More

    ಗೊಬ್ಬರ, ಬಿತ್ತನೆ ಬೀಜ ವಿತರಣೆಗೆ ಕ್ರಮ

    ಹೊಳೆನರಸೀಪುರ: ತಾಲೂಕಿನಲ್ಲಿ ಏಪ್ರಿಲ್ ತಿಂಗಳಿನಿಂದ ಪೂರ್ವ ಮುಂಗಾರು ಮಳೆ ಪ್ರಾರಂಭವಾಗಿ ಮೇ 20ರವರೆಗೆ ವಾಡಿಕೆ ಮಳೆ 140 ಮಿ.ಮೀ. ಇರುತ್ತಿತ್ತು. ಈ ಬಾರಿ ಇದುವರೆವಿಗೂ 223.4 ಮಿ.ಮೀ. ಮಳೆಯಾಗಿದ್ದು ಶೇ.60ರಷ್ಟು ಮಳೆ ಹೆಚ್ಚಾದಂತಾಗಿದೆ.


    ತಾಲೂಕಿನಲ್ಲಿ ಒಂದು ವಾರದಿಂದ ಉತ್ತಮ ಮಳೆ ಬೀಳುತ್ತಿದ್ದು ಇದುವರೆವಿಗೂ 125.1 ಮಿ.ಮೀ. ಮಳೆ ಆಗಿ ರೈತರಲ್ಲಿ ಬೇಸಾಯ ಮಾಡಬಹುದೆಂಬ ಭರವಸೆ ಮೂಡಿಸಿದ್ದು, ರೈತರು ಬಿತ್ತನೆ ಮಾಡಿ, ಬೇಸಾಯ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.


    ತಾಲೂಕಿನಲ್ಲಿ ಪ್ರಮುಖವಾಗಿ ಪೂರ್ವ ಮುಂಗಾರಿನಲ್ಲಿ 3750 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುತ್ತಿದ್ದು, ಪ್ರಸ್ತುತ ತಂಬಾಕು 1200 ಹೆಕ್ಟೇರ್, ಅಲಸಂದೆ 355 ಹೆಕ್ಟೇರ್, ಮುಸುಕಿನ ಜೋಳ (ನೀರಾವರಿ) 400 ಹೆಕ್ಟೇರ್, ಹೆಸರು 6 ಹೆಕ್ಟೇರ್, ಉದ್ದು 8 ಹೆಕ್ಟೇರ್, ಎಳ್ಳು 10 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿ ಒಟ್ಟು 1979 ಹೆಕ್ಟೇರ್ ಬಿತ್ತನೆ ಆಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಕೆ.ಎಚ್.ಸಪ್ನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


    ತಾಲೂಕಿನಲ್ಲಿ ಯೂರಿಯಾ-1472 ಟನ್, ಡಿಎಪಿ-145 ಟನ್, ಎಂಒಪಿ-60 ಟನ್, ಎಸ್‌ಎಸ್‌ಪಿ-30 ಟನ್ ಹಾಗೂ ಎನ್‌ಪಿಕೆಎಸ್-ಕಾಂಪ್ಲೆಕ್ಸ್-950 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದ್ದು ರೈತರಿಗೆ ರಸಗೊಬ್ಬರಗಳ ತೊಂದರೆ ಆಗದಂತೆ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಈಗಾಗಲೇ ಗೊಬ್ಬರ ಮರಾಟಗಾರರ ಸಭೆ ನಡೆಸಿ ರಸಗೂಬ್ಬರಗಳನ್ನು ನಿಗದಿತ ಬೆಲೆಗೆ ಮಾರಾಟ ಮಾಡಬೇಕು. ಗೊಬ್ಬರ ದಾಸ್ತಾನಿದ್ದರೂ ರೈತರಿಗೆ ನೀಡದೆ ಕೃತಕ ಅಭಾವ ಸೃಷ್ಟಿ ಮಾಡದಂತೆ ಎಚ್ಚರಿಸಲಾಗಿದೆ. ಎಲ್ಲಿಯಾದರೂ ಅಕ್ರಮ ದಾಸ್ತಾನು ಕಂಡುಬಂದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
    ಈ ಸಂಬಂಧವಾಗಿ ಯಾವುದೇ ದೂರುಗಳಿದ್ದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ದೂರು ನೀಡಲು ತಿಳಿಸಿದ್ದಾರೆ.


    ತಾಲೂಕಿನಲ್ಲಿ 3 ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಮಾಣೀಕೃತ ಬಿತ್ತನೆ ಬೀಜಗಳಾದ ಮುಸುಕಿನ ಜೋಳ(ಜಿಕೆ 3059, ಜಿಕೆ 3218, 30807, ಬಿಆರ್8135) ಅಲಸಂದೆ (ಡಿಸಿ 15), ಹೆಸರು(ಡಿಜಿಜಿವಿ2) ಗಳನ್ನು ಸಬ್ಸಿಡಿ ದರದಲ್ಲಿ ರೈತರಿಗೆ ನೀಡಲಾಗುತ್ತಿದೆ. ಪಹಣಿ ಹೊಂದಿರುವ ರೈತರು ಆಧಾರ್ ಸಂಖ್ಯೆಯನ್ನು ನೀಡಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts