More

    ನಿರುದ್ಯೋಗ ನಿವಾರಣೆಗೆ ನವಚೈತನ್ಯ

    ಕಲಬುರಗಿ: ನಿರುದ್ಯೋಗ ಸಮಸ್ಯೆ ನಿವಾರಣೆಗೆ ಪೂರಕವಾಗಿ ಯುವ ಸಮುದಾಯಕ್ಕೆ ಉದ್ಯೋಗ ಕೌಶಲ ಜತೆಗೆ ನಿರುದ್ಯೋಗಿ ಮತ್ತು ಕಂಪನಿಗಳ ನಡುವೆ ಸೇತುವೆಯಾಗಿ ಕೆಲಸ ಮಾಡಲು ನವ ಚೈತನ್ಯ ಯೋಜನೆ ರೂಪಿಸಲಾಗಿದೆ ಎಂದು ಕರ್ನಾಟಕ ಕೌಶಲ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷೆ ಕೆ.ರತ್ನಪ್ರಭಾ ಹೇಳಿದರು.
    ಕಲ್ಯಾಣ ಕರ್ನಾಟಕ ಯುವ ಸಬಲೀಕರಣ ವೇದಿಕೆಯು ಕೋರಂಟಿ ಹನುಮಾನ ಗುಡಿ ಹತ್ತಿರದ ಸರ್ ಎಂ.ವಿಶ್ವೇಶ್ವರಯ್ಯ ಎಜುಕೇಶನಲ್ ಟ್ರಸ್ಟ್ ಆವರಣದಲ್ಲಿ ಸ್ಥಾಪಿಸಿರುವ ಯುವ ಕೌಶಲ ಸಮೃದ್ಧಿ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಯುವಕರಿಗೆ ಕೌಶಲ ಪರಿಣತಿ ಜತೆಗೆ ಉದ್ಯೋಗ ಕೊಡಿಸಲು ಪ್ರಾಧಿಕಾರ ಶ್ರಮಿಸುತ್ತಿದೆ ಎಂದರು.
    ಪ್ರಾಧಿಕಾರದ ಫೆಸಿಲಿಟೇಟ್ ಸೆಂಟರ್ ಆಗಿ ಕಲಬುರಗಿಯಲ್ಲಿ ಇಂದು ಆರಂಭಗೊಂಡಿರುವ ಈ ಕೇಂದ್ರಕ್ಕೆ ಹೊಸ ಹೊಣೆ ವಹಿಸಲಾಗುವುದು. ಕಲಬುರಗಿಯಿಂದಲೇ ಪ್ರಾಧಿಕಾರದ ಪ್ರಥಮ ಕೆಲಸ ಶುರು ಮಾಡುವ ಮೂಲಕ ಯುವಕ-ಯುವತಿಯರಿಗೆ ಕೊಡುಗೆ ನೀಡಲು ಉದ್ದೇಶಿಸಿದ್ದೇನೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನ್ಮದಿನ ಹಿನ್ನೆಲೆಯಲ್ಲಿ ಈ ಭಾಗಕ್ಕೆ ಕೊಡುಗೆಯಾಗಿ ಯೋಜನೆ ರೂಪಿಸಿದ್ದಾಗಿ ತಿಳಿಸಿದರು.
    ರಾಜ್ಯದಲ್ಲಿ 6.50 ಲಕ್ಷ ಸಣ್ಣ ಕೈಗಾರಿಕೆಗಳಿದ್ದು, ಪ್ರತಿಯೊಂದರಲ್ಲಿ ಮೂವರಿಗೆ ಉದ್ಯೋಗ ನೀಡಿದರೆ 25 ಲಕ್ಷ ಯುವಕ-ಯುವತಿಯರಿಗೆ ಕೆಲಸ ಸಿಕ್ಕಂತಾಗಲಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ತಾವು ಬೀದರ್, ರಾಯಚೂರು ಜಿಲ್ಲೆಗಳಲ್ಲಿ ಎಸಿ, ಡಿಸಿ, ಕಲಬುರಗಿಯಲ್ಲಿ ಆರ್ಸಿ ಆಗಿ ಕೆಲಸ ಮಾಡಿದ ಸಂದರ್ಭದಲ್ಲಿ ಶಾಲೆಗೆ ಹೋಗುವ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇತ್ತು. ಈಗ ಹೆಚ್ಚಳಗೊಂಡಿದೆ ಎಂದು ರತ್ನಪ್ರಭಾ ಹೇಳಿದರು.
    ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅಧ್ಯಕ್ಷತೆ ವಹಿಸಿದ್ದರು. ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ, ಎಸ್ಬಿಯು ಕುಲಪತಿ ಡಾ.ನಿರಂಜನ ನಿಷ್ಠಿ, ಜಿಲ್ಲಾಧಿಕಾರಿ ಶರತ್ ಬಿ., ಜಿಪಂ ಸಿಇಒ ಡಾ.ರಾಜಾ ಪಿ., ಸಮಾಜ ಸೇವಕಿ ಜಯಶ್ರೀ ಬಸವರಾಜ ಮತ್ತಿಮೂಡ, ಮೈಸೂರು ಕೌಶಲ ಸಂಸ್ಥೆಗಳ ಅಧ್ಯಕ್ಷ ಆರ್.ರಘು, ಎಚ್ಕೆಸಿಸಿಐ ಉಪಾಧ್ಯಕ್ಷ ಶರಣು ಪಪ್ಪಾ, ಕಾರ್ಯದರ್ಶಿ ಶಶಿಕಾಂತ ಪಾಟೀಲ್, ಖಜಾಂಚಿ ರವಿಕುಮಾರ ಸರಸಂಬಿ, ಗುವಿವಿ ಪ್ರಾಧ್ಯಾಪಕ ಡಾ.ಎ. ದಯಾನಂದ, ಕಲ್ಯಾಣ ಕನರ್ಾಟಕ ಯುವ ಸಬಲೀಕರಣ ವೇದಿಕೆ ಪೋಷಕರಾದ ಡಾ.ಸರ್ವಮಂಗಳ ಪಾಟೀಲ್, ಉಪಾಧ್ಯಕ್ಷೆ ಸುಜಾತಾ ಪಾಟೀಲ್ ಇತರರಿದ್ದರು.

    ದಲ್ಲಾಳಿಗಳ ಹಾವಳಿ ಇಲ್ಲದೆ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುವಂತೆ ಮಾಡುವುದು ಬಹುಮುಖ್ಯವಾಗಿದೆ. ಯುವ ಸಮುದಾಯ ಒಳ್ಳೆಯ ಕೆಲಸದ ಜತೆಗೆ ಹಣ ಗಳಿಕೆ ಮಾಡಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಲೇ ಇದೆ. ವಿದ್ಯಾರ್ಹತೆಗೆ ತಕ್ಕ ಕೌಶಲ ಬೆಳೆಸಿಕೊಳ್ಳುವ ಮೂಲಕ ಉದ್ಯೋಗ ಪಡೆಯಲು ಮುಂದಾಗಿ.
    | ಶರತ್ ಬಿ. ಜಿಲ್ಲಾಧಿಕಾರಿ


    ಯುವಶಕ್ತಿ ಸದ್ಬಳಕೆ ಆಗುವಂತೆ ಕೇಂದ್ರದಲ್ಲಿ ಎಸ್ಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫೇಲ್, ಪಾಸಾದ ಯುವಕ, ಯುವತಿಯರಿಗೆ ಕೌಶಲ ಅಭಿವೃದ್ಧಿಗೆ ಪೂರಕವಾಗಿ ಸೂಕ್ತ ತರಬೇತಿ ನೀಡಲಾಗುವುದು. ಮೊದಲ ಹಂತದಲ್ಲಿ ಕಲಬುರಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಯವರಿಗೆ ತರಬೇತಿ ನೀಡಲಾಗುತ್ತಿದೆ. ಕೆಲ ಕಂಪನಿಗಳ ಸಹಯೋಗವೂ ಸಿಕ್ಕಿದೆ.
    | ಡಾ.ಸರ್ವಮಂಗಳ ಪಾಟೀಲ್/ ಸುಜಾತಾ ಪಾಟೀಲ್
    ಕಲ್ಯಾಣ ಕನರ್ಾಟಕ ಯುವ ಸಬಲೀಕರಣ ವೇದಿಕೆ ಪ್ರಮುಖರು


    ಜನರ ಬೇಡಿಕೆಯಂತೆ ಉದ್ಯೋಗಗಳನ್ನು ಸ್ಥಾಪಿಸಬೇಕು. ಅಗಲೇ ಉತ್ಪಾದನೆ ಆಗುವ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತದೆ. ಕಲ್ಯಾಣ ಕನರ್ಾಟಕದ ಯುವ ಸಮುದಾಯ ಉತ್ತಮ ಕೆಲಸಗಳನ್ನು ಧಕ್ಕಿಸಿಕೊಳ್ಳಲು ಕೌಶಲ ಬೆಳೆಸಿಕೊಳ್ಳಬೇಕು. ಮುಖ್ಯಮಂತ್ರಿಗಳು ಉದ್ಯೋಗ ಸೃಷ್ಟಿಗೆ ಒತ್ತು ನೀಡುತ್ತಿದ್ದಾರೆ. ಲಿಂಗರಾಜಪ್ಪ ಅಪ್ಪ ಮಾಡುತ್ತಿರುವ ಕೃಷಿ ಆಧಾರಿತ ಉದ್ಯೋಗದ ಪರಿಕಲ್ಪನೆ ಅಮೋಘವಾಗಿದೆ.
    | ಮಾಲೀಕಯ್ಯ ಗುತ್ತೇದಾರ್ ಮಾಜಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts