More

    ನಕಲಿ ಎಟಿಎಂ ಕಾರ್ಡ್​ಗಳಿಂದ ವಂಚನೆ

    ಶಿವಮೊಗ್ಗ: ಶಿವಮೊಗ್ಗ, ಕಡೂರು, ತರೀಕೆರೆ ಸೇರಿದಂತೆ ರಾಜ್ಯದ ವಿವಿಧೆಡೆ 85 ಬಾರಿ ನಕಲಿ ಎಟಿಎಂ ಕಾರ್ಡ್ ಬಳಸಿ ಗ್ರಾಹಕರ ಖಾತೆಯಿಂದ ಹಣ ಡ್ರಾ ಮಾಡಿ ವಂಚಿಸುತ್ತಿದ್ದ ಅಂತಾರಾಜ್ಯ ಖದೀಮರು ತುಮಕೂರಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಉತ್ತರಪ್ರದೇಶದ ಬ್ರಿಜ್ ಬನ್ ಸರೋಜ್ (35) ಹರಿಲಾಲ್ (33) ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ ಭಾಗಿಯಾದ ಇನ್ನೂ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು ಶೋಧ ಕಾರ್ಯ ನಡೆದಿದೆ.

    ತಿಪಟೂರು, ಶಿರಾ, ಅರಸೀಕೆರೆ, ತುಮಕೂರು ಎಟಿಎಂಗಳಲ್ಲಿ ಹಣ ಡ್ರಾ ಆದ ಹಾಗೂ ಗ್ರಾಹಕರು ಕೊನೆಯದಾಗಿ ಹಣ ಡ್ರಾ ಮಾಡಿದ ಎಟಿಎಂಗಳ ತಪಾಸಣೆ ಮಾಡಿ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಲಾಗಿದೆ.

    ರಾಹುಲ್​ಕುಲ್​ದೀಪ್ ಸಿಂಗ್, ಅಂಕಿತ್, ಅಂಕುಶ್, ರಾಹುಲ್ ಸರೋಜ್​ನಾಗ ಮತ್ತಿತರರು ಮ್ಯಾಗ್ನೆಟಿಕ್ ಸ್ಟ್ರೈಪ್ ರೀಡರ್ ಹಾಗೂ ಪೋರ್ಟಬಲ್ ಮ್ಯಾಗ್ನೆಟಿಕ್ ಕಾರ್ಡ್ ರೆಕಾರ್ಡರ್ ಸಾಧನದಿಂದ ಎಟಿಎಂಗಳಲ್ಲಿ ಹಣ ಡ್ರಾ ಮಾಡಲು ಬರುತ್ತಿದ್ದವರ ಕಾರ್ಡ್ ಸ್ಕ್ಯಾನ್ ಮಾಡಿಕೊಂಡು ನಂತರ ನಕಲಿ ಕಾರ್ಡ್ ತಯಾರಿಸಿ, ಪಾಸ್​ವರ್ಡ್ ತಿಳಿದುಕೊಂಡು ಹಣ ಡ್ರಾ ಮಾಡುತ್ತಿದ್ದರು ಎನ್ನಲಾಗಿದೆ.

    ವಂಚನೆ ಎಲ್ಲೆಲ್ಲಿ?ಎಷ್ಟು?: ಶಿವಮೊಗ್ಗ4, ತರೀಕೆರೆ-3, ಕಡೂರು-2, ತುಮಕೂರು-4, ಕಲಬುರಗಿ-6, ರಾಯಚೂರು-4, ಲಿಂಗಸಗೂರು-6, ಕುಷ್ಟಗಿ-5, ಸಿಂಧನೂರು-3, ಬೆಳಗಾವಿ-3, ಕುಡ್ಲ ಗ್ರಾಮ-2, ಯಾದಗಿರಿ-4, ಚಿತ್ರದುರ್ಗ-4, ದಾವಣಗೆರೆ-5, ಚಿಕ್ಕೋಡಿ-3, ಹಾವೇರಿ-16, ಭದ್ರಾವತಿ-4, ರಾಣೆಬೆನ್ನೂರು-3, ಧಾರವಾಡ-4, ಹಿರಿಯೂರು-4

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts