More

    ಪಂಚಕಲ್ಯಾಣ ಪೂಜಾ ಮಹೋತ್ಸವ 3ರಿಂದ

    ಹುಬ್ಬಳ್ಳಿ: ನವನಗರ ಬಡಾವಣೆಯ ಪಂಚಾಕ್ಷರಿ ನಗರದಲ್ಲಿರುವ ಭಗವಾನ ಶ್ರೀ 1008 ಮುನಿಸುವ್ರತ ತೀರ್ಥಂಕರರ ಜಿನ ಮಂದಿರದ ನೂತನ ಮಾನಸ್ಥಂಬ, ಚತುರ್ಮುಖ ಜಿನಬಿಂಬ ಪಂಚಕಲ್ಯಾಣ ಪೂಜಾ ಮಹೋತ್ಸವ ಹಾಗೂ ಧಾರ್ಮಿಕ ಸಮಾರಂಭ ಮೇ 3ರಿಂದ 6ರವರೆಗೆ ಜಿನೇಂದ್ರ ಸಭಾ ಮಂಟಪದಲ್ಲಿ ನಡೆಯಲಿವೆ ಎಂದು ಉತ್ತರ ಕರ್ನಾಟಕ ಜೈನ ಮಹಾಸಂಘದ ಹುಬ್ಬಳ್ಳಿ ಅಧ್ಯಕ್ಷ ಬಿ.ಎ. ಪಾಟೀಲ ಹೇಳಿದರು.
    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ 108 ಪುಣ್ಯಸಾಗರ ಮುನಿ ಮಹಾರಾಜರು ಸಾನ್ನಿಧ್ಯ ವಹಿಸುವರು. ಶ್ರೀಕ್ಷೇತ್ರ ಸೋಂದಾ ಜೈನ ಮಠದ ಭಟ್ಟಾರಕ ಸ್ವಸ್ತಿ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ, ವರೂರ ನವಗ್ರಹ ತೀರ್ಥಕ್ಷೇತ್ರದ ಸ್ವಸ್ತಿ ಶ್ರೀ ಧರ್ಮಸೇನ ಭಟ್ಟಾರಕ ಸ್ವಾಮೀಜಿ ಹಾಗೂ ಮಾತೆ ಪದ್ಮಾವತಿ ಪುಣ್ಯಕ್ಷೇತ್ರ ಹೊಂಬುಜಮಠದ ಸ್ವಸ್ತಿ ಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಶ್ರೀಗಳು ಉಪಸ್ಥಿತರಿರುವರು ಎಂದರು.
    3ರಂದು ಪಂಚಕಲ್ಯಾಣ ಪೂಜಾ ಮಹೋತ್ಸವದ ಧರ್ಮಸಭೆಯನ್ನು ಧಾರವಾಡ ಧರ್ಮಸ್ಥಳ ಶಿಕ್ಷಣ ವಿಶ್ವವಿದ್ಯಾಲಯ ಉಪಕುಲಪತಿ ಡಾ. ನಿರಂಜನಕುಮಾರ ಉದ್ಘಾಟಿಸುವರು. 4ರಂದು ಏರ್ಪಡಿಸಿರುವ ಧರ್ಮಸಭೆಯಲ್ಲಿ ಬಾಲಬ್ರಹ್ಮಚಾರಿ ಸೋಮದೇವ ಭಯ್ಯಜಿ ಪನ್ಯಾಸ ನೀಡುವರು ಎಂದರು.
    ಧರಣೇಂದ್ರ ಜವಳಿ ಮಾತನಾಡಿ, ರಾಜ್ಯ ಜೈನ ಯುವಕ-ಯುವತಿಯರ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಪ.ಪೂ.
    108 ಪುಣ್ಯಸಾಗರ ಮುನಿ ಮಹಾರಾಜರ 57ನೇ ಜನ್ಮದಿನ ನಿಮಿತ್ತ 6ರಂದು ಬೆಳಗ್ಗೆ 10.30ಕ್ಕೆ ರಾಜ್ಯ ಜೈನ ಯುವಕ ಯುವತಿಯರ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿದೆ. ಸಂಜೀವಿನಿ ಆಸ್ಪತ್ರೆ ನಿರ್ದೇಶಕ ಡಾ. ಅಭಿಷೇಕ ಪಾಟೀಲ ಉದ್ಘಾಟಿಸುವರು. ಜೈನ ಪ್ರತಿಭಾ ಪುರಸ್ಕಾರ ಯುವ ಕೈಪಿಡಿ ಪುಸ್ತಕವನ್ನು ಧಾರವಾಡ ಜೆಎಸ್‌ಎಸ್ ಕಾಲೇಜ್ ಪ್ರಾಚಾರ್ಯ ಡಾ. ಅಜಿತಪ್ರಸಾದ ಬಿಡುಗಡೆ ಮಾಡುವರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 57 ಜೈನ ಸಮಾಜದ ಯುವಕ-ಯುವತಿಯರಿಗೆ ‘ಪುಣ್ಯಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು. ಶಾಂತರಾಜ ಮಲ್ಲಸಮುದ್ರ, ಮಹಾವೀರ ಗೊಂಗಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts