More

    ನೈಋತ್ಯ ರೈಲ್ವೆಯಿಂದ ಸ್ವಚ್ಛತಾ ಪಾಕ್ಷಿಕ

    ಹುಬ್ಬಳ್ಳಿ: ಮಹಾತ್ಮಾ ಗಾಂಧಿ ಜನ್ಮದಿನೋತ್ಸವ ಅಂಗವಾಗಿ ಕೇಂದ್ರ ಸರ್ಕಾರ ಕೈಗೊಂಡಿದ್ದ ಸ್ವಚ್ಛತಾ ಪಾಕ್ಷಿಕ ನಿಮಿತ್ತ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಸೆ. 16 ರಿಂದ 30ರವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ರೈಲ್ವೆ ನಿಲ್ದಾಣ, ಕಾಲನಿ, ಯಾರ್ಡ್​ಗಳಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿ ಮತ್ತು ವಿಭಾಗಗಳಲ್ಲಿಯೂ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಸ್ವಚ್ಛತಾ ಪಾಕ್ಷಿಕ ಸಮರ್ಪಕ ಅನುಷ್ಠಾನಕ್ಕಾಗಿ ವಲಯ ಮಟ್ಟದಲ್ಲಿ ಮುಖ್ಯ ರೋಲಿಂಗ್ ಸ್ಟಾಕ್ ಇಂಜಿನಿಯರ್ ಹಾಗೂ ವಿಭಾಗದಲ್ಲಿ ಹೆಚ್ಚುವರಿಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿತ್ತು.

    ಸ್ವಚ್ಛತಾ ತಿಳಿವಳಿಕೆ, ಕೋವಿಡ್ ಹಿನ್ನೆಲೆಯಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ಸಸಿ ನೆಡುವ, ನಿತ್ಯ ಸ್ವಚ್ಛತಾ ಸಂವಾದ, ಸ್ವಚ್ಛ ನಿಲ್ದಾಣ, ಸ್ವಚ್ಛ ರೈಲ್​ಗಾಡಿ, ಸ್ವಚ್ಛ ಪರಿಸರ, ಸ್ವಚ್ಛ ಆಹಾರ, ಸ್ವಚ್ಛ ನೀರು, ಶೌಚಗೃಹ ಸ್ವಚ್ಛತೆ ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ಸ್ವಚ್ಛ ಸ್ಪರ್ಧೆಯ ಅಂಗವಾಗಿ ನಗರದ ಗದಗ ರಸ್ತೆಯ ರೈಲ್ವೆ ಮ್ಯೂಸಿಯಂನಲ್ಲಿ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ 111 ಮಕ್ಕಳು ಭಾಗವಹಿಸಿದ್ದರು. ಅ. 2ರಂದು ಸ್ಪರ್ಧೆಯ ಫಲಿತಾಂಶ ಘೋಷಿಸಲಾಗುವುದು. ವಲಯದ ಮಹಾ ಪ್ರಬಂಧಕ ಎ.ಕೆ. ಸಿಂಗ್ ಮಾತನಾಡಿ, ಸ್ವಚ್ಛ ಭಾರತ ನಿರ್ವಣಕ್ಕೆ ರೈಲ್ವೆ ಬದ್ಧವಾಗಿದೆ. ಮಹಾತ್ಮಾ ಗಾಂಧೀಜಿ ಹೇಳಿದಂತೆ ಸ್ವಚ್ಛತೆಯೇ ದೈವಭಕ್ತಿ ಮತ್ತು ಯೋಗದ ಮೆಟ್ಟಿಲು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts