More

    ನವೋದಯ ಪ್ರವೇಶ ಪರೀಕ್ಷೆ: 2565 ವಿದ್ಯಾರ್ಥಿಗಳು ಹಾಜರಿ: ಜಿಲ್ಲಾಧಿಕಾರಿ ರವೀಂದ್ರ ಪರಿಶೀಲನೆ

    ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳ 12 ಕೇಂದ್ರಗಳಲ್ಲಿ ಶನಿವಾರ ನವೋದಯ ಪರೀಕ್ಷೆ ನಡೆಯಿತು.

    ನವೋದಯ ಪ್ರವೇಶಕ್ಕಾಗಿ 3159 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 594 ಗೈರಾಗಿದ್ದು, ಒಟ್ಟು 2565 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹಾಗೂ ಗ್ರಾಮಾಂತರ ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಖುದ್ದು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಎಲ್ಲ ಕೇಂದ್ರಗಳಲ್ಲಿ ಪೊಲೀಸ್ ಬಂದೋಬಸ್ತ್, ಸಿಸಿ ಟಿವಿ ಕ್ಯಾಮರಾ ಕಣ್ಗಾವಲಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಇದರೊಂದಿಗೆ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಇತರ ಇಲಾಖೆ ಅಧಿಕಾರಿಗಳು ಸಹಕಾರ ನೀಡಿದರು ಎಂದು ಜವಾಹರ್ ನವೋದಯ ಶಾಲೆ ಪ್ರಾಂಶುಪಾಲ ಚಕ್ರವರ್ತಿ ತಿಳಿಸಿದ್ದಾರೆ.

    ಹಾಜರಾದ ವಿದ್ಯಾರ್ಥಿಗಳ ಮಾಹಿತಿ: ದೇವನಹಳ್ಳಿ ಸರ್ಕಾರಿ ಜೂನಿಯರ್ ಕಾಲೇಜ್ ಕೇಂದ್ರ ಹಾಗೂ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಯಲ್ಲಿ 389 ವಿದ್ಯಾರ್ಥಿಗಳ ಪೈಕಿ 322 ಹಾಜರಿ ಕಂಡುಬಂತು. ದೊಡ್ಡಬಳ್ಳಾಪುರ 902ರಲ್ಲಿ 724 ಹಾಜರಿ, ಹೊಸಕೋಟೆ 471ರಲ್ಲಿ 381 ಹಾಗೂ ನೆಲಮಂಗಲ ತಾಲೂಕಿನ ಐದು ಕೇಂದ್ರಗಳಲ್ಲಿ 1397 ವಿದ್ಯಾರ್ಥಿಗಳ ಪೈಕಿ 1138 ಮಕ್ಕಳು ಪರೀಕ್ಷೆ ಎದುರಿಸಿದ್ದಾರೆ.

    ನೆಲಮಂಗಲದಲ್ಲಿ 5 ಪರೀಕ್ಷಾ ಕೇಂದ್ರ, ದೊಡ್ಡಬಳ್ಳಾಪುರ 3 ಹಾಗೂ ಹೊಸಕೋಟೆ ಮತ್ತು ದೇವನಹಳ್ಳಿ ತಾಲೂಕಿನಲ್ಲಿ ತಲಾ 2 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡವಾರು ಪರೀಕ್ಷೆ ಎದುರಿಸಿದವರ ಸಂಖ್ಯೆ ಹೆಚ್ಚಿದೆ.
    ಚಕ್ರವರ್ತಿ ಪ್ರಾಂಶುಪಾಲ, ಜವಾಹರ್ ನವೋದಯ ಶಾಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts