More

    ಪಯೋನೀರ ಬ್ಯಾಂಕ್ ಉತ್ತಮ ಸಾಧನೆ

    ಬೆಳಗಾವಿ: ಪಯೋನೀರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ 116 ವರ್ಷ ಪೂರೈಸಿದ್ದು, ಕಳೆದ ಆರ್ಥಿಕ ವರ್ಷದಲ್ಲಿ 1.21 ಕೋಟಿ ರೂ. ಸಾವಿರ ನಿವ್ವಳ ಲಾಭ ಗಳಿಸಿದೆ. ಇಷ್ಟೊಂದು ಲಾಭ ಗಳಿಸಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದು ಪಯೋನೀರ ಬ್ಯಾಂಕ್ ಅಧ್ಯಕ್ಷ ಪ್ರದೀಪ ಅಷ್ಟೇಕರ ಹೇಳಿದರು.
    ನಗರದ ಮಠ ಗಲ್ಲಿಯ ಬ್ಯಾಂಕ್‌ನ ಮುಖ್ಯ ಶಾಖೆಯಲ್ಲಿ ಗುರುವಾರ ಪ್ರಗತಿ ಪರಿಶೀಲನೆಯಲ್ಲಿ ಅವರು ಮಾತನಾಡಿ, ಬ್ಯಾಂಕ್‌ನ 116ನೇ ವಾರ್ಷಿಕ ಮಹಾಸಭೆ ಸೆ.17ರಂದು ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಳ್ಳಲಾಗುವುದು ಎಂದರು. 116 ವರ್ಷಗಳ ಬ್ಯಾಂಕ್‌ನ ಇತಿಹಾಸದಲ್ಲಿ ಈ ವರ್ಷ ಮೊದಲ ಬಾರಿಗೆ ಬ್ಯಾಂಕ್ ‘ಎ ಆಡಿಟ್ ರೇಟಿಂಗ್’ ಪಡೆದಿದೆ. ಮೊದಲ ಬಾರಿಗೆ ಬ್ಯಾಂಕ್ 100 ಕೋಟಿ ರೂ. ಠೇವಣಿ ಮಿತಿ ದಾಟಿದೆ. 106 ಕೋಟಿ ರೂ. ಠೇವಣಿ ಹೊಂದಿದ್ದು, 76 ಕೋಟಿ ರೂ. ಸಾಲ ನೀಡಿದೆ. 49 ಕೋಟಿ ರೂ. ಹೂಡಿಕೆ ಮತ್ತು 128 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ಒಟ್ಟು 182 ಕೋಟಿ ರೂ. ವ್ಯವಹಾರ ಮಾಡಿದ್ದು ಒಟ್ಟು ಲಾಭ 1,63,57,000 ರೂ. ಇದರಲ್ಲಿ ಆದಾಯ ತೆರಿಗೆ ಕಳೆದು ನಿವ್ವಳ ಲಾಭ 1,21,57,000 ರೂ. ಇದೆ. ಬ್ಯಾಂಕ್‌ನ ಮುಖ್ಯ ಶಾಖೆಯೊಂದಿಗೆ ಶಹಾಪುರ, ಮಾರ್ಕೆಟ್ ಯಾರ್ಡ್, ಗೋವಾವೇಸ್ ಶಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಬ್ಯಾಂಕ್‌ನ ಠೇವಣಿ 12 ಕೋಟಿಯಷ್ಟು ಹೆಚ್ಚಾಗಿದೆ. 9 ಕೋಟಿ ರೂ. ಸಾಲ ನೀಡಲಾಗಿದೆ. ನಿವ್ವಳ ಎನ್‌ಪಿಎ ಕೇವಲ 0.35 ಪ್ರತಿಶತವಾಗಿದೆ. ಈ ವರ್ಷ ಪ್ರಥಮ ಬಾರಿಗೆ ಎ ವರ್ಗದವರಿಗೆ ಶೇ.20 ಡಿವಿಡೆಂಡ್ ಮತ್ತು ಬಿ ವರ್ಗದವರಿಗೆ ಶೇ.8 ಡಿವಿಡೆಂಡ್ ನೀಡಲು ಯೋಜಿಸಿದ್ದೇವೆ ಎಂದರು.
    ಬ್ಯಾಂಕ್‌ನ ಕರ್ಮಚಾರಿ ವರ್ಗಕ್ಕೆ ಆರೋಗ್ಯ ವಿಮಾ ಯೋಜನೆ ಜಾರಿಗೊಳಿಸಲಾಗಿದ್ದು, ಮುಂಬರುವ ವರ್ಷದಲ್ಲಿ ಗ್ರಾಹಕರಿಗೆ ಅವರ ಖಾತೆಯಿಂದ ನೇರವಾಗಿ ಆರ್‌ಟಿಜಿಎಸ್ ಮತ್ತು ನ್‌ಟೆ ಸೌಲಭ್ಯ, ಎಲ್ಲ ಖಾತೆದಾರರಿಗೆ ಎಟಿಎಂ ಡೆಬಿಟ್ ಕಾರ್ಡ್ ಸೌಲಭ್ಯ, ಕ್ಯೂ ಆರ್ ಕೋಡ್ ಸೌಲಭ್ಯ ನೀಡಲು ಪ್ರಯತ್ನಿಸುತ್ತಿದ್ದೇವೆ ಎಂದರು.
    ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಉಪಾಧ್ಯಕ್ಷ ರಂಜಿತ್ ಚವ್ಹಾಣ ಪಾಟೀಲ, ನಿರ್ದೇಶಕರಾದ ಅನಂತ ಲಾಡ, ಶಿವರಾಜ ಪಾಟೀಲ, ರಮೇಶ ಶಿಂಧೆ, ಗಜಾನನ ಪಾಟೀಲ, ರವಿ ದೊಡನವರ, ಸುವರ್ಣಾ ಶಹಾಪುರಕರ, ಲಕ್ಷ್ಮೀ ಕಾನೂರಕರ, ಸುಹಾಸ ತರಳ, ಗಜಾನನ ಠೋಕನೇಕರ, ವಿದ್ಯಾಧರ ಕುರಣೆ, ಮಾರುತಿ ಶೀಗಿಹಳ್ಳಿ ಇದ್ದಾರೆ. ಅನಿತಾ ಮುಲ್ಯಾ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts