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಜನರು ಯಾವುದೇ ಆತಂಕ, ಭಯ ಇಲ್ಲದೆ ಖರೀದಿ ಮಾಡಬಹುದಾಗಿದೆ.

    ಅನಧಿಕೃತ, ಅಕ್ರಮ ಲೇಔಟ್​ಗಳಲ್ಲಿ ಮನೆ, ನಿವೇಶನ ಖರೀದಿಸಿ ತೊಂದರೆಗೆ ಸಿಲುಕಿಕೊಳ್ಳುವ ಬದಲು ಇಲ್ಲಿ ಎಲ್ಲವೂ ಅಧಿಕೃತವಾಗಿರುವಲ್ಲಿ ಸಂಪೂರ್ಣ ಭರವಸೆಯೊಂದಿಗೆ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಮುಂದಡಿ ಇಡುವ ಅವಕಾಶ ಇರುತ್ತದೆ.

    ಡೆವಲಪರ್​ಗಳು ತಾವು ನಿರ್ವಿುಸುವ ಲೇಔಟ್​ಗಳ ಚಿತ್ರಣವನ್ನೇ ಗ್ರಾಹಕರ ಮುಂದೆ ಇಟ್ಟು ಪರಿಚಯಿಸುವುದರಿಂದ ಯಾವುದೇ ಸಂಶಯಕ್ಕೆ ಆಸ್ಪದ ಇರುವುದಿಲ್ಲ.

    ನಗರದಲ್ಲಿ ಒಂದು ಸುಸಜ್ಜಿತ ಮನೆ ಮಾಡಬೇಕೆಂದು ಅಂದು ಕೊಂಡಿರುವ ಗ್ರಾಮೀಣ ಪ್ರದೇಶದವರಿಗೂ ಹಾಗೂ ನಿವೇಶನದ ಮೇಲೆ ಹೂಡಿಕೆ ಮಾಡಬೇಕೆನ್ನುವವರಿಗೂ ಇದೊಂದು ವೇದಿಕೆಯಾಗಿದೆ.

    ಮನೆ, ನಿವೇಶನ ಮಾತ್ರವಲ್ಲ, ಗೃಹಾಲಂಕಾರಕ್ಕೆ ಸಂಬಂಧಿಸಿದ (ಇಂಟೀರಿಯರ್) ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಕೂಡ ನಡೆಯಲಿದೆ. ಕಮರ್ಷಿಯಲ್ ಮಳಿಗೆಗಳ ಬಗ್ಗೆಯೂ ಸಂಪೂರ್ಣ ಮಾಹಿತಿ ದೊರೆಯಲಿದೆ.

    • ಮಾಹಿತಿಗೆ ಸಂರ್ಪಸಿ

    ಪ್ರಾಪರ್ಟಿ ಎಕ್ಸ್​ಪೋ ಕುರಿತ ಮಾಹಿತಿಗಾಗಿ ಆಸಕ್ತರು, ಮೊ. ಸಂ. 98869 22116 ಅಥವಾ 88844 32303ಗೆ ಸಂರ್ಪಸಬಹುದಾಗಿದೆ.

    ಎಕ್ಸ್​ಪೋ ಎಲ್ಲಿ ?

    ಹುಬ್ಬಳ್ಳಿಯ ವಿದ್ಯಾನಗರ ಮಹಿಳಾ ವಿದ್ಯಾಪೀಠ ಎದುರಿನ ರಾಯ್ಕರ್ ಗ್ರೌಂಡ್​ನಲ್ಲಿ ಎಕ್ಸ್​ಪೋ ನಡೆಯಲಿದೆ.

    ಯಾವಾಗ ?

    ಏ. 22, 23 ಮತ್ತು 24ರಂದು ಮೂರು ದಿನಗಳ ಕಾಲ ಬೆಳಗ್ಗೆ 10ರಿಂದ ರಾತ್ರಿ 8 ಗಂಟೆಯವರೆಗೆ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts