More

    ರೈಲು ನಿಲುಗಡೆಗೆ ಸಚಿವರಿಗೆ ಮನವಿ

    ಇಂಡಿ: ತಾಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದ ರೈಲು ನಿಲ್ದಾಣದಲ್ಲಿ ಬಸವ ಎಕ್ಸಪ್ರೆಸ್ ಹಾಗೂ ಗೋಳಗುಮ್ಮಟ ಎಕ್ಸಪ್ರೆಸ್ ರೈಲುಗಳನ್ನು ನಿಲುಗಡೆ ಮಾಡಬೇಕು ಎಂಬ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಬಂಥನಾಳದ ಡಾ. ವೃಷಭಲಿಂಗ ಮಹಾಶಿವಯೋಗಿಗಳು ಹಾಗೂ ನೆರೆಯ ಮಹಾರಾಷ್ಟ್ರ ರಾಜ್ಯದ ಸಂಸದ ಡಾ. ಜಯಸಿದ್ದೇಶ್ವರ ಸ್ವಾಮೀಜಿ ನೇತೃತ್ವದ ನಿಯೋಗ ಇತ್ತೀಚೆಗೆ ದೆಹಲಿಗೆ ತೆರಳಿ ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ರಾವಸಾಹೇಬ ದಾದಾರಾವ್ ಧನ್‌ವೆ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

    ಈ ಸಂದರ್ಭದಲ್ಲಿ ನಿಯೋಗದ ನೇತೃತ್ವ ವಹಿಸಿದ್ದ ಬಂಥನಾಳದ ಪೂಜ್ಯ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳು ಮಾತನಾಡಿ, ತಾಲೂಕಿನ ಸುಕ್ಷೇತ್ರ ಲಚ್ಯಾಣದಲ್ಲಿ ಪ್ರಸಿದ್ಧ ಧಾರ್ಮಿಕ ಸ್ಥಳವಿದೆ. ಶಿಕ್ಷಣ ಕ್ಷೇತ್ರವು ಇದಾಗಿದೆ.

    ಈ ಕ್ಷೇತ್ರದ ಸಿದ್ಧಲಿಂಗ ಮಹಾರಾಜರ ದರ್ಶನಕ್ಕೆ ದೂರದದಿಂದ ನಿತ್ಯ ನೂರಾರು ಪ್ರಯಾಣಿಕರು ಬರುತ್ತಾರೆ. ಇಲ್ಲಿನ ಕಮರಿಮಠದ ಕೂಗಳತೆಯ ದೂರದಲ್ಲಿರುವ ರೈಲು ನಿಲ್ದಾಣದ ಮೂಲಕ ನಿತ್ಯ ಬಸವ ಹಾಗೂ ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲು ಸಂಚರಿಸುತ್ತವೆ.

    ಆದರೆ ಇಲ್ಲಿ ನಿಲುಗಡೆಯಾಗುತ್ತಿಲ್ಲ. ಇದರಿಂದ ದೂರದಿಂದ ಬಂದ ಭಕ್ತರು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಲಚ್ಯಾಣದಲ್ಲಿ ರೈಲು ನಿಲುಗಡೆ ಮಾಡಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು ಎಂದರು.

    ನೆರೆಯ ಮಹಾರಾಷ್ಟ್ರ ರಾಜ್ಯದ ಸಂಸದ ಡಾ. ಜಯಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ನಿರಂತರ ದಾಸೋಹದ ಕೇಂದ್ರ ಹೊಂದಿದ ಆರಾಧ್ಯದೇವ ಸಿದ್ಧಲಿಂಗ ಮಹಾರಾಜರ ಮಠವು ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ನಿತ್ಯ ನೂರಾರು ಸಾಧು ಸಂತರು, ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

    ಎಲ್ಲ ಪ್ಯಾಸೆಂಜರ್ ರೈಲುಗಳು ಇಲ್ಲಿ ನಿತ್ಯ ನಿಲುಗಡೆಯಾಗುತ್ತವೆ. ಆದರೆ ಎಕ್ಸ್‌ಪ್ರೆಸ್ ರೈಲು ನಿಲುಗಡೆಯಾಗದ ಕಾರಣ ದೂರದಿಂದ ಬರುವ ಭಕ್ತರು, ವಿದ್ಯಾರ್ಥಿಗಳು ಬಹುದಿನಗಳಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೆ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಮಾಡಬೇಕು ಎಂದು ವಿನಂತಿಸಿದರು.

    ಮನವಿಗೆ ಸ್ಪಂದಿಸಿದ ಕೇಂದ್ರದ ರೈಲ್ವೆ ರಾಜ್ಯ ಸಚಿವ ರಾವಸಾಹೇಬ ದಾದಾರಾವ್ ಧನ್‌ವೆ ಪಾಟೀಲ ಮಾತನಾಡಿ, ಮುಂಬರುವ ದಿನಗಳಲ್ಲಿ ಲಚ್ಯಾಣ ರೈಲು ನಿಲ್ದಾಣದಲ್ಲಿ ಬಸವ ಹಾಗೂ ಗೋಳಗುಮ್ಮಟ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ವಿಶೇಷ ಪ್ರಯತ್ನ ಮಾಡುವ ಭರವಸೆ ನೀಡಿದರು.

    ಲಚ್ಯಾಣ ಗ್ರಾಮದ ನಿವೃತ್ತ ಪ್ರಾಚಾರ್ಯ ಎ.ಪಿ. ಕಾಗವಾಡಕರ, ಗ್ರಾಪಂ ಮಾಜಿ ಸದಸ್ಯ, ಎಸ್‌ಕೆಎಂಪಿಎಸ್ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಗೌಡಪ್ಪ ಬಿರಾದಾರ, ಕಿರಾನಂದ ಮುಜಗೊಂಡ, ವಿಶ್ವನಾಥ ಪೋಲಾಸಿ ಇತರರು ಮನವಿ ಸಲ್ಲಿಸುವ ಸಮಯದಲ್ಲಿರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts