More

    ಪಂಚರತ್ನ ಯೋಜನೆ ಜಾರಿಗೆ 2.5 ಲಕ್ಷ ಕೋಟಿ ರೂ. ಅವಶ್ಯ

    ಚನ್ನರಾಯಪಟ್ಟಣ: ಮಾಜಿ ಪ್ರಧಾನಿ ದೇವೇಗೌಡರಿಗೆ ರಾಜಕೀಯ ಶಕ್ತಿ ನೀಡಿದ ದಂಡಿಗನಹಳ್ಳಿ ಹೋಬಳಿಗೆ ನಮ್ಮ ಕುಟುಂಬದ ಪ್ರತಿ ಸದಸ್ಯರು ಋಣ ತೀರಿಸಲು ಬದ್ಧರಾಗಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

    ತಾಲೂಕಿನ ದಂಡಿಗನಹಳ್ಳಿ ಹೋಬಳಿ, ಉದಯಪುರದಲ್ಲಿ ಬುಧವಾರ ಆಯೋಜಿಸಿದ್ದ ಪಂಚರತ್ನ ರಥಯಾತ್ರೆಯಲ್ಲಿ ಮಾತನಾಡಿದ ಅವರು, ನಮ್ಮ ತಂದೆಯವರಿಗೆ ಆ ಕಾಲದಲ್ಲಿ ರಾಜಕೀಯವಾಗಿ ಗಟ್ಟಿತನ ನೀಡಿದ ಇಲ್ಲಿನ ಜನರ ಋಣ ನಮ್ಮ ಮೇಲಿದ್ದು, ಅವರ ಅಣತಿಯಂತೆ ಹೋಬಳಿಯ ಪ್ರತಿ ಹಳ್ಳಿಗೂ ಆದ್ಯತೆ ನೀಡಿ ರೇವಣ್ಣ ಕೆಲಸ ಮಾಡಿದ್ದಾರೆ. ಇದೀಗ ಅವರ ಮಗ ಡಾ.ಸೂರಜ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ನೀವು ನಮ್ಮ ಬೆನ್ನಿಗೆ ಇದ್ದರೆ ನಮಗೆ ಮತ್ತಷ್ಟು ಶಕ್ತಿ, ಉತ್ಸಾಹ ಸಿಗುತ್ತದೆ ಎಂದರು.

    ಇಡೀ ರಾಜ್ಯವನ್ನೇ ಮಾದರಿ ಮಾಡಬೇಕೆನ್ನುವ ಸಂಕಲ್ಪದಿಂದ ನನ್ನ ಆರೋಗ್ಯವನ್ನೂ ಲೆಕ್ಕಿಸದೆ ಏಕಾಂಗಿ ಹೋರಾಟ ನಡೆಸುತ್ತಿದ್ದೇನೆ. ಪಂಚರತ್ನ ಯೋಜನೆಗಳ ಜಾರಿಗೆ 2.5 ಲಕ್ಷ ಕೋಟಿ ರೂ. ಬೇಕು. ಇಷ್ಟೊಂದು ಹಣ ಎಲ್ಲಿಂದ ತರುತ್ತಾನೆ ಎಂಬ ವಿರೋಧಿಗಳ ಮಾತಿಗೆ ಈಗಾಗಲೇ ಸಾಲಮನ್ನಾ ಮೂಲಕ ಉತ್ತರ ನೀಡಲಾಗಿದೆ ಎಂದರು.

    ಶಾಸಕರಾದ ಎಚ್.ಡಿ.ರೇವಣ್ಣ, ಸಿ.ಎನ್.ಬಾಲಕೃಷ್ಣ, ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಮಾಜಿ ಎಂಎಲ್ಸಿ ರಮೇಶ್‌ಗೌಡ, ಮುಖಂಡರಾದ ರಮೇಶ್, ಪುಟ್ಟಸ್ವಾಮಿಗೌಡ, ಅಶೋಕ್, ರಂಗಸ್ವಾಮಿ ಸೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts