More

    ನಿರಂತರ ದೋಣಿ ವಿಹಾರಕ್ಕೆ ಪ್ರಯತ್ನ

    ಚನ್ನಮ್ಮನ ಕಿತ್ತೂರು, ಬೆಳಗಾವಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದ ಐತಿಹಾಸಿಕ ತುಂಬು ಕೆರೆಯಲ್ಲಿ ಕಿತ್ತೂರು ಉತ್ಸವದ ಅಂಗವಾಗಿ ಜಲ ಸಾಹಸ ಕ್ರೀಡೆ ಮತ್ತು ದೋಣಿ ವಿಹಾರ ಆಯೋಜಿಸಲಾಗಿತ್ತು. ಇಲ್ಲಿ ರ‌್ಯಾಪ್ಟಿಂಗ್, ಸ್ಪೀಡ್ ಬೋಟ್, ಜನಾನ ರೈಡ್, ಕಯಾಕಿಂಗ್ ಬೋಟ್‌ಗಳಿದ್ದು, ಇವು ಕಿತ್ತೂರು ಉತ್ಸವದ ಮೆರುಗು ಹೆಚ್ಚಿಸಿದವು. ಕಿತ್ತೂರು ಉತ್ಸವದ ಅಂಗವಾಗಿ ಬೆಳಗಾವಿ ಜಿಲ್ಲಾಡಳಿತ ಹಾಗೂ ಕಿತ್ತೂರು ಉತ್ಸವ ಕ್ರೀಡಾ ಸಮಿತಿಯಿಂದ ಆಯೋಜಿಸಲಾಗಿದ್ದ ಜಲಸಾಹಸ ಕ್ರೀಡೆ ಮತ್ತು ದೋಣಿ ವಿಹಾರಕ್ಕೆ ರಿಬ್ಬನ್ ಕತ್ತರಿಸುವ ಮೂಲಕ ಶಾಸಕ ಮಹಾಂತೇಶ ದೊಡಗೌಡರ ಚಾಲನೆ ನೀಡಿ, ಕಿತ್ತೂರು ಉತ್ಸವಕ್ಕೆ ಮತ್ತಷ್ಟು ಆಕರ್ಷಣೆ ನೀಡುವ ಉದ್ದೇಶದಿಂದ ಜಲ ಸಾಹಸ ಕ್ರೀಡೆ ಮತ್ತು ದೋಣಿ ವಿಹಾರ ಆಯೋಜಿಸಲಾಗಿದೆ. ಎಲ್ಲರೂ ಪಾಲ್ಗೊಳ್ಳುವ ಮೂಲಕ ಜಲಕ್ರೀಡೆಯ ಆನಂದ ಸವಿಯಬೇಕು. ಮುಂಬರುವ ದಿನಗಳಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಿ, ನಿರಂತರ ದೋಣಿ ವಿಹಾರಕ್ಕೆ ಅನುಕೂಲ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದರು. ಶಾಸಕ ಮಹಾಂತೇಶ ದೊಡಗೌಡರ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೇರಿ ಹಲವು ಅಧಿಕಾರಿಗಳು ದೋಣಿ ವಿಹಾರ ಮತ್ತು ಜಲಕ್ರೀಡೆಯಲ್ಲಿ ಸಂಚರಿಸಿ ಸಂಭ್ರಮಿಸಿದರು.

    ಜಿಪಂ ಸಿಇಒ ಎಚ್.ವಿ.ದರ್ಶನ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಿಲ್ಲಾ ಉಪನಿರ್ದೇಶಕ ಜಿನೇಶ್ವರ ಪಡನಾಡ, ಉಪವಿಭಾಗಾಧಿಕಾರಿ ಶಶಿಧರ ಬಗಲಿ, ತಹಸೀಲ್ದಾರ್ ಸೋಮಲಿಂಗಪ್ಪ ಹಾಲಗಿ, ತಾಪಂ ಇಒ ಸುಭಾಷ ಸಂಪಗಾವಿ, ಬಿಜೆಪಿ ಕಿತ್ತೂರು ಮಂಡಲ ಅಧ್ಯಕ್ಷ ಡಾ.ಬಸವರಾಜ ಪರವಣ್ಣವರ, ಬಸನಗೌಡ ಶಿದ್ರಾಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts