More

    ದೇಶಿ ಕ್ರೀಡೆಗಳಿಗೂ ಮಹತ್ವ ನೀಡಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಲಹೆ, ಆಯುಷ್ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ

    ಹುಬ್ಬಳ್ಳಿ: ಯಾವುದೇ ವೃತ್ತಿ ಇರಲಿ ಅದರಲ್ಲಿ ಯಶಸ್ಸು ಸಾಧಿಸಬೇಕಾದರೆ ದೇಹವೂ ಸಹಕರಿಸಬೇಕಾಗುತ್ತದೆ. ಇದಕ್ಕಾಗಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಅದರಲ್ಲೂ ದೇಶಿ ಕ್ರೀಡೆಗಳಿಗೆ ಆದ್ಯತೆ ನೀಡುವುದು ಇಂದಿನ ಅಗತ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

    ಹುಬ್ಬಳ್ಳಿ ಆಯುರ್ವೆದ ಸೇವಾ ಸಮಿತಿಯ ಆಯುರ್ವೆದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ವಿಆರ್​ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್, ವಿಭವ ಸೇರಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಇಲ್ಲಿಯ ಜಿಮ್ಾನಾ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ಆಯುಷ್ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

    ಕ್ರೀಡೆಗೆ ಮಹತ್ವ ಕಡಿಮೆ ಆಗುತ್ತಿರುವ ಈ ಸಂದರ್ಭದಲ್ಲಿ ಆಯುಷ್ ವೈದ್ಯರು, ಶಿಕ್ಷಕರು ಭಾಗಿಯಾಗಿರುವುದು ಉತ್ತಮ ಬೆಳವಣಿಗೆ. ಯೋಗ ಹಾಗೂ ಭಾರತೀಯ ಚಿಕಿತ್ಸಾ ಪದ್ಧತಿಗೆ ಜಗತ್ತಿನ ಎಲ್ಲೆಡೆ ಗೌರವ ಸಿಗುತ್ತಿದೆ. ದೇಶದ ಎಲ್ಲ ಏಮ್ಸ್​ಗಳಲ್ಲಿ ಆಯುರ್ವೆದ ವಿಭಾಗ ಆರಂಭಿಸಲಾಗಿದೆ. ಮುಂದೆ ದೇಶಿಯ ಕ್ರೀಡೆಗಳಿಗೂ ಮಹತ್ವ ಸಿಗಲಿದೆ ಎಂದರು.

    ಈ ವರೆಗೆ ಯಾವ ಸರ್ಕಾರಗಳು ಕ್ರೀಡಾ ಜಗತ್ತಿಗೆ ಮಹತ್ವ ನೀಡಿರಲಿಲ್ಲ. ಪ್ರಧಾನಿ ಮೋದಿ ಅವರು ಒಲಿಂಪಿಕ್​ನಲ್ಲಿ ಗೆದ್ದವರು, ಸೋತವರು ಎಲ್ಲರನ್ನೂ ಮಾತನಾಡಿಸುವ ಮೂಲಕ ಕ್ರೀಡಾ ಸ್ಪೂರ್ತಿ ತುಂಬಿದರು. ಯುವಕರು ಮೊಬೈಲ್ ನೋಡುವುದನ್ನು ಬಿಟ್ಟು ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಡಾ. ಮಹೇಶ ಸಾಲಿಮಠ ಮಾತನಾಡಿ, ರಾಜ್ಯದ ವಿವಿಧ ಕಡೆಗಳಲ್ಲಿ ಎಂಟು ಕ್ರೀಡಾಕೂಟಗಳು ಆಗಿದ್ದು, ಇದು 9ನೇ ಪಂದ್ಯಾವಳಿಯಾಗಿದೆ. ಆಯುಷ್ ವೈದ್ಯರು, ಸಿಬ್ಬಂದಿಯು ಒಂದಿಷ್ಟು ನಿರಾಳರಾಗಿ ಆಟ ಆಡಬೇಕು, ಸಂಘಟಿತರಾಗಬೇಕು ಎನ್ನುವ ಉದ್ದೇಶದಿಂದ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ಈ ಬಾರಿ 5 ಮಹಿಳಾ ಹಾಗೂ 9 ಪುರುಷರ ತಂಡಗಳು ಭಾಗಿಯಾಗಿವೆ ಎಂದರು.

    ಡಾ. ಎಂ.ಎಂ. ಜೋಶಿ, ಗೋವಿಂದ ಜೋಶಿ, ನಂದಕುಮಾರ, ಡಾ. ಮಹೇಶ ನಾಲವಾಡ, ಆಯುಷ್ ಇಲಾಖೆಯ ಬಿ.ಬಿ.ಪೂಜಾರ, ಡಾ. ಶ್ರೀನಿವಾಸ ಜೋಶಿ, ಜೆ.ಆರ್. ಜೋಶಿ, ಡಾ. ಪಾಂಡುರಂಗ ಗಂಡಮಾಲಿ, ಪಾರಸನಾಥ್, ಇತರರು ಇದ್ದರು.

    ಸಂಜೀವ ಜೋಶಿ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts