More

    ವಿವಿಧ ಕಾಮಗಾರಿಗೆ ಚಾಲನೆ

    ಕೋಲಾರ: ಜಿಲ್ಲೆಯ ಮುಳಬಾಗಿಲು ನಗರದ ಡಿವಿಜಿ ಗಡಿ ಕನ್ನಡ ಭವನ 1.10 ಕೋಟಿ ರೂ., ನೇತಾಜಿ ಕ್ರೀಡಾಂಗಣ 4 ಕೋಟಿಗೂ ಹೆಚ್ಚು ಅಂದಾಜು ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್​ ಹೇಳಿದರು.

    ಮುಳಬಾಗಿಲು ಡಿವಿಜಿ ಗಡಿ ಕನ್ನಡ ಭವನ ದುರಸ್ಥಿ ಕಾರ್ಯವನ್ನು ಸೋಮವಾರ ಸಂಜೆ ಪೂರ್ಣ ಪ್ರಮಾಣದಲ್ಲಿ ಮಾಡುವ ಮೂಲಕ ಸುಸಜ್ಜಿತ ಭವನ ನಿರ್ಮಿಸಲಾಗುವುದು ಇಲ್ಲಿಂದ ಸಾಂಸತಿಕ ಕಾರ್ಯಕ್ರಮಗಳು ಮಾಡಿಕೊಳ್ಳಲು ಗುಣಮಟ್ಟದ ವ್ಯವಸ್ಥೆ ಮಾಡಿಕೊಡಲಾಗುವುದು. ಈಗ ಆಗಿರುವ ಲೋಪದೋಷಗಳನ್ನು ಸರಿಪಡಿಸಿ, ಹಿಂದೆ ಆಗಿರುವ ಬಗ್ಗೆ ಪರಿಶೀಲನೆ ಮಾಡದೆ ಮುಂದೆ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ದೃಷ್ಠಿ ನಡೆಲಾಗಿದೆ ಎಂದರು.

    ನೇತಾಜಿ ಕ್ರೀಡಾಂಗಣ ಕ್ರೀಡಾ ಚಟುವಟಿಕೆಗಳಿಗೆ ಪೂರಕವಾಗಿಲ್ಲ. ರಾತ್ರಿವೇಳೆಯಲ್ಲಿ ಪುಂಡಪೋಕರಿಗಳ ಹಾವಳಿ ಹೆಚ್ಚಾಗಿದ್ದು, ಇದನ್ನು ತಡೆಯಲು ಸುತ್ತಲು ಕಾಂಪೌಂಡ್​ ವ್ಯವಸ್ಥೆ ಮಾಡಲಾಗುವುದು. ಬಿಇಒ ಕಚೇರಿಗೆ ಮುತ್ಯಾಲಪೇಟೆ ಕಡೆಯಿಂದ ಬಾಗಿಲು ವ್ಯವಸ್ಥೆ ಮಾಡಿ ಕ್ರೀಡಾಂಗಣದ ಕಡೆಗೆ ಮುಚ್ಚಲಾಗುವುದು, ಸುತ್ತಲು ಆಸನ ಹಾಗೂ ಮೇಲ್ಚಾವಣಿಯ ಪೆವಲಿನ್​ ವ್ಯವಸ್ಥೆ ಮಾಡಿ 4 ಕಡೆ 100 ಅಡಿ ಎತ್ತರದ ಹೈಮಾಸ್​ ಲೈಟ್​ಗಳನ್ನು ವ್ಯವಸ್ಥೆ ಮಾಡಿ ಹಗಲು ರಾತ್ರಿ ಕ್ರೀಡಾ ಚಟುವಟಿಕೆಗಳು ಪಂದ್ಯಾವಳಿಗಳು ಸಾರ್ವಜನಿಕ ಸಮಾರಂಭಗಳು ಆಯೋಜನೆಗೆ ವ್ಯವಸ್ಥೆ ಮಾಡಿಕೊಡಲಾಗುವುದು. ಇದರಿಂದ ನಗರ ಮತ್ತು ಗ್ರಾಮಾಂತರ ಪ್ರದೇಶದ ಕ್ರೀಡಾಪಟುಗಳಿಗೆ ಮತ್ತು ಯೋಗಪಟುಗಳಿಗೆ ಉಪಯುಕ್ತವಾಗುವಂತೆ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.

    ಕನ್ನಡ ಮತ್ತು ಸಂಸತಿ ಇಲಾಖೆ ಹಾಗೂ ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ ಆರ್​.ಗೀತಾ, ತಾಪಂ ಇ.ಒ ಡಾ.ಕೆ.ಸರ್ವೇಶ್​, ಪೌರಾಯುಕ್ತ ವಿ.ಶ್ರೀಧರ್​, ಜೆಡಿಎಸ್​ ತಾಲೂಕು ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್​.ನಾಗರಾಜ್​, ಪ್ರಧಾನ ಕಾರ್ಯದರ್ಶಿ ವಿ.ರಘುಪತಿರೆಡ್ಡಿ, ಸಹ ಕಾರ್ಯದರ್ಶಿ ಕವತನಹಳ್ಳಿ ಮುನಿಸ್ವಾಮಿಗೌಡ, ತಾಪಂ ಮಾಜಿ ಸದಸ್ಯ ಡಾ.ಸಿ.ಎನ್​.ಪ್ರಕಾಶ್​, ಎಪಿಎಂಸಿ ಮಾಜಿ ಅಧ್ಯಕ್ಷ ಲಕ್ಷಿ$್ಮನಾರಾಯಣ, ಮಾಜಿ ನಿರ್ದೇಶಕ ಎನ್​.ಆರ್​.ಸತ್ಯಣ್ಣ, ನಗರಸಭಾ ಸದಸ್ಯರಾದ ಎಂ.ಪ್ರಸಾದ್​, ಡಿ.ಸೋಮಣ್ಣ, ಟಿ.ಮುನಿರಾಜು, ನಾಗೇಶ್​, ವಜೀರ್​,ಚಾನ್​ಪಾಷಾ, ಪಿ.ರಾಮಚಂದ್ರಯ್ಯ, ಗ್ಯಾಸ್​ ರಘು, ಮಂಡಿಕಲ್​ ರಾಜಣ್ಣ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts