More

    ಧಾರವಾಡ ಜಿಲ್ಲೆಯಲ್ಲಿ 199 ಕರೊನಾ ಪ್ರಕರಣ

    ಧಾರವಾಡ: ಜಿಲ್ಲೆಯಲ್ಲಿ ಭಾನುವಾರ 199 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 7 ಜನ ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 14418ಕ್ಕೇರಿದೆ. ಈವರೆಗೆ 11723 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 2273 ಪ್ರಕರಣಗಳು ಸಕ್ರಿಯವಾಗಿವೆ. 67 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಟ್ಟು 422 ಜನ ಮೃತಪಟ್ಟಿದ್ದಾರೆ. ಭಾನುವಾರ ಪ್ರಕಟಗೊಂಡ ಪ್ರಯೋಗಾಲಯ ವರದಿಯಲ್ಲಿ ಧಾರವಾಡ ನಗರ ಹಾಗೂ ಗ್ರಾಮೀಣ ಸೇರಿ 60 ಪ್ರದೇಶಗಳಲ್ಲಿ ಪ್ರಕರಣಗಳು ಪತ್ತೆಯಾಗಿದ್ದರೆ, ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ಸೇರಿ 30 ಪ್ರದೇಶಗಳಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಅಳ್ನಾವರದ ಕಂಬೊಳಿ, ಶಿವಾಜಿ ರಸ್ತೆ; ಕಲಘಟಗಿಯ ಹುಣಸಿಕಟ್ಟಿ, ಕಾಡನಕೊಪ್ಪ, ಮಾಚಾಪುರ, ತುಮರಿಕೊಪ್ಪ, ಉಗ್ನಿಕೇರಿ, ರಾಮನಾಳ, ದಾಸ್ತಿಕೊಪ್ಪ, ಬಮ್ಮಿಗಟ್ಟಿ; ನವಲಗುಂದದ ಕೊಂಗಾನೂರ, ಗುಡಗೇರಿ ಕಲ್ಮಠ ಓಣಿ, ತಡಹಾಳ ಬಡಿಗೇರ ಓಣಿ, ಗೊಬ್ಬರಗುಂಪಿ; ಕುಂದಗೋಳ ತಾಲೂಕಿನ ದ್ಯಾವನೂರು ತಳವಾರ ಓಣಿ, ಪಶುಪತಿಹಾಳ, ಯರಿಬೂದಿಹಾಳದಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಗದಗ ಲಕ್ಷೆ್ಮೕಶ್ವರ ಅಕ್ಕಿಗುಂದ ಗ್ರಾಮ, ಹಾವೇರಿಯ ಹಾನಗಲ್, ಬಸವೇಶ್ವರನಗರ, ಸವಣೂರು, ಬಾಗಲಕೋಟೆ ಬಾದಾಮಿ ತಾಲೂಕಿನ ಕೆರೂರಿನ ಸೋಂಕಿತರು ಧಾರವಾಡ ಜಿಲ್ಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts