More

    ನವೆಂಬರ್​ನಲ್ಲಿ ಟ್ರಾನ್ಸ್​ಫಾರ್ಮರ್ ನಿರ್ವಹಣಾ ಅಭಿಯಾನ

    ಬಣಕಲ್: ರಾಜ್ಯದಲ್ಲಿ ನಿರಂತರವಾಗಿ ಗುಣಮಟ್ಟದ ವಿದ್ಯುತ್ ನೀಡಲು ಬಿಜೆಪಿ ಸರ್ಕಾರ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ. ಇದರ ಭಾಗವಾಗಿ ವಿದ್ಯುತ್ ಟ್ರಾನ್ಸ್​ಫಾರ್ಮರ್​ಗಳನ್ನು ಸದಾ ಸುಸ್ಥಿತಿಯಲ್ಲಿಡಲು ರಾಜ್ಯಾದ್ಯಂತ ನ.1ರಿಂದ 15ರವರೆಗೆ ನಿರ್ವಹಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಇಂಧನ ಸಚಿವ ವಿ.ಸುನೀಲ್​ಕುಮಾರ್ ಹೇಳಿದರು.

    ಬಣಕಲ್​ನಲ್ಲಿ ಬುಧವಾರ 33/11 ಕೆವಿ ವಿದ್ಯುತ್ ಉಪಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಬೆಳಕು ಯೋಜನೆ ಮೂಲಕ ವಿದ್ಯುತ್ ರಹಿತ ಮನೆಗಳಿಗೆ ಸಂಪರ್ಕ ನೀಡಲಾಗಿದೆ. ಒಂದು ವರ್ಷದ ಅವಧಿಯಲ್ಲಿ 2.5 ಲಕ್ಷ ಮನೆಗಳಿಗೆ ವಿದ್ಯುತ್ ನೀಡಲಾಗಿದೆ. ಅಮೃತ ಜ್ಯೋತಿ ಯೋಜನೆಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಅನುಕೂಲವಾಗಿದೆ ಎಂದರು.

    ಕಾಫಿ ಬೆಳೆಗಾರರಿಗೆ 10 ಎಚ್​ಪಿವರೆಗಿನ ವಿದ್ಯುತ್ ಪಂಪ್​ಸೆಟ್​ಗಳಿಗೆ ಉಚಿತ ವಿದ್ಯುತ್ ನೀಡಲು ತೀರ್ವನಿಸಲಾಗಿದೆ. ಕಾಫಿ ವಾಣಿಜ್ಯ ಬೆಳೆ ಎಂಬ ಕಾರಣಕ್ಕೆ ಈ ಸೌಲಭ್ಯದಿಂದ ಹೊರಗಿಡಲಾಗಿತ್ತು. ಇದೀಗ ಸರ್ಕಾರ ಈ ನಿಯಮಾವಳಿ ಸಡಿಲ ಮಾಡಲು ಸಿದ್ಧವಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts