More

    ನಡೆಯದ ವ್ಯಾಪಾರ, ನಿಲ್ಲದ ಸಂಚಾರ

    ಬೆಳಗಾವಿ: ಕರೊನಾ ತಡೆಗಟ್ಟುವ ಉದ್ದೇಶದಿಂದ ಸರ್ಕಾರವು ಘೋಷಿಸಿರುವ ಜನತಾ ಕರ್ಯ್ೂ ಮೊದಲ ದಿನವೇ ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಹಾಗೂ ರೈತರು ಸಮಸ್ಯೆ ಎದುರಿಸಿದರು.

    ಜನತಾ ಕರ್ಯ್ೂ ದಿನಗಳಲ್ಲಿ ಬೆಳಗ್ಗೆ 6ರಿಂದ 10 ಗಂಟೆ ವರೆಗೆ ಮಾತ್ರ ತರಕಾರಿ ಸೇರಿ ಅಗತ್ಯ ವಸ್ತುಗಳ ಖರೀದಿಗೆ, ಮಾರಾಟಕ್ಕೆ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ, ಜಿಲ್ಲೆಯಲ್ಲಿ ಕರ್ಯ್ೂ ಮೊದಲ ದಿನವೇ ಮಾರುಕಟ್ಟೆಗಳಿಗೆ ಗ್ರಾಹಕರು ಬಾರದಿರುವ ಹಿನ್ನೆಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಪಾರ ನಡೆಯಲಿಲ್ಲ.

    ಮಾರಾಟಗಾರರ ಅಳಲು: ಬೀದಿ ಬದಿ ವ್ಯಾಪಾರಿಗಳು ಮತ್ತು ರೈತರು ತರಕಾರಿ, ಬಾಳೆಹಣ್ಣು ಸೇರಿ ಇನ್ನಿತರ ವಸ್ತುಗಳು ಮಾರಾಟವಾಗದೆ ಸಮಸ್ಯೆ ಎದುರಿಸಿದರು. ‘ಕರ್ಯ್ೂ ಸಂದರ್ಭದಲ್ಲಿ ಸರ್ಕಾರವು ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುವುದು ಸ್ವಲ್ಪ ನೆಮ್ಮದಿ ತಂದಿದೆ. ಆದರೆ, ಪೊಲೀಸರ ಕಠಿಣ ಕ್ರಮಗಳಿಂದಾಗಿ ಸಾರ್ವಜನಿಕರು ಮನೆಯಿಂದ ಹೊರಗಡೆ ಬರಲು ಭಯಪಡುತ್ತಿದ್ದಾರೆ.

    ಹೀಗಾಗಿ ಸೀಮಿತ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಪಾರ ನಡೆಯಲಿಲ್ಲ. ಜನರು ಖರೀದಿಸುತ್ತಾರೆ ಎಂದು ಸಗಟು ಮಾರುಕಟ್ಟೆ ಮತ್ತು ರೈತರ ಬಳಿ ತರಕಾರಿ, ಹಣ್ಣು ಖರೀದಿಸಿ ತಂದಿದ್ದರೂ ಅರ್ಧದಷ್ಟೂ ಮಾರಾಟವಾಗಿಲ್ಲ. ಹೀಗಾಗಿ ಬೆಳಗ್ಗೆ ಸಮಯದಂತೆ ಸಂಜೆಯೂ ಸಹ ಒಂದಿಷ್ಟು ಸಮಯ ತರಕಾರಿ ಮಾರಾಟಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದರೆ ಅನುಕೂಲವಾಗುತ್ತದೆ ಎಂದು ವ್ಯಾಪಾರಿಗಳಾದ ರಾಹುಲ್ ಅನಗೋಳ, ಮಕ್ಬೂಲ್‌ಸಾಬ್ ನದಾಫ್, ಸುರೇಶ ಅಷ್ಟೇಕರ್ ವಿನಂತಿಸಿದರು.

    ಸರಕು ಸಾಗಣೆಗೆ ಅವಕಾಶ: ಜನತಾ ಕರ್ಯ್ೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸಾರಿಗೆ ಬಸ್‌ಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ಖಾಸಗಿ ವಾಹನಗಳು, ಲಾರಿಗಳು ಎಂದಿನಂತೆ ಬೆಳಗಿನ ಸಮಯದಲ್ಲಿ ಸಂಚಾರ ನಡೆಸಿದವು. ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ಮಧ್ಯಾಹ್ನದ ನಂತರ ಹೆದ್ದಾರಿ, ಇತರ ರಸ್ತೆಗಳಲ್ಲಿ ಲಾರಿ, ಸರಕು ಸಾಗಣೆಯ ಗೂಡ್ಸ್ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts