More

    ದೇಹದಾನ, ರಕ್ತದಾನ ಅರಿವಿಗೆ ಬೀದಿನಾಟಕ-  ವೈದ್ಯಕೀಯ ವಿದ್ಯಾರ್ಥಿಗಳಿಂದ ಜನಜಾಗೃತಿ

    ದಾವಣಗೆರೆ: ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ಎಸ್.ಎಸ್. ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ದೇಹದಾನ, ಅಂಗಾಂಗ ದಾನ, ರಕ್ತದಾನದ ಮಹತ್ವ ಮತ್ತು ವೈದ್ಯರ ವಿರುದ್ಧದ ಹಲ್ಲೆ ತಡೆಗಟ್ಟುವ ಕುರಿತು ಶನಿವಾರ ನಗರದ ವಿವಿಧೆಡೆ ಬೀದಿ ನಾಟಕಗಳ ಮೂಲಕ ಜನಜಾಗೃತಿ ಮೂಡಿಸಿದರು.
    ಎಸ್.ಎಸ್. ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ವಿದ್ಯಾರ್ಥಿ ಸಂಘದ ಕನ್ನಡ ಬಳಗ, ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಸಹಯೋಗದಲ್ಲಿ ನಗರದ ರೈಲ್ವೆ ನಿಲ್ದಾಣ, ಬಸ್‌ನಿಲ್ದಾಣ ಹಾಗೂ ಮಹಾನಗರ ಪಾಲಿಕೆ ಆವರಣಗಳಲ್ಲಿ ಪ್ರದರ್ಶನ ನಡೆಸಲಾಯಿತು. ಒಮ್ಮೆ ನೀವು ಮಾಡುವ ರಕ್ತದಾನ ಮೂರು ಜೀವಗಳಿಗೆ ವರದಾನ, ಜೀವನವನ್ನು ಬೆಳಗಿಸಿ ನಿಮ್ಮ ಕಣ್ಣುಗಳನ್ನು ದಾನ ಮಾಡಿ ಎಂದರು.
    ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಸ್.ಪ್ರಸಾದ್, ವೈದ್ಯಕೀಯ ನಿರ್ದೇಶಕ ಡಾ. ಅರುಣ್‌ಕುಮಾರ್ ಅಜ್ಜಪ್ಪ, ಉಪ ಪ್ರಾಚಾರ್ಯೆ ಡಾ. ಶಶಿಕಲಾ ಪಿ. ಕೃಷ್ಣ್ಣಮೂರ್ತಿ ಹಾಗೂ ಅಂಗರಚನಾ ಶಾಸ್ತ್ರ ದೇಹದಾನ ಸಂಸ್ಥೆ ಕಾರ್ಯದರ್ಶಿ ಡಾ. ವೀರೇಶ್ ಇಟಗಿ ಮಾತನಾಡಿ ರಕ್ತದಾನ, ದೇಹ ಹಾಗೂ ಅಂಗಾಂಗ ದಾನದ ಪ್ರಕ್ರಿಯೆ ಮತ್ತು ಮಹತ್ವ ಕುರಿತು ವಿವರಿಸಿದರು.
    ವಿದ್ಯಾರ್ಥಿಸಂಘ ಆಯೋಜಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಸಸಿಗಳನ್ನು ಬಹುಮಾನವಾಗಿ ನೀಡಲಾಯಿತು. ಬಾಪೂಜಿ ವಿದ್ಯಾಸಂಸ್ಥೆ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮಾರ್ಗದರ್ಶನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ವಿ.ಎಸ್.ಹರೀಶ್ ಕುಮಾರ್, ವೈದ್ಯರಾದ ಡಾ.ಜಿ.ಯು. ಕವಿತಾ, ಡಾ. ರಘುಕುಮಾರ್, ಡಾ. ಎಸ್.ಕಾಂಚನಾ, ಡಾ.ಎನ್.ಆಶಾ ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts