More

    ದೇಶದ ಅತಿ ಉದ್ದದ ರೈಲು ಸುರಂಗ ಮಾರ್ಗ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕದ ಶರಣಪ್ಪ ಯಲಾಲ್​ ಸಾರಥ್ಯ

    ರೇವಣಸಿದ್ದಪ್ಪ ಪಾಟೀಲ್ ಬೀದರ್
    ಜಮ್ಮು-ಕಾಶ್ಮೀರದಲ್ಲಿ ದೇಶದ ಅತಿ ಉದ್ದದ ರೈಲು ಸುರಂಗ ಮಾರ್ಗ ಸಂಚಾರಕ್ಕೆ ಸಿದ್ಧವಾಗುತ್ತಿದೆ. ಈ ಮಾರ್ಗ ನಿಮರ್ಿಸಿದ ತಂತ್ರಜ್ಞರ ತಂಡದ ಮುಖ್ಯಸ್ಥ ಕಲ್ಯಾಣ ಕನರ್ಾಟಕ ಭಾಗದವರು ಎಂಬುದು ವಿಶೇಷ.

    ಬೀದರ್ನಲ್ಲಿ ವ್ಯಾಸಂಗ ಮಾಡಿದ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಬೆನಕೆಪಳ್ಳಿ ನಿವಾಸಿಯಾದ ಶರಣಪ್ಪ ಯಲಾಲ್ ಸುರಂಗ ಮಾರ್ಗದ ತಂತ್ರಜ್ಞರ ತಂಡದ ಮುಖ್ಯಸ್ಥ. ಜಮ್ಮು-ಕಾಶ್ಮೀರದ ಕತ್ರಾ-ಬನಿಹಾಲ್ ವಿಭಾಗದ ಸಂಬರ್ ಮತ್ತು ಅಪರ್ಿಂಚಲ್ ಸ್ಟೇಷನ್ ನಡುವಿನ ಸುರಂಗಕ್ಕೆ ದೇಶದ ಅತಿ ಉದ್ದದ ಮಾರ್ಗ ಎಂಬ ಹೆಗ್ಗಳಿಕೆ ಹೊಂದಿದೆ. ಇದನ್ನು ನಿಮರ್ಿಸುತ್ತಿರುವ ತಂತ್ರಜ್ಞರ ತಂಡವನ್ನು ಯಲಾಲ್ ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ಕಲ್ಯಾಣ ಕನರ್ಾಟಕಕ್ಕೆ ಹೆಮ್ಮೆ ವಿಷಯ.

    12.758 ಕಿಲೋ ಮೀಟರ್ ಉದ್ದದ ಸುರಂಗ ಮಾರ್ಗ ಕಾಮಗಾರಿಯನ್ನು ಹಿಂದುಸ್ತಾನ್ ಕನ್ಸ್ಟ್ರಕ್ಶನ್ ಮಾಡುತ್ತಿದ್ದು, ಈ ಕನ್ಸ್ಟ್ರಕ್ಶನ್ ಕಂಪನಿ ತಂತ್ರಜ್ಞರ ತಂಡವನ್ನು 15 ವರ್ಷಗಳಿಂದ ಯಲಾಲ್ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ತಂಡದಲ್ಲಿ 100 ಇಂಜಿನಿಯರ್, 700 ಕಾಮರ್ಿಕರಿದ್ದಾರೆ.

    ಈ ಮೊದಲು ದೇಶದ ಅತಿ ಉದ್ದದ ಮಾರ್ಗವಾಗಿದ್ದ ಜಮ್ಮು-ಕಾಶ್ಮೀರದ ಬನಿಹಾಲ್-ಕಾಜಿಗುಂಡ್ ನಡುವಿನ 11.20 ಕಿ.ಮೀ ಸುರಂಗವನ್ನು ಸಹ ಹಿಂದುಸ್ತಾನ್ ಕನ್ಸ್ಟ್ರಕ್ಶನ್ ಮಾಡಿದ್ದು, ಈ ಕಾಮಗಾರಿಯೂ ಶರಣಪ್ಪ ಸಾರಥ್ಯದಲ್ಲೇ ಆಗಿದೆ. ಇದೀಗ ಮತ್ತೊಂದು ಸಾಧನೆಗೆ ಯಲಾಲ್ ಟೀಮ್ ಮುಂದಾಗಿದೆ.

    ಸ್ವಗ್ರಾಮ ಚಿಂಚೋಳಿ ತಾಲೂಕಿನ ಬೆನಕೆಪಳ್ಳಿಯಲ್ಲಿ 1ರಿಂದ 4ನೇ ತರಗತಿ ಕಲಿತಿರುವ ಶರಣಪ್ಪ ಯಲಾಲ್, 5ರಿಂದ 10ನೇ ತರಗತಿ ಐನಾಪುರದಲ್ಲಿ ಓದಿದ್ದಾರೆ. ಬೀದರ್ನ ಸಕರ್ಾರಿ ಕಾಲೇಜಿನಲ್ಲಿ ಪಾಲಿಟೆಕ್ನಿಕ್ ಅಭ್ಯಸಿಸಿರುವ ಯಲಾಲ್ ಅವರು, ದೆಹಲಿಯ ಸಕರ್ಾರಿ ಕಾಲೇಜಿನಲ್ಲಿ ಬಿ.ಟೆಕ್ ಮುಗಿಸಿದ್ದಾರೆ.

    ಸಂಬರ್ ಮತ್ತು ಅಪರ್ಿಂಚಲ್ ನಡುವಿನ ಈ ಸುರಂಗ ಮಾರ್ಗ ಕಾಮಗಾರಿ 2013ರಲ್ಲಿ ಆರಂಭಿಸಲಾಗಿದೆ. ಸುರಂಗ ಕೊರೆಯುವ ಕೆಲಸ ಪೂರ್ಣಗೊಂಡಿದ್ದು, ೈನಲ್ ಟಚಪ್ ಕೆಲಸ ನಡೆಯುತ್ತಿದೆ. ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಟನಲ್ ಮೇಲ್ಭಾಗದಲ್ಲಿ 1.2 ಕಿ.ಮೀ ಗುಡ್ಡ ಇದ್ದು, ಸೂಕ್ಷ್ಮತೆಯಿಂದ ಕೆಲಸ ನಿರ್ವಹಿಸಬೇಕಾಗಿದೆ. ಕೆಲಸಗಳ ನಡುವೆ ಅವಘಡ ಸಂಭವಿಸಿದರೂ ಯಾವುದೇ ಜೀವಹಾನಿ ಆಗದಿರುವುದು ವಿಶೇಷ.

    ಸುರಂಗದಲ್ಲಿ ಎರಡು ಟನಲ್ಗಳಿವೆ. ಒಂದು ರೈಲು ಸಂಚಾರಕ್ಕೆ, ಇನ್ನೊಂದು ಸಂರಕ್ಷಣಾ ಮಾರ್ಗವಾಗಿದೆ. ರೈಲು ಅವಘಡ ಸಂಭವಿಸಿದ್ದಲ್ಲಿ ತುತರ್ಾಗಿ ಹೊರಬರಲು ಇನ್ನೊಂದು ಟನಲ್ ನಿಮರ್ಿಸುತ್ತಿರುವುದು ವಿಶೇಷ. ಹತ್ತು ವರ್ಷದಿಂದ ಕಾಮಗಾರಿ ನಡೆಯುತ್ತಿದ್ದು, ಡಿಸೆಂಬರ್ ಒಳಗೆ ಮುಗಿಸುವುದಾಗಿ ಯಲಾಲ್ ವಿಜಯವಾಣಿಗೆ ತಿಳಿಸಿದ್ದಾರೆ.

    ಸರ್ಕಾರಿ ನೌಕರಿ ಬಿಟ್ಟು ಪ್ರತಿಭೆ ತೋರಿಸಿದರು: ಸರ್ಕಾರಿ ನೌಕರಿ ಸಿಕ್ಕರೆ ಸಾಕು. ಅದರಲ್ಲೂ ಕೇಂದ್ರ ಸಕರ್ಾರದ ಅಧೀನದಲ್ಲಿದ್ದರೆ ಮತ್ತಷ್ಟು ಉತ್ತಮ ಎನ್ನುವಂಥ ಕಾಲದಲ್ಲಿ ಶರಣಪ್ಪ ಅವರು ಸರ್ಕಾರಿ ನೌಕರಿಗೆ ಗುಡ್ಬೈ ಹೇಳಿ ಖಾಸಕಿ ಕಂಪನಿ ಮೂಲಕ ತನ್ನಲ್ಲಿರುವ ಪ್ರತಿಭೆಯನ್ನು ದೇಶಕ್ಕೆ ತೋರಿಸಿಕೊಟ್ಟಿದ್ದಾರೆ. ಶರಣಪ್ಪ ಬಿ.ಟೆಕ್ ಮುಗಿಸಿದ ನಂತರ ಕೆಲ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ್ದು, ಬಳಿಕ ಕೇಂದ್ರ ಸಕರ್ಾರದ ಜಲವಿದ್ಯುತ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು. ಏಳು ವರ್ಷ ಕೆಲಸ ನಿರ್ವಹಿಸಿದ ಯಲಾಲ್ ಅವರು ನೌಕರಿಗೆ ಗುಡ್ಬೈ ಹೇಳಿ ಹಿಂದುಸ್ತಾನ್ ಕನ್ಸ್ಟ್ರಕ್ಷನ್ ಕಂಪನಿಗೆ ಸೇರಿದರು.

    ಇದು ರಾಜ್ಯದ ದೊಡ್ಡ ರೈಲ್ವೆ ಸುರಂಗ: ದೇಶದ ಅತಿ ಉದ್ದದ ರೈಲು ಮಾರ್ಗ ಜಮ್ಮು-ಕಾಶ್ಮೀರದಲ್ಲಿ ನಿಮರ್ಾಣವಾಗುತ್ತಿದ್ದರೆ, ರಾಜ್ಯದಲ್ಲಿ ಅತಿ ಉದ್ದದ ರೈಲು ಸುರಂಗ ಇರೋದು ಬೀದರ್-ಕಲಬುರಗಿ ರೈಲ್ವೆ ಮಾರ್ಗದಲ್ಲಿ. ಕಲಬುರಗಿ ಜಿಲ್ಲೆಯ ಕಮಲಾಪುರ ಬಳಿಯ ಮರಗುತ್ತಿ ಸುರಂಗ (ಟನಲ್) ಹಲವು ವೈಶಿಷ್ಟೃಗಳಿಂದ ಕೂಡಿದೆ. 1.67 ಕಿಮೀ ಉದ್ದ ಹಾಗೂ 6.70 ಮೀ. ಎತ್ತರದ ಈ ಸುರಂಗವನ್ನು 2017ರಲ್ಲಿ ಲೋಕಾರ್ಪಣೆ ಮಾಡಲಾಗಿದೆ. 2014ರ ಮಾಚರ್್ನಲ್ಲಿ ಕೆಲಸ ಆರಂಭವಾಗಿದ್ದು, ನಿತ್ಯ 200 ಕಾಮರ್ಿಕರಿಂದ ಮೂರೂವರೆ ವರ್ಷದಲ್ಲಿ ಪೂರ್ಣಗೊಳಿಸಲಾಗಿದೆ. ಸುರಂಗ ಮಾರ್ಗದಲ್ಲಿ ಕೇವಲ ಒಂದು ಹಳಿ ಅಳವಡಿಸಲಾಗಿದೆ.

    ದೇಶದ ಅತಿ ಉದ್ದದ ರೈಲು ಸುರಂಗ ಮಾರ್ಗ ನಿಮರ್ಿಸುವ ತಂತ್ರಜ್ಞರ ತಂಡದ ಜವಾಬ್ದಾರಿ ನಾನು ವಹಿಸಿಕೊಂಡಿರುವುದು ಖುಷಿ ತಂದಿದೆ. ಈ ತಂಡದಲ್ಲಿ ದೇಶದ ನಾನಾ ಭಾಗಗಳ ಇಂಜಿನಿಯರ್, ಕಾಮರ್ಿಕರು ಇದ್ದಾರೆ. ನಮ್ಮ ಯೋಜನೆಯಂತೆ ಡಿಸೆಂಬರ್ ಒಳಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ.
    | ಶರಣಪ್ಪ ಯಲಾಲ್, ರೈಲು ಸುರಂಗ ಮಾರ್ಗದ ತಂತ್ರಜ್ಞರ ತಂಡದ ಮುಖ್ಯಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts