More

    ನೆರೆ ಇಳಿದ ಬಳಿಕ ಬೆಳೆ ಹಾನಿ ಸಮೀಕ್ಷೆ

    ಕಾರವಾರ: ಪ್ರವಾಹದಿಂದ 690 ಹೆಕ್ಟೇರ್​ನಷ್ಟು ಬೆಳೆ ಹಾನಿಯಾಗಿದ್ದು, ನೆರೆ ಸಂಪೂರ್ಣ ಇಳಿದ ಬಳಿಕ ಸಮೀಕ್ಷೆ ನಡೆಸಿ, ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ನಗರಕ್ಕೆ ಆಗಮಿಸಿದ್ದ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಕೆಇಬಿ, ಪಿಡಬ್ಲ್ಯುಡಿ ಸೇರಿ ಜಿಲ್ಲೆಯ ಹಲವು ಸಾರ್ವಜನಿಕ ಆಸ್ತಿಗಳಿಗೆ ನೆರೆಯಿಂದ ಸುಮಾರು 5 ಕೋಟಿ ರೂ. ಹಾನಿಯಾಗಿದೆ. ಅದರ ಸಮಗ್ರ ವರದಿ ತರಿಸಿ ಸರ್ಕಾರಕ್ಕೆ ಹಣ ಕೋರಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಆಗಸ್ಟ್ 1 ರಿಂದ ಅನ್ವಯವಾಗುವಂತೆ ಹೊಸ ನೆರೆ ಪರಿಹಾರ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಶೇ. 25 ಕ್ಕಿಂತ ಕಡಿಮೆ ಹಾನಿಯಾದ ಮನೆಗಳಿಗೆ 50 ಸಾವಿರ, ಶೇ. 50 ರವರೆಗೆ ಹಾನಿಯಾದ ಮಮನೆಗಳಿಗೆ 3 ಲಕ್ಷ ಹಾಗೂ 50 ಕ್ಕಿಂತ ಹೆಚ್ಚು ಹಾನಿಯಾದ ಮನೆಗಳಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದರು. ಕಳೆದ ವರ್ಷ ನೆರೆಯಿಂದ ಉಂಟಾದ ಹಾನಿಯಿಂದ ಪರಿಹಾರ ದೊರಕದವರ ಪಟ್ಟಿ ಮಾಡಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದರು.

    ಮೀನುಗಾರ ಮಾರುಕಟ್ಟೆ ಉದ್ಘಾಟನೆಗೆ ಸಹಕರಿಸಿ
    ಮೀನುಗಾರ ಮಹಿಳೆಯರ ಹಾಗೂ ವ್ಯಾಪಾರಸ್ಥರ ಸಮಸ್ಯೆ ಬಗೆಹರಿಸಲಿದ್ದೇವೆ. ಆಗಸ್ಟ್ 15 ರಂದು ನೂತನ ಮಾರುಕಟ್ಟೆ ಉದ್ಘಾಟನೆಗೆ ಮಾಡಲಿದ್ದು, ಅದಕ್ಕೆ ಸಹಕರಿಸಿ ಎಂದು ಸಚಿವ ಶಿವರಾಮ ಹೆಬ್ಬಾರ ಮೀನುಗಾರ ಮುಖಂಡರಲ್ಲಿ ಮನವಿ ಮಾಡಿದರು.

    ತಮ್ಮನ್ನು ಭೇಟಿಯಾದ ಮೀನುಗಾರ ಮುಖಂಡರ ಜತೆಗೆ ಅವರು ಮಂಗಳವಾರ ಮಾತನಾಡಿದರು. ‘ಕೆಲವು ವ್ಯಾಪಾರಸ್ಥರು ಮಳಿಗೆಗಳ ತೆರವಿಗೆ ಆಕ್ಷೇಪಿಸಿ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಯೋಜನೆಯಂತೆ ಮೀನು ಮಾರುಕಟ್ಟೆ ಕಟ್ಟಡ ನಿರ್ವಣವಾಗಿಲ್ಲ. ಇದರಿಂದ ಎಲ್ಲ ಮೀನು ಮಾರಾಟ ಮಹಿಳೆಯರಿಗೆ ಹೊಸ ಮಾರುಕಟ್ಟೆಯಲ್ಲಿ ಕೂರಲು ಸ್ಥಳಾವಕಾಶವಿಲ್ಲ. ಆಕ್ಷೇಪ ಮಾಡಿದ ವ್ಯಾಪಾರಸ್ಥರಿಗೆ ಹೊಸ ಕಟ್ಟಡದ ಕೆಲವು ಮಳಿಗೆಗಳನ್ನು ಹರಾಜಿಲ್ಲದೆ ಒದಗಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಮೀನುಗಾರ ಮುಖಂಡರು ಆಗ್ರಹಿಸಿದರು. ಆದರೆ, ಅದಕ್ಕೆ ಉತ್ತರಿಸದ ಸಚಿವರು ಕಟ್ಟಡ ಉದ್ಘಾಟನೆಗೆ ಸಹಕರಿಸಿ, ಸಮಸ್ಯೆ ಬಗೆಹರಿಸೋಣ ಎಂದರು. ರಾಜು ತಾಂಡೇಲ, ಚೇತನ ಹರಿಕಂತ್ರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts