More

    ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಿ

    ಬ್ಯಾಡಗಿ: ಪಟ್ಟಣದ ಒಳಚರಂಡಿ ಇತರೆ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ಇಂಜಿನಿಯರ್​ಗೆ ಸೂಚಿಸಿದರು.

    ಬೆಟ್ಟದ ಮಲ್ಲೇಶ್ವರ ಗುಡ್ಡದಲ್ಲಿ ನಿರ್ವಿುಸಲಾಗುತ್ತಿರುವ ಜಲಾಗಾರ ಹಾಗೂ ಯುಜಿಡಿ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿ ಅವರು ಮಾತನಾಡಿದರು.

    ಪಟ್ಟಣದ 23 ವಾರ್ಡ್​ಗಳು ಹಾಗೂ ಹೊಸ ಬಡಾವಣೆಗಳಿಗೆ ಅನುಕೂಲವಾಗುವಂತೆ ನಿರ್ವಿುಸಲಾಗುತ್ತಿರುವ ಒಳಚರಂಡಿ ಕಾಮಗಾರಿಗೆ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದಿಂದ 65.47 ಕೋಟಿ ರೂ. ಹಾಗೂ 24*7 ಕುಡಿಯುವ ನೀರು ಪೂರೈಕೆ ಯೋಜನೆಗೆ 44.57 ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಹೆಚ್ಚುವರಿಯಾಗಿ ರಾಣೆಬೆನ್ನೂರಿನಿಂದ ಬ್ಯಾಡಗಿ ಪೈಪ್​ಲೈನ್ ನವೀಕರಣಕ್ಕೆ 8 ಕೋಟಿ ರೂ, ಮನೆ ಮನೆಗಳಿಗೆ ನೀರಿನ ಪೈಪ್, ಚೇಂಬರ್ ಅಳವಡಿಸಲು 2.5 ಕೋಟಿ ರೂ. ಅನುದಾನ ಮಂಜೂರಾಗಿದೆ. ಇಂಜಿನಿಯರ್ ನಿರ್ಲಕ್ಷ್ಯ ಮಾಡದೇ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಚೇಂಬರ್ ಹಾಗೂ ಪೈಪ್​ಲೈನ್​ಗಾಗಿ ಅಲ್ಲಲ್ಲಿ ರಸ್ತೆ ಕೀಳಲಾಗಿದ್ದು, ಕೂಡಲೇ ಎಲ್ಲ ರಸ್ತೆಗಳನ್ನು ದುರಸ್ತಿ ಗೊಳಿಸಬೇಕು ಎಂದು ಸೂಚಿಸಿದರು.

    ಪುರಸಭೆ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಮಾತನಾಡಿ, ಎಲ್ಲ ವಾರ್ಡ್​ಗಳಲ್ಲಿ ಯುಜಿಡಿ ಪೈಪ್​ಲೈನ್ ಹಾಗೂ ಚೇಂಬರ್ ನಿರ್ವಿುಸಲಾಗುತ್ತದೆ. ಗಾಂಧಿನಗರ, ವಿದ್ಯಾನಗರ, ಬಸವೇಶ್ವರ ನಗರ, ನೆಹರು ನಗರಗಳಲ್ಲಿ ಪ್ರಾಯೋಗಿಕವಾಗಿ ಸಂಪರ್ಕ ನೀಡಲಾಗುತ್ತದೆ. ಮಲ್ಲೂರು ರಸ್ತೆ ಬಳಿಯ ಪುರಸಭೆ ಜಾಗದಲ್ಲಿ ಒಳಚರಂಡಿ ನೀರು ಸಂಗ್ರಹಿಸಿ, ಶುದ್ಧೀಕರಿಸಿ ಹೊರಬಿಡುವ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿನವೂ ಮನೆಮನೆಗೆ ಕಸ ಸಂಗ್ರಹಿಸುವ ಯೋಜನೆ ಜಾರಿಯಿದ್ದು, ಸಾರ್ವಜನಿಕರು ಪಟ್ಟಣದ ಸ್ವಚ್ಛತೆಗೆ ಸಹಕಾರ ನೀಡಬೇಕು ಎಂದರು. ಸಹಾಯಕ ಕಾರ್ಯಪಾಲಕ ಅಧಿಕಾರಿ ನವೀನ ಕುಮಾರ ಎಚ್.ವಿ, ಇಂಜಿನಿಯರ್ ಎಂ. ಉಮೇಶ, ಮಹಾಂತೇಶ ಹಳ್ಳಿ, ಎ. ವೀರಾಚಾರ್ಯ, ಸುರೇಶ ಆಸಾದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts