More

    ದೊಡ್ಡ ಊರಿಗೆ ಹೋದವರಲ್ಲಿ ಪಶ್ಚಾತ್ತಾಪ

    ಕಲಬುರಗಿ: ದುಡ್ಡೇ ದೊಡ್ಡಪ್ಪ, ಅದರಿಂದಲೇ ಎಲ್ಲ ಅಂದುಕೊಂಡವರು, ಹಣ ಗಳಿಸಲು ಹೊಲ ಬಿಟ್ಟು ದೊಡ್ಡ ಊರುಗಳಿಗೆ ಹೋಗಿದ್ದವರಿಗೆ ಮಹಾಮಾರಿ ಕರೊನಾ ಪಾಠ ಕಲಿಸಿದೆ. ಹೀಗಾಗಿ ಬಸವ ಜಯಂತಿಯೊಂದಿಗೆ ಪ್ರತಿಯೊಬ್ಬರೂ ಹೊಸ ಜೀವನದತ್ತ ಹೆಜ್ಜೆ ಇಡುವ ಸಂಕಲ್ಪದೊಂದಿಗೆ ಮುನ್ನಡೆಯಬೇಕಿದೆ. ಕೃಷಿ ಜತೆಗೆ ನಮಗೆ ಬೇಕಾದ ವಸ್ತುಗಳನ್ನು ನಾವೇ ಉತ್ಪಾದಿಸಿಕೊಳ್ಳುವಂತೆ ಆಗಬೇಕಿದೆ ಎಂದು ಕಲ್ಯಾಣ ಕನರ್ಾಟಕ ಕೃಷಿ, ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಮಾಜಿ ಸಂಸದ ಡಾ.ಬಸವರಾಜ ಪಾಟೀಲ್ ಸೇಡಂ ಹೇಳಿದ್ದಾರೆ.
    ಬಸವ ಜಯಂತಿ ಮತ್ತು ಅಕ್ಷಯ ತೃತೀಯ ಹೊತ್ತಿನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೋ ಬಿಡುಗಡೆ ಮಾಡಿರುವ ಅವರು, ದೊಡ್ಡ ಊರುಗಳಿಗೆ ಹೋದವರು ಕರೊನಾಕ್ಕೆ ಬೆಚ್ಚಿ ಬಿದ್ದಿದ್ದಾರೆ. ಯಾಕಾದರೂ ಹೋದೇವು ಎಂದು ಪಶ್ಚಾತ್ತಾಪಪಟ್ಟು ನನ್ನೂರು ಎಂದು ನೂರಾರು ಕಿಮೀ ನಡೆದುಕೊಂಡು ಬರುತ್ತಿದ್ದಾರೆ. ಇದು ನಮ್ಮ ಹಳ್ಳಿಗಳ ಅಸ್ಮಿತೆಯನ್ನು ತೋರಿಸುತ್ತದೆ. ಹಳ್ಳಿಗಳಲ್ಲಿಯೇ ನಮ್ಮ ಜೀವನ ಅಡಗಿದೆ ಎಂಬುದು ಸಾಬೀತು ಮಾಡಿದೆ ಎಂದಿದ್ದಾರೆ.
    ಫ್ರಾನ್ಸ್, ಇಂಗ್ಲೆಂಡ್, ನ್ಯೂಯಾಕರ್್ ಈಗ ಹೆಣದ ರಾಶಿಗಳ ಊರುಗಳಾಗಿವೆ. ಮೆರೆದ ಅಮೆರಿಕ ತಲ್ಲಣಿಸಿ ಹೋಗಿದೆ. ಕರೊನಾಕ್ಕೆ ಕುಟುಂಬದವರೆಲ್ಲರೂ ಬಲಿಯಾಗಿದ್ದರಿಂದ ಅಲ್ಲಿನ ಹೋಟೆಲ್ ಉದ್ಯಮಿಯೊಬ್ಬರು ತಮ್ಮ ಬಹುಮಹಡಿ ಕಟ್ಟಡದಿಂದ ಹಾರಿ ಪ್ರಾಣ ಬಿಟ್ಟಿದ್ದನ್ನು ನೋಡಿದರೆ ಸಂಪತ್ತು ಕಷ್ಟ ಕಾಲಕ್ಕೆ ಬರುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ನಮ್ಮ ದೇಶದ ಮೂಲ ವೃತ್ತಿ ಕೃಷಿ ಮತ್ತು ಹೈನುಗಾರಿಕೆಗೆ ಒತ್ತು ಕೊಡಬೇಕು. ಹಾಲು-ಮೊಸರು, ತುಪ್ಪ ಹೆಚ್ಚಾಗಿ ಸೇವಿಸಬೇಕು. ಮನೆಗೊಂದು ಹಸು ಸಾಕಬೇಕು ಎಂದು ಸಲಹೆ ನೀಡಿದ್ದಾರೆ.
    ಕರೊನಾ ಮೂರ್ನಾಲ್ಕು ತಿಂಗಳಲ್ಲಿ ದೇಶದಿಂದ ಹೋದರೂ ವಿಶ್ವದಲ್ಲಿ ಉಳಿಯಲಿದೆ. ಅದರ ಪರಿಣಾಮ ಎರಡ್ಮೂರು ವರ್ಷ ಅನುಭವಿಸಬೇಕಾಗುತ್ತದೆ. ಹೀಗಾಗಿ ಇನ್ಮುಂದೆ ಜಾಗೃತಗೊಂಡು ಹೊಸ ಜೀವನದತ್ತ ಹೆಜ್ಜೆ ಇಡಬೇಕಿದೆ. ಯಾವುದೇ ಕಾರಣಕ್ಕೂ ವಿಷಕಾರಿ ಆಹಾರ ಸೇವಿಸಬೇಡಿ. ಸ್ವಲ್ಪ ತಿಂದರೂ ಒಳ್ಳೆಯದನ್ನೇ ತಿನ್ನೋಣ. ಅದಕ್ಕಾಗಿ ಹಸು ಸಾಕಬೇಕು. ಪ್ರತಿ ಮನೆಯಲ್ಲಿ ಹಣ್ಣು ಗಿಡಗಳನ್ನು ಬೆಳೆಯಬೇಕು. ಅರ್ಧ ಎಕರೆ ಇದ್ದರೂ 10 ಬೆಳೆ ಬೆಳೆಯಬೇಕು. ಯಾವುದೇ ಕಾರಣಕ್ಕೂ ಮಾರಾಟ ಮಾಡಲು ಬೆಳೆಯುವ ಉದ್ದೇಶ ಇಟ್ಟುಕೊಳ್ಳದೆ ನಿಮ್ಮ ಮತ್ತು ನಿಮ್ಮ ಮಕ್ಕಳ ಹೊಟ್ಟೆ ತುಂಬಲು ಕೃಷಿ ಮಾಡಬೇಕು. ಉಳಿದು ಹೆಚ್ಚಾದರೆ ಮಾರುಕಟ್ಟೆಗೆ ಕೊಡಿ ಎಂದು ಸೇಡಂ ಕಿವಿಮಾತು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts