More

    ನಾಲವಾರ ಮಠ ಮಹಿಳೆಯರ ತವರುಮನೆ

    ಚಿತ್ತಾಪುರ: ನಾಲವಾರ ಮಠ ಜಾತಿ, ಮತ, ಪಂಥಗಳ ಗಡಿ ಮೀರಿದ ಶ್ರೇಷ್ಠ ಕ್ಷೇತ್ರವಾಗಿದ್ದು, ನಾಡಿನ ಎಲ್ಲ ಮಹಿಳೆಯರ ತವರುಮನೆಯಾಗಿದೆ. ಶ್ರೀಮಠಕ್ಕೂ ಮಾತೆಯರಿಗೂ ಅವಿನಾಭಾವ ಸಂಬಂಧವಿದೆ ಪೀಠಾಧಿಪತಿ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರು ನುಡಿದರು.

    ನಾಲವಾರ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಲ್ಲಿ ಶ್ರೀ ಗೌರಮ್ಮ ತಾಯಿ ಅವರ 6ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಗುರುವಾರ ರಾತ್ರಿ ಆಯೋಜಿಸಿದ್ದ ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಶಿರ್ವವಚನ ನೀಡಿ, ಸಾಕಷ್ಟು ಕಷ್ಟಗಳನ್ನು ಅನುಭವಿಸಿಯೂ ಪರರಿಗೆ ನಲಿವನ್ನು ಹಂಚುವ ಸಹನಾ ಮೂರ್ತಿ ಮಹಿಳೆ. ಗೌರಮ್ಮ ತಾಯಿ ಅವರು ಮಠಕ್ಕೆ ಬರುವ ಭಕ್ತರಿಗೆ ಮಾತೃ ಹೃದಯದಿಂದ ಅನ್ನ, ಆಶ್ರಯ ನೀಡುತ್ತಿದ್ದರು. ಅವರನ್ನು ಭಕ್ತರು ಅನ್ನಪೂರ್ಣೇಶ್ವರಿ ಎಂದೇ ಕರೆಯುತ್ತಿದ್ದರು ಎಂದು ನೆನೆದರು.

    ಬಸವ ಸಮಿತಿ ಕಲಬುರಗಿ ಅಧ್ಯಕ್ಷೆ ಡಾ.ವಿಲಾಸವತಿ ಖೂಬಾ ಮಾತನಾಡಿ, ನಾಲವಾರ ಮಠ ಭಕ್ತರಿಗೆ ಕೇವಲ ಧಾರ್ಮಿಕ ಸಂಸ್ಕಾರ ನೀಡದೇ, ನೋವು-ನಲಿವುಗಳಿಗೆ ಸ್ಪಂದಿಸುವ ಮೂಲಕ ಸಾಮಾಜಿಕ ಸಾಂತ್ವಾನ ನೀಡುವ ತಾಣವಾಗಿದೆ. ಲಕ್ಷಾಂತರ ಭಕ್ತರು ಕೋರಿಸಿದ್ಧೇಶ್ವರ ಮಠವನ್ನು ಹಾಗೂ ಶ್ರೀ ಡಾ.ಸಿದ್ಧತೋಟೇಂದ್ರ ಸ್ವಾಮಿಗಳನ್ನು ಅತ್ಯಂತ ಭಕ್ತಿ ಭಾವದಿಂದ ಆರಾಧಿಸುತ್ತಾರೆ ಎಂದರು.

    ಬಸವ ಸಮಿತಿ ಕಲಬುರಗಿ ಘಟಕದ ಅಧ್ಯಕ್ಷೆ ವಿಲಾಸವತಿ ಖೂಬಾ ಅವರಿಗೆ ಪ್ರತಿಷ್ಠಿತ ಮಾತೋಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಕ್ತರಿಂದ ಶ್ರೀಗಳಿಗೆ ನಾಣ್ಯಗಳ ತುಲಾಭಾರ ನೆರವೇರಿತು. ಜಗದೇವಿ ಕಲಶೆಟ್ಟಿ ವಿಶೇಷ ಉಪನ್ಯಾಸ ನೀಡಿದರು. ಪ್ರಮುಖರಾದ ಶಕುಂತಲಾ ಮುತ್ತಗಿ, ಶಿವಲೀಲಾ ಮಳ್ಳಿಮಠ, ನಿರ್ಮಲಾ ಸ್ವಾಮಿ, ನಾಗಮ್ಮ ಪೊಲೀಸ್ ಪಾಟೀಲ್, ಗೌರಮ್ಮ ಜಾಲಹಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts