More

    ನಾಳೆಯಿಂದ ಕೆಎಲ್‌ಇ ಕನ್ವೆನ್ಶನ್ ಹಾಲ್‌ನಲ್ಲಿ ಫ್ಯಾಶನವ್ಯಾ

    ಬೆಳಗಾವಿ: ನಗರದ ಕೆಎಲ್‌ಇ ಕನ್ವೆನ್ಶನ್ ಹಾಲ್‌ನಲ್ಲಿ ಡಿ.17 ಮತ್ತು 18ರಂದು ಬೆಳಗ್ಗೆ 10ರಿಂದ ರಾತ್ರಿ 8ರ ವರೆಗೆ ಫ್ಯಾಶನವ್ಯಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

    ಎರಡು ದಿನಗಳ ಫ್ಯಾಶನವ್ಯಾ ಪ್ರದರ್ಶನದಲ್ಲಿ ದೇಶಾದ್ಯಂತ ಹೆಸರು ವಾಸಿಯಾಗಿರುವ ಡಿಸೈನರ್ಸ್ ನಾವೀನ್ಯ ಪೂರ್ಣ ಉಡುಪು ಹಾಗೂ ಇತರ ವಸ್ತುಗಳು ಮಾರಾಟಕ್ಕಿವೆ.

    ಉಡುಪು, ಕಾಸ್ಮೆಟಿಕ್, ಆಭರಣ, ಮನೆ ಅಲಂಕರಿಸುವ ವಸ್ತುಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯ. ಪ್ರದರ್ಶನದಲ್ಲಿನ ವಸ್ತುಗಳು ಮಾರುಕಟ್ಟೆಗಳಲ್ಲಿ ಅಲಭ್ಯ. ಈ ಬಾರಿ ಪ್ರದರ್ಶನ ವೆಡ್ಡಿಂಗ್ ಸ್ಪೇಷಲ್ ಪ್ರದರ್ಶನವಾಗಿದೆ. ಮದುವೆ ಸಮಾರಂಭಗಳಿಗೆ ಪ್ರದರ್ಶನ ಸುವರ್ಣಾವಕಾಶ ಒದಗಿಸಿದೆ. 2008ರಲ್ಲಿ ಕಿರುತೆರೆ ಕಲಾವಿದ ಪವನ ಶಂಕರ, ಪತ್ನಿ ಯುಕ್ತಿ ಶಂಕರ ಅವರು, ಫ್ಯಾಶನಿಸ್ಟಾ ಪ್ರದರ್ಶನ ಆರಂಭಿಸಿದರು.

    ಇಲ್ಲಿಯವರೆಗೆ 27 ನಗರಗಳಲ್ಲಿ ಪ್ರದರ್ಶನ ಜರುಗಿದ್ದು, 10 ಲಕ್ಷ ಜನರು ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಬೆಳಗಾವಿ ನಗರದಲ್ಲಿ ನಡೆದ ಎರಡು ಪ್ರದರ್ಶನ ಯಶಸ್ಸು ಕಂಡಿದೆ. ಈ ಬಾರಿ ಮೂರನೇ ಬಾರಿ ಪ್ರದರ್ಶನ ಆಯೋಜಿಸಲಾಗುತ್ತಿದ್ದು, ಕೋವಿಡ್-19 ನಿಮಯಗಳನ್ನು ಪಾಲನೆ ಮಾಡಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts