More

  ವಿವೇಕಾನಂದರ ಆದರ್ಶ ಅನುಸರಣೆಯಿಂದ ವ್ಯಕ್ತಿತ್ವ ವೃದ್ಧಿ

  ಗೋಕುಲ್​ ಮುತ್ತು ನಾರಾಯಣಸ್ವಾಮಿ ಅಭಿಪ್ರಾಯ | ಉಪನ್ಯಾಸ ಕಾರ್ಯಕ್ರಮ

  ಉಡುಪಿ: ಸ್ವಾಮಿ ವಿವೇಕಾನಂದರು ವ್ಯಕ್ತಿತ್ವ ವಿಕಸನದ ಮೂಲಕ ಮಾನವನ ಉನ್ನತಿಗೆ ಹಾಗೂ ಆತ್ಮಶಕ್ತಿಗೆ ಮಾರ್ಗ ತೋರಿದವರು. ಅವರ ಬೋಧನೆಗಳ ಬೆಳಕಿನಲ್ಲಿ ವ್ಯಕ್ತಿತ್ವದ ಅನ್ವೇಷಣೆ ಪ್ರಾರಂಭಿಸುವುದು ಅತ್ಯಂತ ಮುಖ್ಯವಾದುದಾಗಿದೆ. ಅವರು ಸಾರಿದ ಆದರ್ಶಗಳ ನೆಲೆಯಲ್ಲಿ ನಡೆಯುವ ಅಭ್ಯಾಸಗಳ ಮೂಲಕ ವ್ಯಕ್ತಿತ್ವ ಬಲಗೊಳ್ಳುತ್ತದೆ ಎಂದು ಬೆಂಗಳೂರಿನ ಐಟ್ರಾನ್​ ಉತ್ಪನ್ನ ಅಭಿವೃದ್ಧಿ ವಿಭಾಗದ ನಿರ್ದೇಶಕ ಗೋಕುಲ್​ ಮುತ್ತು ನಾರಾಯಣಸ್ವಾಮಿ ಹೇಳಿದರು.

  ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮ (35ನೇ ಉಪನ್ಯಾಸ)ದಲ್ಲಿ ‘ವಿವೇಕಾನಂದರ ಬೋಧನೆಗಳ ಬೆಳಕಿನಲ್ಲಿ ವ್ಯಕ್ತಿತ್ವ ವಿಕಸನ’ ವಿಷಯ ಕುರಿತು ಉಪನ್ಯಾಸ ನೀಡಿದರು.

  ಅನುಭವದಿಂದ ವ್ಯಕ್ತವಾಗಲಿ

  ವಿವೇಕರು ಹೇಳಿದ ಧ್ಯಾನ, ನೈತಿಕತೆ, ಧೈರ್ಯ ಮುಂತಾದ ಮೌಲ್ಯ ಅನುಸರಿಸುವುದರಿಂದಲೂ ವ್ಯಕ್ತಿತ್ವ ವಿಕಸಿತವಾಗುತ್ತದೆ. ಅವರ ಬೋಧನೆ ಅನುಸರಿಸಲು ಪ್ರಯತ್ನಿಸಿದರೆ ಸಾಲದು, ಅದು ಅನುಭವದ ಮೂಲಕ ವ್ಯಕ್ತವಾಗಬೇಕು ಎಂದರು.

  ಕಾಲೇಜಿನ ಪ್ರಾಂಶುಪಾಲ ಡಾ. ರಾಮು ಎಲ್​., ಮಂಗಳೂರಿನ ರಾಮಕೃಷ್ಣ ಮಿಷನ್​ನ ಹಿರಿಯ ಸ್ವಯಂಸೇವಕ ಪರಮೇಶ್ವರ ಅಡಿಗ, ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು. ರಾಮಕೃಷ್ಣ ಮಿಷನ್​ನ ಕಾರ್ಯಕ್ರಮ ಸಂಯೋಜಕ ರಂಜನ್​ ಬೆಳ್ಳಾರ್ಪಾಡಿ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ, ಉಪನ್ಯಾಸಕ ಸಂದೀಪ್​ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ನಾಯಕಿ ನಿಖಿತಾ ಕಾರ್ಯಕ್ರಮ ನಿರೂಪಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts