More

    ನಾರಿ ನಿನಗೊಂದು ಸ್ಯಾರಿ ಸ್ಪರ್ಧೆಯಿಂದ ಮಹಿಳೆಯರ ಜ್ಞಾನ ವೃದ್ಧಿ

    ಸಾಗರ: ವಿಜಯವಾಣಿ ಪತ್ರಿಕೆಯು ನಾರಿ ನಿನಗೊಂದು ಸ್ಯಾರಿ ಸ್ಪರ್ಧೆ ನಡೆಸುವ ಮೂಲಕ ಮಹಿಳೆಯರಿಗೆ ಸೀರೆಯನ್ನು ಬಹುಮಾನವಾಗಿ ಕೊಡುವುದರ ಜತೆಯಲ್ಲಿ ಜ್ಞಾನಾರ್ಜನೆಗೂ ಸಹಕರಿಸಿದೆ ಎಂದು ಆರ್ಯ ಈಡಿಗ ಮಹಿಳಾ ಸಮಾಜದ ಗೌರವಾಧ್ಯಕ್ಷೆ ದೀಪಾ ಕಾಗೋಡು ಹೇಳಿದರು.

    ‘ವಿಜಯವಾಣಿ’ ಏರ್ಪಡಿಸಿದ್ದ ನಾರಿ ನಿನಗೊಂದು ಸ್ಯಾರಿ ರಸಪ್ರಶ್ನೆ ಸ್ಪರ್ಧೆಯ ಸಾಗರ ತಾಲೂಕು ವಿಜೇತರನ್ನು ಶುಕ್ರವಾರ ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ ಅವರು ಮಾತನಾಡಿದರು.
    ಇಂದು ಎಲ್ಲ ವಿಚಾರಗಳಿಗೂ ಸಾಮಾಜಿಕ ಜಾಲತಾಣದ ಮೊರೆ ಹೋಗುತ್ತಿದ್ದೇವೆ. ಪತ್ರಿಕೆಗಳು ಪ್ರಪಂಚದ, ದೇಶದ, ರಾಜ್ಯದ ಅಲ್ಲದೇ ನಮ್ಮ ನಮ್ಮ ಜಿಲ್ಲೆಗಳ ವಿಚಾರವನ್ನು ನಮಗೆ ತಿಳಿಸುತ್ತವೆ. ಅದನ್ನು ಮೀರಿ ವಿಜಯವಾಣಿ ಪತ್ರಿಕೆ ಸ್ಪರ್ಧೆಯೊಂದರ ಮೂಲಕ ಮಹಿಳೆಯರಲ್ಲಿ ಓದಿನ ಆಸಕ್ತಿಯನ್ನು ಹೆಚ್ಚಿಸುತ್ತಿದೆ. ನಾನು ಪ್ರತಿದಿನವೂ ವಿಜಯವಾಣಿ ಪತ್ರಿಕೆಯನ್ನು ಓದುತ್ತೇನೆ, ಇದರಲ್ಲಿ ಯಾವುದೇ ವಿಚಾರಗಳನ್ನು ವಿಜೃಂಭಿಸುವುದಿಲ್ಲ. ಸುದ್ದಿಯನ್ನು ಯಥಾವತ್ತಾಗಿ ನಮಗೆ ತಲುಪಿಸುತ್ತಾರೆ. ಮಕ್ಕಳಲ್ಲಿ ಇಂದು ಪತ್ರಿಕೆ ಓದುವ ಆಸಕ್ತಿ ಕಡಿಮೆ ಆಗುತ್ತಿದ್ದು ನಾವು ಅದನ್ನು ಹೆಚ್ಚಿಸಬೇಕು ಎಂದರು.
    ವಿಜೇತರ ಆಯ್ಕೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಾಗರ ಟೌನ್ ಮಹಿಳಾ ಸಮಾಜದ ಅಧ್ಯಕ್ಷೆ ನಂದಾ ಗೊಜನೂರು ಮಾತನಾಡಿ, ಮಹಾಭಾರತದಲ್ಲಿಯೇ ಸೀರೆಯ ಉಲ್ಲೇಖ ಮತ್ತು ಮಹತ್ವ ಪರಿಚಯಿಸಲಾಗಿದೆ. ಮಹಿಳೆಯರಿಗೆ ಭೂಷಣವಾದ ಸೀರೆಯನ್ನು ವಿಜಯವಾಣಿ ಪತ್ರಿಕೆ ಸ್ಪರ್ಧೆಯ ಮೂಲಕ ಕೊಡುಗೆಯಾಗಿ ಕೊಡುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದರು.
    ‘ವಿಜಯವಾಣಿ’ ಪತ್ರಿಕೆಯ ಸಾಕಷ್ಟು ವರದಿಗಳು ಫಲಶ್ರುತಿ ಕಂಡಿವೆ. ಶರಾವತಿ ಹಿನ್ನೀರಿನ ಸೇತುವೆಯ ನಿರ್ಮಾಣವಾಗುತ್ತಿರುವುದೇ ಪತ್ರಿಕೆಯಲ್ಲಿ ನಿರಂತರವಾಗಿ ಪ್ರಕಟಗೊಂಡ ಕಾಲಪಾನಿ ಎನ್ನುವ ಸರಣಿ ಲೇಖನಗಳಿಂದ. ವಿಜಯವಾಣಿ ಸುದ್ದಿಯನ್ನು ಕೊಡುವುದರ ಜತೆಯಲ್ಲಿ ಸಂಕಷ್ಟ ಪರಿಹಾರಕ್ಕೂ ಸೇತುವೆಯಾಗಿ ನಿಂತಿದೆ. ನಾವೆಲ್ಲಾ ಪತ್ರಿಕೆಯ ದಿನನಿತ್ಯದ ಓದುಗರಾಗಿದ್ದೇವೆ ಎಂಬುದು ಹೆಮ್ಮೆ ಅನಿಸುತ್ತದೆ ಎಂದರು.
    ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಉಷಾ ರಮಣ ಮಾತನಾಡಿ, ಪ್ರಸ್ತುತ ದಿನದಲ್ಲಿ ಜನರಲ್ಲಿ ಅದರಲ್ಲಿಯೂ ಮಹಿಳೆಯರಲ್ಲಿ ಅಡುಗೆ ಕೋಣೆ ಮತ್ತು ಕೌಟುಂಬಿಕ ವಿಚಾರಗಳನ್ನು ಹೊರತುಪಡಿಸಿ ಚರ್ಚಿಸಲು ಇಂತಹ ಸ್ಪರ್ಧೆಗಳ ಅವಶ್ಯಕತೆ ಇದೆ. ವಿಜಯವಾಣಿ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆ ಏರ್ಪಡಿಸಿ ಮಹಿಳೆಯರಲ್ಲಿ ಹೆಚ್ಚಿನ ಓದಿಗೆ ಆಸಕ್ತಿ ಮೂಡುವಂತೆ ಮಾಡಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts