More

    ದೇಶ ಕಾಯುವ ಸೈನಿಕರನ್ನು ಗೌರವಿಸಿ

    ಡಂಬಳ: ರೋಣ ಮತಕ್ಷೇತ್ರಕ್ಕೆ ವಿಶೇಷ ಅನುದಾನ ತಂದು ಜನಪರ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಬಿಜೆಪಿ ಸರ್ಕಾರ ರೈತರ ಪರ ಕಾಳಜಿ ಹೊಂದಿದೆ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

    ಗ್ರಾಮದ ಗ್ರಾಪಂ ಕಾರ್ಯಾಲಯ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

    ದೇಶ ಸುಭದ್ರವಾಗಿರಲು ಗಡಿಯಲ್ಲಿರುವ ಸೈನಿಕರು ಕಾರಣ. ಅವರನ್ನು ಗೌರವಿಸುವಂಥ ಮನೋಧರ್ಮವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಡಂಬಳ ಗ್ರಾಪಂ ಅನ್ನು ಮುಂಬರುವ ದಿನಗಳಲ್ಲಿ ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

    ಸಾನ್ನಿಧ್ಯ ವಹಿಸಿದ್ದ ಜೋತಿಷ್ಯ ಸಂಜೀವಿನಿ ಪ್ರಶಸ್ತಿ ಪಡೆದ ಶಾಂತವೀರಯ್ಯ ಹಾಲಯ್ಯ ಹಿರೇಮಠ ಮಾತನಾಡಿ, ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಿ ಆರೋಗ್ಯವಂತ, ಸ್ವಸ್ಥ ಸಮಾಜ ನಿರ್ವಣಕ್ಕೆ ಮುಂದಾಗಬೇಕು. ಸುತ್ತಮುತ್ತಲಿನ ಪರಿಸರ ಉಳಿಸುವ ಹೊಣೆಗಾರಿಕೆ ನಮ್ಮೆಲ್ಲರದಾಗಬೇಕು ಎಂದರು.

    ತಾಪಂ ಅಧ್ಯಕ್ಷೆ ರೇಣುಕಾ ಕೊರ್ಲಹಳ್ಳಿ, ಮಾಜಿ ಜಿಪಂ ಉಪಾಧ್ಯಕ್ಷ ಬೀರಪ್ಪ ಬಂಡಿ, ಮಾಜಿ ಸೈನಿಕ ಅಲ್ಲಾಭಕ್ಷಿ ಬೆನ್ನಕೊಪ್ಪ ಮಾತನಾಡಿದರು.

    ಗ್ರಾಮದ ಮಾಜಿ ಸೈನಿಕರಾದ ವಿ.ಎಸ್. ಕಾಶಭೋವಿ, ಹನುಮಂತಪ್ಪ ಗಡಗಿ, ಮಲ್ಲಪ್ಪ ಗುಜ್ಜಲ, ಕೃಷ್ಣ ಕಟ್ಟೆಣ್ಣವರ, ಅಲ್ಲಾಭಕ್ಷಿ ಬೆನ್ನಕೊಪ್ಪ, ಹನುಮಂತಪ್ಪ ಮೇಗೂರ, ರವೀಂದ್ರ ಅಬ್ಬಿಗೇರಿ ಹಾಗೂ ಹಾಲಿ ಸೈನಿಕರಾದ ಮುತ್ತು ಹೊಸಳ್ಳಿ, ಈರಣ್ಣ ರೇವಡಿ, ಶಾರೂಖಾನ್ ಕಾಸ್ತಾರ ಅವರನ್ನು ಸನ್ಮಾನಿಸಲಾಯಿತು.

    ಮಾಜಿ ಎಪಿಎಂಸಿ ಅಧ್ಯಕ್ಷ ವಿ.ಎಸ್. ಯರಾಸಿ, ಗಂಗಣ್ಣ ಸೊರಟೂರ, ಮುದ್ಲಿಲಿಂಗಪ್ಪ ಕೊರ್ಲಹಳ್ಳಿ, ರವಿ ಕರಿಗಾರ, ಮೋಹನ ರಾಯಭಾಗ, ಸೋಮಶೇಖರಯ್ಯ ಗುರವಿನ, ಜಿಪಂ ಸದಸ್ಯೆ ಶಕುಂತಲಾ ಚವ್ಹಾಣ, ತಾಪಂ ಉಪಾಧ್ಯಕ್ಷೆ ಹೇಮಾವತಿ ಕನ್ನಾರಿ, ಗ್ರಾಪಂ ಅಧ್ಯಕ್ಷ ಬಸವರಾಜ ಗಂಗಾವತಿ, ಉಪಾಧ್ಯಕ್ಷೆ ಜಂದುಬೇಗಂ ಮೂಲಿಮನಿ, ಸದಸ್ಯ ಮಲ್ಲಪ್ಪ ಮಠದ, ಮಲ್ಲಪ್ಪ ಕರಡ್ಡಿ, ಪಿಡಿಒ ಎಸ್.ಕೆ. ಕವಡೇಲಿ, ತಾಪಂ ಇಒ ಎಸ್.ಎಸ್. ಕಲ್ಮನಿ, ಇತರರಿದ್ದರು. ಶಿಕ್ಷಕ ಆರ್.ಜಿ. ಕೊರ್ಲಹಳ್ಳಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts