More

    ನಾಟಿ ಭತ್ತಕ್ಕೆ ಬೆಂಕಿ, ಬೇರು ಕೊಳೆ ರೋಗ

    ಮುಂಡಗೋಡ: ತಾಲೂಕಿನ ಪಾಳಾ ಹೋಬಳಿಯ ಇಂಗಳಕಿ ಹಾಗೂ ಕಲಕೊಪ್ಪ ಗ್ರಾಮಗಳ ವ್ಯಾಪ್ತಿಯ ರೈತರ ನಾಟಿ ಭತ್ತದ ಬೆಳೆಗೆ ಬೆಂಕಿ ಮತ್ತು ಬೇರು ಕೊಳೆ ರೋಗ ಕಂಡು ಬಂದಿದೆ.

    ಬೆಂಕಿ ರೋಗ ನಿಯಂತ್ರಣಕ್ಕೆ 1ಗ್ರಾಂ ಟ್ರೈಸೈಕ್ಲೋಜೋಲ್(ಬೀಮ್ ಪೌಡರ್) ಅನ್ನು 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಬೇರು ಕೊಳೆ ರೋಗದ ನಿಯಂತ್ರಣಕ್ಕೆ ಪ್ರೊಪಿಕೊನಾಜೋಲ್ 1 ಮಿ.ಲೀ. ಅನ್ನು 1ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು. 4 ದಿನಗಳ ನಂತರ 2 ಗ್ರಾಂ ಮಂಗಳ ಬಯೋ-20 ಸಸ್ಯ ವರ್ಧಕವನ್ನು 1 ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕುಲಕರ್ಣಿ ಪ್ರಕಟಣೆ ಮೂಲಕ ರೈತರಿಗೆ ಸಲಹೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts