More

    ದೇಶದ ಅಭಿವೃದ್ಧಿಗೆ ಇಂದಿರಾಗಾಂಧಿ ಕೊಡುಗೆ ಅಪಾರ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ

    ಸಾಗರ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶಕ್ಕೆ ನೀಡಿದ ಕೊಡುಗೆ ದೊಡ್ಡದು. ಇಂದಿನ ಯುವ ರಾಜಕಾರಣಿಗಳು ಇಂದಿರಾ ಗಾಂಧಿ ಅವರ ವಿಚಾರಧಾರೆಗಳು ಮತ್ತು ಆಡಳಿತ ಪಕ್ವತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
    ಗಾಂಧಿ ಮಂದಿರದಲ್ಲಿ ಸೋಮವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆಯಲ್ಲಿ ಮಾತನಾಡಿ, ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಪ್ರತಿಷ್ಠಾಪನೆಗೆ ಅರ್ಹನಿಶಿ ಕೆಲಸ ಮಾಡಿದವರು. 20 ಅಂಶದ ಕಾರ್ಯಕ್ರಮದ ಮೂಲಕ ಬಡತನ ನಿವಾರಣೆಗೆ ತಮ್ಮದೇ ರೀತಿಯಲ್ಲಿ ಅವರು ಶ್ರಮಿಸಿದ್ದಾರೆ. ದೇಶವನ್ನು ಅಭ್ಯುದಯ ಪಥದತ್ತ ತೆಗೆದುಕೊಂಡು ಹೋಗುವಲ್ಲಿ ಇಂದಿರಾ ಅವರ ಕೊಡುಗೆ ಅವಿಸ್ಮರಣೀಯ ಎಂದರು.
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಬಹುತ್ವದಲ್ಲಿ ಏಕತೆಯನ್ನು ತರುವ ಪ್ರಯತ್ನ ಮಾಡಿದವರು ಇಂದಿರಾ ಗಾಂಧಿ. ಅವರು ಪ್ರಧಾನಿಯಾಗಿದ್ದಾಗ ಪಂಜಾಬ್ ರಾಜ್ಯ ಭಾರತದಿಂದ ಕೈತಪ್ಪಿ ಹೋಗುವುದನ್ನು ತಪ್ಪಿಸಿದ್ದರು. ಇದರ ಸೇಡಿಗಾಗಿ ಅವರನ್ನು ಹತ್ಯೆ ಮಾಡಲಾಗಿತ್ತು. ಬಡವರಿಗೆ ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದಾಗ ನೀಡಿದ ಕಾರ್ಯಕ್ರಮ ಇಂದಿಗೂ ಅಚ್ಚಳಿಯದೆ ದಾಖಲಾಗಿದೆ. ಸಮಸಮಾಜದ ನಿರ್ಮಾಣಕ್ಕೆ ಇಂದಿರಾ ಗಾಂಧಿಯವರ ಕೊಡುಗೆ ದೊಡ್ಡದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts