More

    ಪಡಿತರದಲ್ಲಿ ರಾಯಚೂರು ಅಕ್ಕಿ, ತುಮಕೂರಿನ ರಾಗಿ ಕೊಡಲು ಚಿಂತನೆ ; ಕೃಷಿ ಹಾಗೂ ಕೈಗಾರಿಕೆ ವಸ್ತುಪ್ರದರ್ಶನ ಸಮಾರೋಪದಲ್ಲಿ ಆಹಾರ ಸಚಿವ ಉಮೇಶ್‌ಕತ್ತಿ ಹೇಳಿಕೆ

    ತುಮಕೂರು: ರಾಯಚೂರು ಭಾಗದಲ್ಲಿ ಬೆಳೆಯುವ ಅಕ್ಕಿ ಹಾಗೂ ತುಮಕೂರು ಭಾಗದಲ್ಲಿ ಬೆಳೆಯುವ ರಾಗಿಯನ್ನು ಪಡಿತರದಲ್ಲಿ ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆಹಾರ ಸಚಿವ ಉಮೇಶ್‌ಕತ್ತಿ ಹೇಳಿದರು.

    ಸಿದ್ಧಗಂಗಾ ಮಠದಲ್ಲಿ ಸೋಮವಾರ ರಾತ್ರಿ ಕೃಷಿ ಹಾಗೂ ಕೈಗಾರಿಕೆ ವಸ್ತುಪ್ರದರ್ಶನ ಸಮಾರೋಪದಲ್ಲಿ ಮಾತನಾಡಿದ ಅವರು, ಜನರ ಆರೋಗ್ಯ ದೃಷ್ಟಿಯಿಂದ ಎಲ್ಲರಿಗೂ ಪೌಷ್ಟಿಕ ಆಹಾರ ವಿತರಣೆಗೆ ಕ್ರಮವಹಿಸಲಾಗಿದೆ, ಆಯಾ ಸ್ಥಳೀಯ ಬೆಳೆಗಳ ವಿತರಣೆಗೆ ನಿರ್ಧರಿಸಲಾಗಿದೆ. ಏ.1ರಿಂದ ರಾಜ್ಯದ ಉತ್ತರ ಕರ್ನಾಟಕದ 13 ಜಿಲ್ಲೆಗಳಿಗೆ ರಾಯಚೂರು ಭಾಗದಲ್ಲಿ ಬೆಳೆಯುವ ಅಕ್ಕಿ, ಹೈಬ್ರಿಡ್ ಜೋಳ ಹಾಗೂ ಮಧ್ಯ ಕರ್ನಾಟಕದ 13 ಜಿಲ್ಲೆಗಳಿಗೆ ರಾಗಿ, ಅಕ್ಕಿ ಹಾಗೂ ಮಂಗಳೂರು ಭಾಗದ 6 ಜಿಲ್ಲೆಗಳಿಗೆ ಮೈಸೂರು ಭಾಗದಲ್ಲಿ ಬೆಳೆಯುವ ಕುಸವಲಕ್ಕಿ ವಿತರಣೆಗೆ ಕ್ರಮವಹಿಸಲಾಗಿದ್ದು, ಆಹಾರ ಪದಾರ್ಥದಲ್ಲಿ ಬದಲಾವಣೆ ತರಲಿದೆ ಎಂದರು.

    ಕರ್ನಾಟಕದಲ್ಲಿ ಬೆಳೆಯುವ ಬೆಳೆಗಳನ್ನು ಪಡಿತರದಲ್ಲಿ ವಿತರಿಸುವ ಚಿಂತನೆಯಿದೆ, ರಾಜ್ಯದ ಎಲ್ಲೆಡೆಯ ಮಠಗಳು ಹಾಗೂ ಅನಾಥ ಶಾಲೆಗಳಿಗೆ ಪಡಿತರ ವಿತರಿಸಲಾಗುತ್ತಿದೆ. ರಾಜ್ಯದಲ್ಲಿ ಅರ್ಹರಿಗೆ ಕಾರ್ಡ್ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದರು.

    ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ವಾತನಾಡಿ, 1964ರಿಂದ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿವರ್ಷ ನಿರಂತರವಾಗಿ ವಸ್ತು ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ. ಈ ವರ್ಷ ವಸ್ತು ಪ್ರದರ್ಶನ ಯಶಸ್ವಿಯಾಗಿ ನಡೆದಿದೆ ಎಂದರು.
    ಕೃಷಿ ಮತ್ತು ಆಹಾರ ಇಲಾಖೆ ಎರಡೂ ಹೊಂದಿಕೊಂಡೇ ಹೋಗಬೇಕು. ಆ ನಿಟ್ಟಿನಲ್ಲಿ ವಸ್ತುಪ್ರದರ್ಶನ ಯಶಸ್ವಿಯಾಗಿದೆ ಎಂದರು.
    ಪ್ರಸ್ತುತ ಭಾರತ ಆಹಾರದಲ್ಲಿ ಸ್ವಾವಲಂಬನೆ ಪಡೆದಿದೆ. ಇದಕ್ಕೆ ವಿಜ್ಞಾನ ಪೂರಕ ವಾತಾವರಣ ಸೃಷ್ಟಿಸಿದೆ. ಇದರ ಜತೆಗೆ ಕೈಗಾರಿಕೆಯೂ ಉದ್ಯೋಗ ಸೃಷ್ಟಿಸುವಲ್ಲಿ ಸಹಕಾರಿಯಾಗಿದೆ, ರೈತರ ಬದುಕು ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಗುತ್ತಿದ್ದು, ಸಂಕಷ್ಟದಲ್ಲೂ ನಾಡಿಗೆ ಅನ್ನ ನೀಡುತ್ತಿದ್ದಾರೆ ಎಂದರು.

    ಮೇಯರ್ ಬಿ.ಜಿ.ಕೃಷ್ಣಪ್ಪ, ತಾಪಂ ಸದಸ್ಯ ಮಮತಾ, ಮೈದಾಳ ಗ್ರಾಪಂ ಅಧ್ಯಕ್ಷೆ ವಾಲಾ, ವಸ್ತು ಪ್ರದರ್ಶನ ಸಮಿತಿ ಜಂಟಿ ಕಾರ್ಯದರ್ಶಿ ಕೆ.ಬಿ.ರೇಣುಕಯ್ಯ, ಎಸ್.ಶಿವಕುವಾರ್, ಪಾಲಿಕೆ ಆಯುಕ್ತೆ ರೇಣುಕಾ ಇದ್ದರು. ಸವಾರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ ಇಲಾಖೆಗಳಿಗೆ ಬಹುವಾನ ವಿತರಣೆ ವಾಡಲಾಯಿತು.

    ಕಾರು ಇರುವವರಿಗೆ ಬಿಪಿಎಲ್ ಕಾರ್ಡ್ ವಾಪಸ್ ಪಡೆಯ ಲಾಗುವುದು, ಬಿಪಿಎಲ್ ಮಾನದಂಡದಿಂದ ಮೇಲ್ಪಟ್ಟವರಿಗೆ ಬಿಪಿಎಲ್ ವಾಪಸ್ ಪಡೆದು ಎಪಿಎಲ್ ಕಾರ್ಡ್ ವಿತರಿಸಲಾಗುವುದು, ಅವರಿಗೂ ಜೋಳ, ಗೋಧಿ ಪೂರೈಸಲಾಗುವುದು. ಬಡವರಿಗೆ ಪಡಿತರ ನೀಡಲು ಎಲ್ಲರೂ ಸಹಕಾರ ನೀಡಬೇಕು.
    ಉಮೇಶ್‌ಕತ್ತಿ ಆಹಾರ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts