More

    ಧರ್ಮಕ್ಕಿಂತ ದೊಡ್ಡದು ಬೇರಿಲ್ಲ

    ಹುಬ್ಬಳ್ಳಿ: ಧರ್ಮಕ್ಕಿಂತ ದೊಡ್ಡದು ಜೀವನದಲ್ಲಿ ಬೇರೆ ಯಾವುದೂ ಇಲ್ಲ ಎಂದು ಆಚಾರ್ಯ ಶ್ರೀ ಮಹಾಶ್ರಮಣಜಿ ಹೇಳಿದರು.

    ಇಲ್ಲಿನ ಕುಸುಗಲ್ಲ ರಸ್ತೆಯ ಸಂಸ್ಕಾರ ಶಾಲೆ ಆವರಣದಲ್ಲಿ ಏರ್ಪಾಟಾಗಿರುವ ಮರ್ಯಾದಾ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಗುರುವಾರ ಮಂಗಳ ಪ್ರವೇಶದ ನಂತರ ಅವರು ಆಶೀರ್ವಚನ ನೀಡಿದರು.

    ಅಹಿಂಸೆ, ಸಂಯಮ ಹಾಗೂ ತಪಸ್ಸುಗಳನ್ನು ಪ್ರತಿಯೊಬ್ಬರೂ ಆಚರಿಸಬೇಕು. ಸಂಯಮ ಇಲ್ಲದೇ ಅಹಿಂಸೆ ಸಾಧಿಸುವುದು ಕಷ್ಟಕರ. ಪ್ರತಿಯೊಬ್ಬರಿಗೂ ತಮ್ಮ ಇಂದ್ರಿಯಗಳ ಮೇಲೆ ಸಂಯಮ ಇರಬೇಕು ಎಂದು ತಿಳಿಸಿದರು.

    ಮನಸ್ಸು ಮತ್ತು ಮಾತುಗಳ ಮೇಲೆ ನಿಯಂತ್ರಣ ಇಲ್ಲದಿದ್ದರೆ ಜೀವನ ಕಷ್ಟಕರವಾಗುತ್ತದೆ. ನಿರಂತರ ತಪಸ್ಸಿನಿಂದ ಇಂದ್ರಿಯಗಳ ಮೇಲೆ ನಿಯಂತ್ರಣ ಸಾಧಿಸುವ ಶಕ್ತಿ ಲಭಿಸುತ್ತದೆ. ಸದಾ ಧಾರ್ವಿುಕ ಚಿಂತನೆಯಲ್ಲಿ ತೊಡಗಿರುವ ವ್ಯಕ್ತಿ ಇಂದ್ರಿಯಗಳ ಮೇಲೆ ಹಿಡಿತ ಸಾಧಿಸಲು ಸಾಧ್ಯ. ಧರ್ಮದ ಮಾರ್ಗದಲ್ಲಿ ಜೀವನ ನಡೆಸುವವರಿಗೆ ದೇವತೆಗಳೂ ನಮಸ್ಕರಿಸುತ್ತಾರೆ ಎಂದರು.

    ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾಧು-ಸಾಧಿ್ವುರಿಗೆ ಸೂಚನೆ ನೀಡಿದ ಆಚಾರ್ಯ ಶ್ರೀಯವರು, ಸಾಧು-ಸಾಧಿ್ವುರು ಆಚಾರ್ಯರ ಸೂಚನೆಯಂತೆ ಚಾತುರ್ವಸ್ಯ ಕಾರ್ಯಕ್ರಮಗಳಲ್ಲಿ ತೊಡಗಬೇಕು ಎಂದರು. ಸೌಹಾರ್ದ ಭಾವನೆ ಹೊಂದಿರಬೇಕು. ಆಚಾರ್ಯರು ನೀಡುವ ಆದೇಶಕ್ಕೆ ನಿಷ್ಠೆ ಹೊಂದಿರಬೇಕು. ಆಚಾರ್ಯ ನಿಷ್ಠೆ, ಮರ್ಯಾದೆ ನಿಷ್ಠೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಆಶೀರ್ವಚನ ನೀಡಿದ ಸಾಧಿ್ವ ಕನಕಪ್ರಭಾಜಿ, ಪರೋಪಕಾರಿ ಗುಣ ಬೆಳೆಸಿಕೊಂಡವರ ಜೀವನ ಉಜ್ವಲವಾಗಿರುತ್ತದೆ. ಪ್ರತಿಯೊಬ್ಬರೂ ವಿಶಿಷ್ಟ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

    ಇದಕ್ಕೂ ಮೊದಲು ಆಚಾರ್ಯ ಶ್ರೀ ಮಹಾಶ್ರಮಣಜಿ ಅವರು ನೂರಾರು ಸಾಧು-ಸಾಧಿ್ವುವರೊಂದಿಗೆ ಕುಸುಗಲ್ಲ ರಸ್ತೆ ಸಂಸ್ಕಾರ ಶಾಲೆಯ ಆವರಣದಲ್ಲಿ ಮಂಗಳ ಪ್ರವೇಶ ಮಾಡಿದರು. ನೂರಾರು ಶ್ರಾವಕ-ಶ್ರಾವಕಿಯರು ಆಚಾರ್ಯರು, ಸಾಧು-ಸಾಧಿ್ವುರನ್ನು ಸ್ವಾಗತಿಸಿದರು.

    ಆಚಾರ್ಯ ಶ್ರೀ ಮಹಾಶ್ರಮಣ ಮರ್ಯಾದಾ ವ್ಯವಸ್ಥಾ ಸಮಿತಿ ಅಧ್ಯಕ್ಷ ಸೋಹನಲಾಲ ಕೊಠಾರಿ, ಹುಬ್ಬಳ್ಳಿ ಘಟಕದ ಶ್ರೀ ಜೈನ್ ಶ್ವೇತಾಂಬರ ತೇರಾಪಂಥ ಸಭಾ ಅಧ್ಯಕ್ಷ ಮಹೇಂದ್ರ ಪಾಲ್ಗೋತಾ, ಮುಖ್ಯ ಕಾರ್ಯದರ್ಶಿ ಕೇಶ್ರಿಚಂದ ಗೊಲಾಚ್ಚಾ, ತೇರಾಪಂಥ ಮಹಿಳಾ ಮಂಡಳದ ಅಧ್ಯಕ್ಷೆ ಪ್ರೇಮಾಬಾಯಿ ವೇದಮುಥ್, ತೇರಾಪಂಥ ಯುವಕ ಪರಿಷತ್ ಅಧ್ಯಕ್ಷ ವಿನೋದ ವೇದಮುಥ್, ಶಾಲೆಯ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ, ಅಧ್ಯಕ್ಷ ಮಹಾವೀರ ಕುಂದೂರ, ಸುಧೀರ ವೋರಾ, ಉಜ್ವಲ ಸಿಂಘಿ, ದಿಗಂಬರ ಜೈನ ಸಮಾಜದ ಮುಖ್ಯಸ್ಥ ಬ್ರಹ್ಮಕುಮಾರ ಬೀಳಗಿ ಮತ್ತಿತರರು ಉಪಸ್ಥಿತರಿದ್ದರು.

    ಅಭಿನಂದನ ಇಂದು
    ಮರ್ಯಾದಾ ಮಹೋತ್ಸವ ಅಂಗವಾಗಿ ಜ. 24ರಂದು ಬೆಳಗ್ಗೆ 9.30ಕ್ಕೆ ನಾಗರಿಕ ಅಭಿನಂದನ ಕಾರ್ಯಕ್ರಮ ಆಯೋಜಿಸಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಧ್ಯಕ್ಷತೆ ವಹಿಸುವರು. ಸಚಿವ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಪ್ರಸಾದ ಅಬ್ಬಯ್ಯ, ಅಮೃತ ದೇಸಾಯಿ, ಅರವಿಂದ ಬೆಲ್ಲದ, ವಿಪ ಸದಸ್ಯರಾದ ಶ್ರೀನಿವಾಸ ಮಾನೆ, ಬಸವರಾಜ ಹೊರಟ್ಟಿ, ಪ್ರದೀಪ ಶೆಟ್ಟರ್ ಪಾಲ್ಗೊಳ್ಳುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts