More

    ದೇಸಿ ಕ್ರೀಡೆಗಳಿಗೆ ಒತ್ತು ನೀಡಿ

    ನಾಗರಮುನ್ನೋಳಿ, ಬೆಳಗಾವಿ: ಗ್ರಾಮೀಣ ಭಾಗದಲ್ಲಿ ದೇಸಿ ಕ್ರೀಡೆಗೆ ಒತ್ತು ನೀಡುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಮುಖ್ಯವಾಗಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

    ಇಲ್ಲಿನ ಸಿದ್ಧೇಶ್ವರ ಜಾತ್ರೆ ಹಾಗೂ ದಿ.ಉಮೇಶ ಕತ್ತಿ ಸ್ಮರಣಾರ್ಥ ಸೋಮವಾರ ಹಮ್ಮಿಕೊಂಡಿದ್ದ ಅಂತಾರಾಜ್ಯಮಟ್ಟದ ಮುಕ್ತ ಮಹಿಳಾ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕುಸ್ತಿ, ಕಬಡ್ಡಿ, ಗುಂಡು ಎತ್ತುವಂತಹ ದೇಸಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ಯುವಕ, ಯುವತಿಯರನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
    ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಯುವ ಸಮುದಾಯ ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣವಾಗಲು ಸಾಧ್ಯ. ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ಆರೋಗ್ಯ ರೂಪಿಸಿಕೊಳ್ಳಬೇಕು ಎಂದರು.

    ಬಸವಜ್ಯೋತಿ ಯೂಥ್ ಫೌಂಡೇಷನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಮಾತನಾಡಿ, ಗ್ರಾಮೀಣ ಭಾಗದ ಯುವಕರು ಕ್ರೀಡೆ ಹಾಗೂ ಯೋಗಾಸನಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಗ್ರಾಮೀಣ ಕ್ರೀಡೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲು ಯುವಕರು ಶ್ರಮವಹಿಸಬೇಕು ಎಂದರು.

    ಜಿಪಂ ಮಾಜಿ ಸದಸ್ಯ ಪೃಥ್ವಿ ಕತ್ತಿ ಮಾತನಾಡಿದರು. ಮಾಜಿ ಸಂಸದ ಅಮರಸಿಂಹ ಪಾಟೀಲ, ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ, ಹೀರಾ ಶುಗರ್ಸ್ ಸದಸ್ಯ ಸುರೇಶ ಬೆಲ್ಲದ, ಬಿಜೆಪಿ ರಾಜ್ಯ ರೈತ ಮೊರ್ಚಾ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಟೋಣಪೆ, ಸಿದ್ದಪ್ಪ ಮರ‌್ಯಾಯಿ, ಮಹಾದೇವ ಈಟಿ, ಶರತ ಕವಟಗಿಮಠ, ಅಶೋಕ ಹರಗಾಪುರೆ, ವಿನಾಯಕ ಕುಂಬಾರ, ಮಾರುತಿ ಮರ‌್ಯಾಯಿ, ರಮೇಶ ಕಾಳನ್ನವರ, ಲಕ್ಷ್ಮೀಸಾಗರ ಈಟಿ, ಡಾ. ಅರುಣ ಮರ‌್ಯಾಯಿ, ರಾಜು ಕುಂಬಾರ, ಬಾಬು ಕಾಳನ್ನವರ, ಸಿದ್ದು ಈಟಿ, ಎಂ.ಬಿ.ಆಲೂರೆ, ಲಡಜಿ ಮುಲ್ತಾನಿ, ಶಿವಲಿಂಗ ಈಟಿ, ಬಸವರಾಜ ಮನಗೂಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts