More

    ದೊಡ್ಡಮ್ಮ ಜಲದುರ್ಗಮ್ಮ ದೇವಿ ಅದ್ದೂರಿ ಉತ್ಸವ

    ಶಿವಮೊಗ್ಗ: ಹೊಸಮನೆ ಬಡಾವಣೆಯ ದೊಡ್ಡಮ್ಮ ಜಲದುರ್ಗಮ್ಮ ದೇವಿ ಜಾತ್ರಾ ಮಹೋತ್ಸವ ಹಾಗೂ ಕೆಂಡಾರ್ಚನೆ ಬುಧವಾರ ಅದ್ದೂರಿಯಾಗಿ ನೆರವೇರಿತು.

    ದೊಡ್ಡಮ್ಮ ಜಲದುರ್ಗಮ್ಮ ಗಂಗಮ್ಮ ದೇವಿಯರನ್ನು ಉತ್ಸವದಲ್ಲಿ ಮಂಟಪದಿಂದ ಹೊಸಮನೆ ಬಡಾವಣೆಯ ದೊಡ್ಡಮ್ಮ ದೇವಸ್ಥಾನಕ್ಕೆ ಕರೆತರಲಾಯಿತು. ಮೆರವಣಿಗೆಯಲ್ಲಿ ಕಲಾತಂಡಗಳು ಭಾಗವಹಿಸಿದ್ದವು. ಮಹಿಳೆಯರು ಸಂಭ್ರಮದಿಂದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
    ಹೊಸಮನೆ ಬಡಾವಣೆಯಲ್ಲಿರುವ ಈ ದೇವಸ್ಥಾನಕ್ಕೆ ಸುಮಾರು 150 ವರ್ಷಗಳ ಇತಿಹಾಸವಿದೆ. ಜಲದುರ್ಗಮ್ಮ ದೇವಿ 24 ಮನೆ ಸಾಧುಶೆಟ್ಟಿ ಸಮುದಾಯದ ಕುಲದೇವತೆಯೂ ಹೌದು. ಆ ಸಮುದಾಯದ ಬಹುತೇಕ ಜನ ಜಾತ್ರೆಯಲ್ಲಿ ಭಾಗವಹಿಸಿದ್ದರು. ದೊಡ್ಡಮ್ಮ ಜಲದುರ್ಗಮ್ಮ ದೇವಿ ಕೆಂಡದಾರ್ಚನೆ ಮಹೋತ್ಸವಕ್ಕೆ ಕಲ್ಲತ್ತಿಗಿರಿಯಿಂದ ಪಾದಯಾತ್ರೆ ಮೂಲಕ ಗಂಗೆಯನ್ನು ತರಲಾಗಿತ್ತು.
    ಜಾತ್ರೆ ಅಂಗವಾಗಿ ದೇವಸ್ಥಾನದಲ್ಲಿ ಚಂಡಿಕಾಯಾಗ, ಮಹಾಪೂಜೆ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ವಿವಿಧೆಡೆಯಿಂದ ಕೆಂಡಾರ್ಚನೆಗೆ ಆಗಮಿಸಿದ್ದ ಭಕ್ತರು ಹರಕೆ ತೀರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts