More

    ದೇಶದ ನೆಮ್ಮದಿಗೆ ಕಾಂಗ್ರೆಸ್ ಹೋರಾಟ ಕಾರಣ

    ಎನ್.ಆರ್.ಪುರ: ಸ್ವಾಂತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರ ಹೋರಾಟದ ಫಲವಾಗಿ ಭಾರತ ನೆಮ್ಮದಿಯಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು. ಕುದುರೆಗುಂಡಿ ಅಶ್ವ ಗುಂಡೇಶ್ವರಚಿ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎನ್.ಆರ್.ಪುರ ಹಾಗೂ ಕೊಪ್ಪ ತಾಲೂಕಿನ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆ ಸಮಾರೋಪದಲ್ಲಿ ಮಾತನಾಡಿದರು. ಸ್ವಾತಂತ್ರ್ಯ ವೀರರಿಗೆ ಗೌರವ ಸಮರ್ಪಿಸುವ ಹಿನ್ನೆಲೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ 15 ಕಿಲೋ ಮೀಟರ್ ಪಾದಯಾತ್ರೆ ನಡೆಸಿದ್ದೇವೆ. ದೇಶದ ಪ್ರಥಮ ಪ್ರಧಾನಿ, ಕಾಂಗ್ರೆಸ್ ನಾಯಕ ನೆಹರೂ ಅವರು ಕೃಷಿ, ನೀರಾವರಿ, ಕೈಗಾರಿಕೆಗೆ ಒತ್ತು ಕೊಟ್ಟಿದ್ದರು. ರಾಜೀವ್ ಗಾಂಧಿ ಕಾಲದಲ್ಲಿ ಕಂಪ್ಯೂಟರ್ ಯುಗಕ್ಕೆ ಭಾರತ ತೆರೆದುಕೊಂಡಿತು ಎಂದು ಹೇಳಿದರು.

    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಫಾರ್ ಮಾತನಾಡಿ, ಕಾಂಗ್ರೆಸ್ ಪ್ರತಿ ಜಿಲ್ಲೆಯಲ್ಲೂ ಅಮೃತ ಸ್ವಾತಂತ್ರ್ಯ ನಡಿಗೆ ನಡೆಸುತ್ತಿದೆ. ಬಿಜೆಪಿ 8 ವರ್ಷಗಳ ಆಡಳಿತದಲ್ಲಿ ದೇಶದ ಅಭಿವೃದ್ಧಿಗೆ ಅಡ್ಡಿಯನ್ನುಂಟು ಮಾಡುವ ಹಲವು ತೀರ್ವನಗಳನ್ನು ತೆಗೆದುಕೊಂಡಿದೆ. ನೋಟು ಅಮಾನ್ಯೀಕರಣ, ಉದ್ಯಮಗಳ ಮಾರಾಟ, ರೆಲ್ವೇ, ಬಿಎಸ್​ಎನ್​ಎಲ್, ಬಂದರುಗಳನ್ನು ಖಾಸಗೀಕರಣ ಮಾಡುತ್ತಿದೆ. ಅಗತ್ಯ ವಸ್ತುಗಳಿಗೂ ತೆರಿಗೆ ಹಾಕಿ ತೊಂದರೆ ನೀಡುತ್ತಿದೆ ಎಂದು ಕಿಡಿಕಾರಿದರು. ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್​ಕುಮಾರ್ ಮುರೊಳ್ಳಿ, ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಎಂ.ಸತೀಶ್ ಮಾತನಾಡಿದರು.

    ಎನ್.ಆರ್.ಪುರ ಹಾಗೂ ಕೊಪ್ಪ ತಾಲೂಕಿನಿಂದ ಮುಖಂಡರು, ಕಾರ್ಯಕರ್ತರ ಪಾದಯಾತ್ರೆ ಕುದುರೆಗುಂಡಿಯಲ್ಲಿ ಸಮಾಗಮವಾಯಿತು. ಅಲ್ಲಿಂದ ಒಟ್ಟಾಗಿ ಸಮಾರಂಭ ನಡೆಯುವ ಅಶ್ವಗುಂಡೇಶ್ವರ ಸಮುದಾಯ ಭವನಕ್ಕೆ ತೆರಳಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts