More

    ಪಠ್ಯದಲ್ಲಿದೆ ಲೂಟಿಕೋರರ ಇತಿಹಾಸ

    ಚನ್ನಮ್ಮ ಕಿತ್ತೂರು: ಸ್ವಾತಂತ್ರ್ಯಕ್ಕಾಗಿ ನೆತ್ತರು ಹರಿಸಿದವರು, ತ್ಯಾಗ-ಬಲಿದಾನಗೈದ ಅನೇಕ ವೀರರ ಹೆಸರುಗಳು ಇಂದಿನ ಪಠ್ಯಕ್ರಮದಲ್ಲಿ ಮಾಯವಾಗಿದೆ. ದೇಶವನ್ನು ಕೊಳ್ಳೆಹೊಡೆದ ಲೂಟಿಕೋರರ ಇತಿಹಾಸಗಳೇ ರಾರಾಜಿಸುತ್ತಿದೆ. ವಿದ್ಯಾರ್ಥಿಗಳು ಇಂತಹ ಇತಿಹಾಸಗಳಿಂದ ಏನು ನೀತಿ ಕಲಿಯಲು ಸಾಧ್ಯ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಗುರುವಾರ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
    ಇತಿಹಾಸ ತಿಳಿದುಕೊಳ್ಳಿ: ನಿಜವಾದ ವೀರರ ತ್ಯಾಗ, ಬಲಿದಾನಗಳ ವಿಷಯಗಳನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪಠ್ಯದಲ್ಲಿಯೂ ಬದಲಾವಣೆ ತರಲಾಗುವುದು. ವೀರ ರಾಣಿ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಭಗತಸಿಂಗ್. ಝಾನ್ಸಿರಾಣಿ ಲಕ್ಷ್ಮೀಬಾಯಿ, ಉಲ್ಲಾಳ ರಾಣಿ ಅಬ್ಬಕ್ಕ ದೇವಿ ಇವರಂತಹ ಅನೇಕ ವೀರ ಮಹಿಳೆಯರ ಹಾಗೂ ಮಹಾನ್ ನಾಯಕರ ತ್ಯಾಗ, ಬಲಿದಾನಗಳ ಬಗ್ಗೆ ಅರಿತುಕೊಳ್ಳಬೇಕು ಎಂದರು.

    ಮೊಬೈಲ್ ದಾಸರಾಗಬೇಡಿ:ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ ಸಚಿವರು ಅಲ್ಲಿನ ವಿದ್ಯಾರ್ಥಿಗಳೊಂದಿಗೂ ಸಂವಾದ ನಡೆಸಿದರು. ವಿದ್ಯಾರ್ಥಿಗಳು ಇತ್ತೀಚೆಗೆ ಮೊಬೈಲ್ ದಾಸರಾಗುತ್ತಿದ್ದಾರೆ. ಮೊಬೈಲ್ ಗೀಳು ಅಂಟಿಸಿಕೊಳ್ಳಬೇಡಿ. ಇದರಿಂದ ಜೀವನವೇ ಹಾಳಾಗುತ್ತದೆ. ಈ ಕಾರಣದಿಂದಲೇ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದರು.

    ಆನ್‌ಲೈನ್ ಬೇಡ: ಕಳೆದ ಎರಡು ವರ್ಷದಿಂದ ಶಾಲೆ ಮುಚ್ಚಲ್ಪಟ್ಟಿದ್ದು, ಶೈಕ್ಷಣಿಕ ಚಟುವಟಿಕೆಗೆ ಮಾರಕ ಪೆಟ್ಟು ಬಿದ್ದಿರುವ ಕುರಿತು ಮಾತನಾಡಿದ ಸಚಿವರು, ‘ನಿಮಗೆಲ್ಲ ಆನ್‌ಲೈನ್ ಪಾಠ ಬೇಕೋ? ಆ್ ಲೈನ್ ಪಾಠ ಬೇಕೋ?’ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವಿದ್ಯಾರ್ಥಿಗಳು, ‘ನಮಗೆ ಆನ್‌ಲೈನ್ ಪಾಠಕ್ಕಿಂತ ಆ್ ಲೈನ್ ಪಾಠವೇ ಪರಿಣಾಮಕಾರಿ ಆಗಿರುತ್ತದೆ ಎಂದರು. ಸಮಸ್ಯೆಗಳ ಕುರಿತು ಹೆಚ್ಚಿನ ಚರ್ಚೆಗೆ ಆನ್‌ಲೈನ್ ಪಾಠದ ವೇಳೆ ಅವಕಾಶ ಇರುವುದಿಲ್ಲ. ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿ ಇಂಟರ್‌ನೆಟ್ ಸಮಸ್ಯೆಯಿಂದಾಗಿ ನಮಗೆ ಆನ್‌ಲೈನ್ ಪಾಠದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಲು ಆಗುವುದಿಲ್ಲ’ ಎಂದು ವಿದ್ಯಾರ್ಥಿಗಳು ತಾವು ಅನುಭವಿಸುತ್ತಿದ್ದ ಸಮಸ್ಯೆಗಳ ಕುರಿತು ಸಚಿವರಿಗೆ ಮನವರಿಕೆ ಮಾಡಿದರು.

    ಶಾಸಕ ಮಹಾಂತೇಶ ದೊಡಗೌಡರ, ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ ಪರವಣ್ಣವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಶಿಕ್ಷಣ ಇಲಾಖೆ ಧಾರವಾಡ ವಿಭಾಗದ ಅಪರ ಆಯುಕ್ತೆ ಮಮತಾ ನಾಯ್ಕ, ಬಿಇಒ ಆರ್.ಟಿ. ಬಳಿಗಾರ ಹಾಗೂ ತಾಲೂಕಿನ ಶಿಕ್ಷಕರ ಸಂಘದ ಅನೇಕ ಶಿಕ್ಷಕರು ಉಪಸ್ಥಿತರಿದ್ದರು.

    ರಾಷ್ಟ್ರೀಯ ಶಿಕ್ಷಣ ನೀತಿ ಪರಿಣಾಮಕಾರಿ

    ಕಿತ್ತೂರು ತಾಲೂಕಿನ ಶಾಲೆಗಳಿಗೆ ಭೇಟಿ ನೀಡಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ನಾಗೇಶ, ಕೇಂದ್ರದ ನೂತನ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಪರಿಣಾಮಕಾರಿಯಾಲಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೇ ಇದನ್ನು ಮಾಡಲಾಗಿದೆ. ವಿಷಯ ಅರ್ಥಮಾಡಿಕೊಂಡು ಪಾಠದ ಕಡೆ ಗಮನಿಸಿದರೆ ಸಾಕು. ದೈಹಿಕ ಅಂತರ ಕಾಯ್ದುಕೊಳ್ಳುವುದರ ಜತೆಗೆ ಆರೋಗ್ಯದ ಕಡೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹೆಚ್ಚು ಗಮನ ನೀಡಬೇಕು. ಶಾ-ಕಾಲೇಜ್ ಆವರಣದಲ್ಲಿ ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡುವಂತಾಗಬೇಕು ಎಂದರು. ಕ್ಷೇತ್ರ ಶಾಸಕರಾದ ಮಹಾಂತೇಶ ದೊಡಗೌಡರ ಅವರು ಕೋಟ್ಯಾಂತರ ರೂ. ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಸಿದರು. ಇದಕ್ಕೂ ಮೊದಲು ಸಚಿವರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಚನ್ನಮ್ಮಳ ಬೃಹತ್ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿದರು.

    ಮಹಾರಾಷ್ಟ್ರಕ್ಕೆ ಹೊಂದಿಕೊಂಡ ಗಡಿನಾಡು ಬೆಳಗಾವಿಯಲ್ಲಿ ಕೋವಿಡ್ ಆತಂಕದ ಮಧ್ಯೆಯೂ ಪ್ರೌಢಶಾಲೆಗಳ 9 ಮತ್ತು 10ನೇ ತರಗತಿ ಆರಂಭಿಸಲಾಗಿದೆ. ಉತ್ಸಾಹದಿಂದಲೇ ವಿದ್ಯಾರ್ಥಿಗಳೂ ಸಹ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ವಿದ್ಯಾರ್ಥಿಗಳ ಹಾಜರಾತಿ ಮತ್ತು ಶಾಲೆಯಲ್ಲಿ ಕೈಗೊಂಡ ಸುರಕ್ಷತಾ ಕ್ರಮಗಳ ಪರಿಶೀಲನೆಗಾಗಿ ನಾನು ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿದ್ದೇನೆ.
    | ಬಿ.ಸಿ. ನಾಗೇಶ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts