More

    ನಾಟ್ಯಚಾರ್ಯ ಎಂ.ವಿಷ್ಣುದಾಸ್ ಸಂಸ್ಮರಣಾ 30ನೇ ನೃತ್ಯೋತ್ಸವ


    ವಿಜಯವಾಣಿ ಸುದ್ದಿಜಾಲ ಮೈಸೂರು
    ಭಾರತೀಯ ನೃತ್ಯಕಲಾ ಪರಿಷತ್ ವತಿಯಿಂದ ಮೂರು ದಿನಗಳ ಕಾಲ ಕುವೆಂಪುನಗರದ ವೀಣೆಶೇಷಣ್ಣ ಭವನದಲ್ಲಿ ಆಯೋಜಿಸಿದ್ದ ನಾಟ್ಯಚಾರ್ಯ ಎಂ.ವಿಷ್ಣುದಾಸ್ ಸಂಸ್ಮರಣಾ 30ನೇ ನೃತ್ಯೋತ್ಸವ ಕಾರ್ಯಕ್ರಮ ಸಮಾಪ್ತಿಗೊಂಡಿತು.


    ಸೋಮವಾರ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಹಾಸನದ ಭಾರತೀಯ ಸಂಗೀತ ನೃತ್ಯಕಲಾ ಶಾಲೆಯ ನಿರ್ದೇಶಕಿ ವಿದುಷಿ ಕೆ.ಎಸ್.ಅಂಬಳೆ ರಾಜೇಶ್ವರಿ, ಚಾಮರಾಜನಗರದ ನೂಪುರ ನೃತ್ಯಾಂಜಲಿ ಸ್ಕೂಲ್ ಆಫ್ ಡ್ಯಾನ್ಸ್‌ನ ನಿರ್ದೇಶಕಿ ವಿದುಷಿ ಉಷಾ ವೇಣುಗೋಪಾಲ್ ಹಾಗೂ ಶ್ರೀಉಮಾಮಹೇಶ್ವರ ನೃತ್ಯಕಲಾ ಕ್ಷೇತ್ರದ ನಿರ್ದೇಶಕಿ ವಿದುಷಿ ಶ್ರೀಲಕ್ಷ್ಮೀಕುಮಾರ್ ಅವರನ್ನು ಸನ್ಮಾನಿಸ ಲಾ ಯಿತು. ಇದೆ ವೇಳೆ ಸಂಗೀತ ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿಭಾನಿಧಿಶಿವಂ, ವಿದ್ವತ್ ಪೂರ್ವ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ರಮ್ಯಾ ರಾಜೇಶ್, ವಿದ್ವತ್ ಅಂತಿಮ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಎಂ.ಎಸ್. ಅಮೃತ, ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಎಂ.ಪಿ.ಗೌರಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.


    ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ವಿದುಷಿ ಪಂಕಜ ರಾಮಕೃಷ್ಣಯ್ಯ, ಭಾರತೀಯ ನೃತ್ಯಕಲಾ ಪರಿಷತ್‌ನ ಗೌರವ ಕಾರ್ಯದರ್ಶಿ ವಿದುಷಿ ಡಾ.ಕುಮುದಿನಿ ಅಚ್ಚಿ ಇತರರಿದ್ದರು.
    ಸಭಾ ಕಾರ್ಯಕ್ರಮದ ಬಳಿಕ ಹಾಸನದ ಭಾರತೀಯ ಸಂಗೀತ ನೃತ್ಯಕಲಾ ಶಾಲೆಯ ವಿದುಷಿ ಕೆ.ಎಸ್.ಅಂಬಳೆ ರಾಜೇಶ್ವರಿ ಮತ್ತು ವಿದ್ಯಾರ್ಥಿಗಳ ವೃಂದ, ನಂದನಾ ಪ್ರದರ್ಶಕ ಕಲೆಗಳ ಕೇಂದ್ರದ ವಿದುಷಿ ವಾರಿಜ ನಳಿಗೆ ಮತ್ತು ತಂಡ ಹಾಗೂ ನೃತ್ಯ ವಿದ್ಯಾಪೀಠದ ವಿದುಷಿ ಅನಿತಾ ಅವರ ವಿದ್ಯಾರ್ಥಿ ವೃಂದದ ವತಿಯಿಂದ ಭರತನಾಟ್ಯ ಪ್ರದರ್ಶನ ನೆರವೇರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts