More

    ನಕಲಿ ಇ- ಮೇಲ್ ಗಳಿಂದ ಎಚ್ಚರ!

    ಹುಬ್ಬಳ್ಳಿ: ಮೊಬೈಲ್ ನಂಬರ್, ಬ್ಯಾಂಕ್ ಅಕೌಂಟ್ ನಂಬರ್, ಒಟಿಪಿ ಮತ್ತಿತರ ಮಾಹಿತಿ ಪಡೆದು ವಂಚಿಸುತ್ತಿದ್ದ ಸೈಬರ್ ಕಳ್ಳರು ಇದೀಗ ಇ-ಮೇಲ್​ಗಳನ್ನು ಹ್ಯಾಕ್ ಮಾಡಿ, ಅದೇ ಹೆಸರಲ್ಲಿ ನಕಲಿ ಮೇಲ್ ಸೃಷ್ಟಿಸುವ ಮೂಲಕ ವಂಚಿಸುವ ಹೊಸ ಕುತಂತ್ರಕ್ಕೆ ಮುಂದಾಗಿದ್ದಾರೆ. ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟಿರುವ ನ್ಯೂ ಗವರ್ನ್​ವೆುಂಟ್ ಎಲೆಕ್ಟ್ರಿಕಲ್ ಫ್ಯಾಕ್ಟರಿ (ಎನ್​ಜಿಇಎಫ್) ಇ-ಮೇಲ್ ಅನ್ನೇ ಹ್ಯಾಕ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಸೈಬರ್ ಅಪರಾಧ ಲೋಕ ದಿನದಿಂದ ದಿನಕ್ಕೆ ವಿಸ್ತರಣೆಯಾಗುತ್ತಿದ್ದು, ಸೈಬರ್ ಕಳ್ಳರು ಹೊಸ ಬಗೆಯ ವಂಚನೆಯ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಶ್ರೀಮಂತರು, ದೊಡ್ಡ ಕಂಪನಿಗಳ ವ್ಯಾಪಾರ- ವಹಿವಾಟಿನ ಮೇಲೆ ಕಳ್ಳನೋಟ ಇಟ್ಟಿರುವ ವಂಚಕರು, ಇ-ಮೇಲ್​ಗಳನ್ನು ಹ್ಯಾಕ್ ಮಾಡಿ ಅದರಲ್ಲಿನ ಮಾಹಿತಿ ಕದ್ದು, ಅದೇ ಹೆಸರಿನ ಮತ್ತೊಂದು ಮೇಲ್ ಸೃಷ್ಟಿಸಿ ವಂಚಿಸುತ್ತಿದ್ದಾರೆ.

    ಇಂಥಹದ್ದೇ ಒಂದು ಘಟನೆ ಧಾರವಾಡದ ರಾಯಾಪುರದಲ್ಲಿ ನಡೆದಿದೆ. ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟಿರುವ ಇಂಡಕ್ಷನ್ ಮೋಟರ್ ಮತ್ತು ಎಲೆಕ್ಟ್ರಿಕಲ್ ಟ್ರಾನ್ಸ್​ಫಾರ್ಮರ್ ಉತ್ಪಾದಿಸುವ ನ್ಯೂ ಗವರ್ನ್​ವೆುಂಟ್ ಎಲೆಕ್ಟ್ರಿಕಲ್ ಫ್ಯಾಕ್ಟರಿ (ಎನ್​ಜಿಇಎಫ್) ಆನ್​ಲೈನ್ ಮೂಲಕ ವ್ಯವಹಾರ ನಡೆಸುತ್ತಿತ್ತು.

    ಉತ್ಪಾದನೆಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಬೆಂಗಳೂರಿನ ಹೈಟೆಕ್ ಬೇರಿಂಗ್ ಪ್ರೖೆವೇಟ್ ಲಿಮಿಟೆಡ್​ನಿಂದ ಆನ್​ಲೈನ್ ಮೂಲಕ ಖರೀದಿಸುತ್ತಿತ್ತು. ಕಚ್ಚಾ ವಸ್ತು ಕಳುಹಿಸುವಂತೆ ಎನ್​ಜಿಇಎಫ್ ಸೆ.12ರಂದು ಹೈಟೆಕ್ ಬೇರಿಂಗ್ ಕಂಪನಿಯ ್ಚಟಃಜಠಿಚ್ಝಿ.ಜ್ಞಿ ಗೆ ಮೇಲ್ ಕಳುಹಿಸಿತ್ತು. ಎನ್​ಜಿಇಎಫ್ ಮೇಲ್ ಹ್ಯಾಕ್ ಮಾಡಿದ್ದ ವಂಚಕರು ಹೈಟೆಕ್ ಬೇರಿಂಗ್ ಕಂಪನಿಯ ್ಚಟಃಜಚಿಠ್ಝಿ.ಜ್ಞಿ ಹೆಸರಲ್ಲಿ ನಕಲಿ ಮೇಲ್ ಸೃಷ್ಟಿಸಿದ್ದರು. ‘ಎಚ್​ಟಿಬಿಎಲ್’ ಬದಲು ‘ಎಚ್​ಬಿಟಿಎಲ್’ ಎಂದು ಬದಲಿಸಿ ಹೊಸ ಮೇಲ್ ಸೃಷ್ಟಿಸಿದ್ದರು.

    ನಕಲಿ ಮೇಲ್​ನಿಂದ ಟ್ಯಾಕ್ಸ್ ಇನ್​ವೈಸ್, ಬೇರೆ ಅಕೌಂಟ್ ನಂಬರ್ ಕಳುಹಿಸಿ ಹಣ ವರ್ಗಾಯಿಸುವಂತೆ ಸಂದೇಶ ರವಾನಿಸಿದ್ದರು. ಎಂದಿನಂತೆ ಮೇಲ್ ಮೂಲಕ ಆನ್​ಲೈನ್​ನಲ್ಲಿ ಹಣ ವರ್ಗಾವಣೆ ಮಾಡುತ್ತಿದ್ದ ಎನ್​ಜಿಇಎಫ್ 94,788 ರೂ. ಹಣ ವರ್ಗಾಯಿಸಿತ್ತು. ಎನ್​ಜಿಇಎಫ್​ನವರು ಮತ್ತೊಂದು ಕಂಪನಿಗೆ ಆರ್ಡರ್ ಮೇಲ್ ಕಳುಹಿಸಿದಾಗ ನಕಲಿ ಮೇಲ್​ನಿಂದ 1,35,464 ರೂ. ಕಳುಹಿಸುವಂತೆ ಉತ್ತರ ಬಂದಿದೆ. ಆಗ, ಎಚ್ಚೆತ್ತುಕೊಂಡ ಕಂಪನಿ ಹುಬ್ಬಳ್ಳಿ-ಧಾರವಾಡ ಸೈಬರ್ ಕ್ರೖೆಂ ಪೊಲೀಸ್ ಠಾಣೆಗೆ ದೂರು ನೀಡಿದೆ.

    ಇಂತಹ ಸೈಬರ್ ವಂಚನೆಯಿಂದ ಬಚಾವಾಗಲು ಜಾಗೃತಿ ಮತ್ತು ಎಚ್ಚರಿಕೆಯೊಂದೇ ಸದ್ಯಕ್ಕಿರುವ ಮಾರ್ಗ. ಒಂದು ವೇಳೆ ವಂಚನೆಯಾದಲ್ಲಿ ಕೂಡಲೇ ಪೊಲೀಸರ ಗಮನಕ್ಕೆ ತಂದರೆ ಅವರು ಆ ಮೇಲ್​ಗಳನ್ನು ಬ್ಲಾಕ್ ಮಾಡುವ ಮೂಲಕ ಹೆಚ್ಚಿನ ಹಾನಿ ತಪ್ಪಿಸುತ್ತಾರೆ.

    ಇ-ಮೇಲ್ ಬಳಸುತ್ತಿದ್ದರೆ ಹೀಗೆ ಮಾಡಿ

    * ಕಂಪನಿ ಅಥವಾ ವೈಯಕ್ತಿಕ ಇ-ಮೇಲ್​ಗಳನ್ನು ಅನ್ಯರಿಗೆ ಕೊಡಬೇಡಿ

    * ಹಣಕಾಸಿನ ವ್ಯವಹಾರವಿದ್ದಲ್ಲಿ ಸಂಬಂಧಪಟ್ಟವರಿಗೆ ಕರೆ ಮಾಡಿ ಖಚಿತಪಡಿಸಿಕೊಳ್ಳಿ

    * ಅಂಕಿ ಸಂಖ್ಯೆ ಮತ್ತು ಸಿಂಬಲ್​ಗಳುಳ್ಳ ಪಾಸ್​ವರ್ಡ್ ಬಳಸಿ

    * ಆಗಾಗ ಪಾಸ್​ವರ್ಡ್ ಬದಲಾಯಿಸುತ್ತಿರಿ

    * ಅಪರಿಚಿತ ಮೇಲ್​ಗೆ ಉತ್ತರಿಸಬೇಡ

    ದೊಡ್ಡ ದೊಡ್ಡ ಕಂಪನಿಗಳ ಆನ್​ಲೈನ್ ವ್ಯವಹಾರದ ಮೇಲೆ ಕಣ್ಣಿಟ್ಟಿರುವ ವಂಚಕರು ನಕಲಿ ಮೇಲ್ ಸೃಷ್ಟಿಸಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು. ವಂಚನೆಗೀಡಾದಲ್ಲಿ ತಕ್ಷಣ ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು.
    | ಎಸ್.ಬಿ. ಮಾಳಗೊಂಡ, ಇನ್ಸ್​ಪೆಕ್ಟರ್, ಹು-ಧಾ ಸೈಬರ್ ಕ್ರೖೆಂ ಪೊಲೀಸ್ ಠಾಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts